ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಕಾರಂತರ ಕಾದಂಬರಿಗಳಲ್ಲಿ ವ್ಯಕ್ತವಾಗುವ ಗಂಡುಹೆಣ್ಣಿನ ಸಂಬಂಧದ ಪ್ರಶ್ನೆ ಮತ್ತು ಆಧುನೀಕರಣದ ಪ್ರಕ್ರಿಯೆ - ಇವೆರಡು ವಸ್ತುಗಳನ್ನು ಪ್ರತ್ಯೇಕವಾಗಿಟ್ಟುಕೊಂಡು ಈ ಪುಸ್ತಕವು ಕಾರಂತ ಚಿಂತನೆಯ ಜಿಜ್ಞಾಸೆಗೆ ಕೈಹಾಕುತ್ತದೆ. ಇವೆರಡು ಪ್ರಶ್ನೆಗಳು ಕಾರಂತ ಕೃತಿಲೋಕದ ಎರಡು ಪೂರಕ ಆಯಾಮಗಳನ್ನು ಪ್ರತಿನಿಧಿಸುವಂಥವು - ಒಂದು, ಗಂಡುಹೆಣ್ಣಿನ ಸಂಬಂಧದ ಆಂತರಿಕ ಜಗತ್ತು; ಇನ್ನೊಂದು, ವಸಾಹತುಶಾಹಿ ಇತಿಹಾಸವನ್ನು ಹಿನ್ನೆಲೆಯಾಗಿಟ್ಟುಕೊಂಡ ವಿಶಾಲ ಹೊರಜಗತ್ತು. ಆದರೆ, ಇನ್ನೊಂದು ರೀತಿಯಿಂದ ನೋಡಿದರೆ, ಇವೆರಡೂ ಪರಸ್ಪರವನ್ನು ಬಿಂಬಿಸುವ ಕನ್ನಡಿಗಳೂ ಹೌದು. ಹೀಗೆ ‘ವೈಯಕ್ತಿಕ’ ಮತ್ತು ‘ಸಾಮಾಜಿಕ’ ರಾಜಕಾರಣಗಳ ಸೃಜನಶೀಲ ಮುಖಾಮುಖಿಯಲ್ಲಿ ಕಾರಂತರ ಕಾದಂಬರಿಗಳ ದರ್ಶನ ರೂಪುಗೊಳ್ಳುವ ಬಗೆಯನ್ನು ಪ್ರಸ್ತುತ ಬರಹವು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ. ಈ ಮೂಲಕ ಟಿ.ಪಿ. ಅಶೋಕ ಅವರು ಕೃತಿನಿಷ್ಠ ಮತ್ತು ಸಂಸ್ಕೃತಿಸ್ಪಂದಿ ವಿಮರ್ಶೆಗಳ ನಡುವಿನ ಒಳಸಂಬಂಧವನ್ನು ಹೆಣೆಯಲು ಸಫಲರಾಗಿದ್ದಾರೆ.
ABOUT THE AUTHOR
Prof T P Ashoka is a well known critic and scholar in Kannada who has been teaching literature, film and theater for the last forty years. Apart from teaching in an autonomous college, he has organized and taught in more than three hundred and fifty short term workshops on literature, film and theater all over Karnataka. He is a well known columnist and translator as well. Prof Ashoka has authored more than thirty books which include eighteen collections of critical essays, several monographs and full-length studies of eminent Kannada writers like Kuvempu, Masti Venkatesha Iyengar, Shivarama Karantha, U R Ananthamurthy, Tejaswi, Venkatesha Murthy and Vaidehi. He has received honours, awards and prizes from various prestigious institutions like Karnataka Sahitya Academy, Kannada Sahitya Parishath, Mysore University, Govinda Pai Memorial Research Center, Aryabhata Sandesha and Masthi Pratishthana.
ಪುಟಗಳು: 193
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !