ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಹಳೆಯ ವಿಕಲ್ಪಗಳಿಂದ ಬಿಡುಗಡೆಯ ಆಸೆ... ಒಂದು ಶತಮಾನದ ವೈಚಾರಿಕ ವಿಕಲ್ಪಗಳ ಹಿಡಿತದಿಂದ ಇಲ್ಲಿ ಪಾರಾಗಲು ಪ್ರಯತ್ನಿಸುತ್ತಿದ್ದೇನೆ. ಒಂದು: ಪಾಶ್ಚಿಮಾತ್ಯ ನಾಗರೀಕತೆಯೇ ಮಾನವ ಪ್ರಗತಿಯ ಶ್ರೇಷ್ಠರೂಪ ಎಂಬ ನಂಬಿಕೆ. ಮಾನವ ಪ್ರಗತಿಯ ಅಂತಿಮ ಅಳತೆಗೋಲು ಪಶ್ಚಿಮವೇ ಎಂಬ ನಂಬಿಕೆ ನಮ್ಮಲ್ಲಿ ಇಲ್ಲೂ ಭದ್ರವಾಗಿ ಕೂತಿರುವುದು ಮಾತ್ರವಲ್ಲ, ಅದು ಬೆಳೆಯುತ್ತಲೇ ಇದೆ... ಎರಡು: ಶೂದ್ರಾತಿಶೂದ್ರರಿಗೆ ಸ್ವಂತ ಸಾಂಸ್ಕೃತಿಕ ಬದುಕೇ ಇರಲಿಲ್ಲ ಎಂಬ ವಿಕಲ್ಪವೂ ನೂರು ವರ್ಷ್ಗಳಷ್ಟು ಹಳೆಯದು. ಕೆಲವು ಬಗೆಯ ಅಧಿಕಾರ, ಯಜಮಾನಿಕೆ, ಆತ್ಮವಿಕಾಸಗಳ ಪರಿಕಲ್ಪನೆಗಳಿಂದ ರೂಪುಗೊಂಡ ಕೀಳರಿಮೆ ಇದು... ಮೂರು: ಶಿಷ್ಟ ಮತ್ತು ಜನಪ್ರಿಯಗಳೆಂಬ ವ್ಯತ್ಯಾಸಗಳು ಸದೃಢ ಮತ್ತು ಸಾರ್ವಕಾಲೀನ ಎಂಬ ಇನ್ನೊಂದು ವಿಕಲ್ಪವೂ ಕನ್ನಡ ಪ್ರತಿಭೆಗೆ ಸಾಕಷ್ಟು ಹಾನಿಮಾಡಿದೆ... ಇದಕ್ಕಿಂತ ಹೆಚ್ಚಾಗಿ, ಕನ್ನಡ ಚಿಂತನೆಯನ್ನು ಸೀಮಿತಗೊಳಿಸಿರುವ ಸಂಗತಿ ಎಂದರೆ ಆಧುನಿಕರಲ್ಲಿ ಜನಪ್ರಿಯ ಕಲಾರೂಪಗಳ ಬಗ್ಗೆ ಬೇರೂರಿರುವ ತಾತ್ಸಾರ... ನಮ್ಮ ಸಾಂಸ್ಕೃತಿಕ ಅಧ್ಯಯನದಲ್ಲಿ ಎಲ್ಲ ಬಗೆಯ ದ್ವೈತೀಯ ಕಲ್ಪನೆಗಳಿಂದ ಮುಕ್ತವಾಗಬೇಕಿದೆ...
(ಮೊದಲ ಮುದ್ರಣಕ್ಕೆ ಬರೆದ ಲೇಖಕರ ಮುನ್ನುಡಿಯಿಂದ)
ಪುಟಗಳು: 553
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !