ಅಮೇರಿಕದ ಪ್ರಸಿದ್ಧ ಬರಹಗಾರ್ತಿ ಲಾರ ಇಂಗಲ್ಸ್ ವೈಲ್ಡರ್ Little House on the Prairie ಅನ್ನುವ ಸರಣಿಯ ಒಂಬತ್ತು ಪುಸ್ತಕಗಳ ಮೂಲಕ 19ನೇ ಶತಮಾನದ ಅಮೇರಿಕದಲ್ಲಿನ ಜೀವನವನ್ನು ಕಣ್ಣಿಗೆ ಕಟ್ಟುವಂತೆ ಮಕ್ಕಳಿಗಾಗಿ ಬರೆದವರು. ಈ ಸರಣಿ ಜಗತ್ತಿನ 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಈ ಅದ್ಭುತ ಸರಣಿಯ ಮೊದಲ ಎಂಟು ಭಾಗಗಳನ್ನು ಕನ್ನಡಕ್ಕೆ ತಂದವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ದುಡಿದ ಸಾಹಿತಿ ಎಸ್. ಅನಂತನಾರಾಯಣ ಅವರು. ಸರಣಿಯ ಕೊನೆಯ ಭಾಗವನ್ನು ಕನ್ನಡಕ್ಕೆ ಅನುವಾದಿಸಿದ್ದು ಯುವ ಲೇಖಕಿ ಈಶಾನ್ಯೆ ಕೆ.ಪಿ.
ಒಂದು ಕಾಲಕ್ಕೆ ಕನ್ನಡದ ಮಕ್ಕಳನ್ನು ಒಂದು ಅದ್ಭುತ ಲೋಕಕ್ಕೆ ಕರೆದೊಯ್ದ ಈ ಮಾಂತ್ರಿಕ ಸರಣಿ ಈಗ ಇಬುಕ್ ರೂಪದಲ್ಲಿ ಮೈಲ್ಯಾಂಗ್ ಆಪ್ ಅಲ್ಲಿ ದೊರೆಯುತ್ತಿದೆ. ತಮ್ಮ ಚಿಕ್ಕಂದಿನಲ್ಲಿ ಈ ಸರಣಿಯನ್ನು ಓದಿ ಸಂತಸ ಅನುಭವಿಸಿದ, ಈಗ ಈ ಸರಣಿಯನ್ನು ಇಬುಕ್ ರೂಪದಲ್ಲಿ ತರುವತ್ತಲೂ ಶ್ರಮವಹಿಸಿದ ಸುಸ್ಮಿತಾ ಮತ್ತು ಈಶಾನ್ಯೆ ಅವರು ಇಲ್ಲಿ ತಮ್ಮ ಚಿಕ್ಕಂದಿನ ನೆನಪುಗಳನ್ನು, ಈ ಕತೆಗಳನ್ನು ಮಕ್ಕಳು ಯಾಕೆ ಓದಬೇಕು ಅನ್ನುವುದನ್ನು ನೋಡುಗರೊಡನೆ ಹಂಚಿಕೊಂಡಿದ್ದಾರೆ.
ಲಾರಾ ಇಂಗಲ್ಸ್ ವೈಲ್ಡರ್ ಅವರ ಕಾದಂಬರಿಗಳ ಸರಣಿಯಲ್ಲಿ ಇದು ಐದನೆಯ ಪುಸ್ತಕ.
ಪುಟಗಳು: 240
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !
ಅಮೇರಿಕದ ಈ ಕತೆಗಳನ್ನು ನಿಮ್ಮ ಮಕ್ಕಳು ಓದಲೇಬೇಕು !