ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಬದುಕು ಮುಗಿಯದ ಪಯಣ, ಅಲ್ಲಿ ಸೋಲಿಗಿಂತ ಗೆಲುವು ಮುಖ್ಯ ಎನ್ನುವುದೇ ನೇಮಿಚಂದ್ರ ಅವರು ಬರೆದ ಈ ಕೃತಿಯ ಮುಖ್ಯ ತಾತ್ಪರ್ಯ.
ಓದಿದವರು ಮತ್ತು ಬರೆದವರು:
ನೇಮಿಚಂದ್ರ
ನಿರ್ಮಾಣ ಸಹಾಯ : ಧ್ವನಿಧಾರೆ ತಂಡ
ಆಡಿಯೋ ಪುಸ್ತಕದ ಅವಧಿ : 4 ಗಂಟೆಗಳು 19 ನಿಮಿಷ
ಬದುಕು ಪ್ರೀತಿಯ ಈ ಸಂಕಲನ :
‘ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ ಹುಡುಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಮ್ಮಲ್ಲಿಯೇ ಇದೆ ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ.
‘ನಮ್ಮ ಚಿಂತನೆ, ವಿಚಾರ ಕ್ರಿಯೆಯ ನಡುವೆ ಸಾಮರಸ್ಯವಿರಬೇಕು. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ’ ಎಂಬ ಭರವಸೆಯ ಲೇಖನಗಳು ಇಲ್ಲಿವೆ.
ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ, ಕತೆಗಾರ್ತಿಯಾಗಿ, ಅಂಕಣಕಾರ್ತಿಯಾಗಿ ಪರಿಚಿತರು. ಇವರ 'ನೋವಿಗದ್ದಿದ ಕುಂಚ', ‘ಪೆರುವಿನ ಪವಿತ್ರ ಕಣಿವೆಯಲ್ಲಿ', ‘ಯಾದ್ ವಶೇಮ್', ‘ದುಡಿವ ಹಾದಿಯಲಿ ಜೊತೆಯಾಗಿ', ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು', ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು', ‘ಬದುಕು ಬದಲಿಸಿದ ಭಾವೇಶ್ ಭಾಟಿಯಾ', `ಬದುಕು ಬದಲಿಸಬಹುದು' (ಭಾಗ- ೧), ‘ಸೋಲೆಂಬುದು ಅಲ್ಪವಿರಾಮ’(ಬದುಕು ಬದಲಿಸಬಹುದು, ಭಾಗ-೩) ಮತ್ತು ‘ಸಂತಸ, ನನ್ನೆದೆಯ ಹಾಡು ಹಕ್ಕಿ’(ಬದುಕು ಬದಲಿಸಬಹುದು, ಭಾಗ-೪) ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
ಅಧ್ಯಾಯಗಳು
1. ಮರೆತು ಹೋಗದ ಮಹಾತ್ಮಾ
2. ಪರಿಹಾರ ಸರಳವಿದೆ
3. ಅಮೃತಬಳ್ಳಿಗೆ ಸಾವಿಲ್ಲ
4. ಸಾಲವೆಂಬ ಹುಲಿ ಸವಾರಿ
5. ಅರ್ಧದೇಹ ಪೂರ್ಣ ಸ್ಥೈರ್ಯ
6. ಖಾಲಿಯಾಗದೆ ಕಲಿಯಲಾರೆನು
7. ದೇವನು ನಗುವ ನಾಡಿನಲ್ಲಿ
8. ನಂಬಿದರೆ ಭಯವಿಲ್ಲ
9. ಮಾತೆಂಬ ದಿವ್ಯ ಔಷಧ
10. ಲಿಟಲ್ ಡೀಡ್ಸ್ ಆಫ್ ಕೈಂಡ್‌ನೆಸ್
11. ಕೊಟ್ಟು ನೋಡೋಣ ಕರುಣೆಯನ್ನು .
12. ಅಮ್ಮಂದಿರ ಕಷಾಯ
13. ಇರಲಿ ನಾಳೆಯು ನಾಳೆಗೆ
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.