ಪ್ರಕಾಶಕರು: ಛಂದ ಪುಸ್ತಕ
Publisher: Chanda pusthaka
ದಖನ್ನಿನ ಇತಿಹಾಸ ಎಂದೂ ಕಪ್ಪು ಬಿಳುಪಿನದ್ದಾಗಿರಲಿಲ್ಲ. ಇಲ್ಲಿ ಆಳಿದ ಹಲವು ರಾಜಮನೆತನಗಳು ಅಧಿಕಾರಕ್ಕಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ಬಡಿದಾಡಿದ್ದು ಎಷ್ಟು ನಿಜವೋ ಈ ನೆಲದ ಇತಿಹಾಸ, ಸಾಮಾಜಿಕ ರಚನೆ, ಕಲೆ, ಸಂಸ್ಕೃತಿಯ ಒಂದು ಆಕೃತಿ ರೂಪುಗೊಳ್ಳಲು ಕಾರಣರಾದದ್ದು ಅಷ್ಟೇ ನಿಜ. ಇವರು ಒಳ್ಳೆಯವರು, ಇವರು ಕೆಟ್ಟವರು ಅನ್ನುವ ಬೈನರಿಯಲ್ಲಿ ನೋಡದೇ ದಖನ್ನಿನ ನೆಲವನ್ನು ಆಳಿದ ಎಲ್ಲ ಸಾಮ್ರಾಜ್ಯಗಳು, ಅವುಗಳ ರಾಜಕೀಯ, ರಾಜತಾಂತ್ರಿಕತೆ, ಸೈನ್ಯ, ಸಮಾಜ ಎಲ್ಲವನ್ನೂ ಒಂದು ಹೊಸ ನೆಲೆಯಲ್ಲಿ ನೋಡುವ ಕೆಲಸ ಮನು ಪಿಳ್ಳೈ ಅವರ ಇಂಗ್ಲಿಷ್ ಕೃತಿ "ರೆಬೆಲ್ ಸುಲ್ತಾನ್" ಮಾಡಿದೆ. ಅದನ್ನು ಅಷ್ಟೇ ಸಶಕ್ತವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಭರವಸೆಯ ಯುವ ಬರಹಗಾರ್ತಿ ಸಂಯುಕ್ತಾ ಪುಲಿಗಲ್. ಛಂದ ಪ್ರಕಾಶನದಿಂದ ಹೊರ ಬಂದ ಈ ಕೃತಿ ಈಗ ಮೈಲ್ಯಾಂಗ್ ಅಲ್ಲಿ ಇಬುಕ್ ರೂಪದಲ್ಲಿ ನಿಮ್ಮ ಮೊಬೈಲಿನಲ್ಲೇ ಓದಬಹುದು.
ಮನು ಪುಣೆಯ ಫಗ್ರ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಡಾಕ್ಟರೇಟ್ ಪದವಿಯ ಅಧ್ಯಯನ ಮಾಡುತ್ತಿದ್ದಾರೆ.
ಬೆಂಗಳೂರಿನ ನಿವಾಸಿ. ಐಟಿ ಉದ್ಯೋಗಿ. ಕನ್ನಡ ಹಾಗೂ ಇಂಗ್ಲಿಷ್ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಓದು-ಬರಹ ಆಸಕ್ತಿ. ‘ಪರ್ವತದಲ್ಲಿ ಪವಾಡ’ ಎಂಬ ಅನುವಾದಿತ ಪುಸ್ತಕ ಹಾಗೂ ‘ಲ್ಯಾಪ್‍ಟಾಪ್ ಪರದೆಯಾಚೆಗೆ’ ಎಂಬ ಅಂಕಣ ಬರಹಗಳ ಪುಸ್ತಕವು ಪ್ರಕಟವಾಗಿದೆ. ಹಲವು ನಿಯತಕಾಲಿಕಗಳಲ್ಲಿ ವಿವಿಧ ವಿಷಯಗಳ ಕುರಿತಾದ ಲೇಖನಗಳನ್ನು ಪ್ರಕಟಿಸಿದ್ದಾರೆ.
ಪುಟಗಳು: 376
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !