ಪ್ರೊಫೆಸರ್ ಅಕ್ಕಿಹೆಬ್ಬಾಳು ನರಸಿಂಹಮೂರ್ತಿ ರಾವ್ ಅವರು ಪರಿಪಕ್ವತೆಗೆ, ಸುಸಂಸ್ಕೃತ ಅಭಿರುಚಿಗೆ ಮತ್ತೊಂದು ಹೆಸರು. ಅವರದು ವಿಸ್ತಾರವಾದ, ಆಳವಾದ ಪುಸ್ತಕಜ್ಞಾನ; ಮೂರು ಖಂಡಗಳಲ್ಲಿ ಬದುಕನ್ನು ಕಂಡಿರುವ ವೈವಿಧ್ಯಮಯವಾದ ಲೋಕಾನುಭವ ಅವರದು. ಡಾಕ್ಟರ್ ಮೂರ್ತಿರಾಯರು ತಮ್ಮ ವಿದ್ವತ್ತು, ತಿಳಿಹಾಸ್ಯ, ಸರಳತೆ ಮತ್ತು ತೆರೆದ ಮನಸ್ಸಿನಿಂದ ಎಲ್ಲ ಪೀಳಿಗೆಗಳ ಪ್ರೀತಿ, ಗೌರವಗಳನ್ನು ಗೆದ್ದುಕೊಂಡ ಹಿರಿಯರಾಗಿದ್ದಾರೆ. ಕನ್ನಡದಲ್ಲಿ ಲಲಿತಪ್ರಬಂಧಕ್ಕೆ ವಿಶಿಷ್ಟ ರೂಪ ಕೊಟ್ಟು, ಅದರ ಸಾಧ್ಯತೆಗಳನ್ನು ತೋರಿಸಿಕೊಟ್ಟ ಅವರು ಲಲಿತ ಪ್ರಬಂಧದ ಸಾಮ್ರಾಟರಾಗಿದ್ದಾರೆ.
ಪುಟಗಳು: 372
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !