ಬರಹಗಾರರು: ಎಸ್ ದಿವಾಕರ್
ಕತೆ ಇಷ್ಟವಾಗದವರು ಇರಲಿಕ್ಕಿಲ್ಲ. ನಾವೆಲ್ಲ ಹೆಚ್ಚಾಗಿ ನಮ್ಮದೇ ಸುತ್ತಮುತ್ತಲಿನ ಕತೆಗಳನ್ನು ಕೇಳುತ್ತೇವೆ, ಓದುತ್ತೇವೆ. ಆದರೆ ಪ್ರಪಂಚದ ಬೇರೆ ಬೇರೆ ದೇಶ, ಭಾಷೆಗಳು, ಅಲ್ಲಿ ಬಂದಿರುವ ಕತೆಗಳು, ಅವು ತಿಳಿಸಿಕೊಡುವ ಆ ಸಮಾಜಗಳ ಪರಿಚಯವೂ ನಮಗೆ ಬೇಕಲ್ಲವೇ? ಕನ್ನಡದ ಹಿರಿಯ ಕತೆಗಾರ ಎಸ್.ದಿವಾಕರ್ ನೊಬೆಲ್ ಪ್ರಶಸ್ತಿ ಪಡೆದ ಪ್ರಪಂಚದ ಐವತ್ತು ಕತೆಗಳನ್ನು ಕನ್ನಡಕ್ಕೆ ""ಕಥಾ ಜಗತ್ತು"" ಅನ್ನುವ ಪುಸ್ತಕದ ಮೂಲಕ ತಂದಿದ್ದಾರೆ.
ಅದರ ಐದು ಭಾಗಗಳಲ್ಲಿ ಮೊದಲನೆಯ ಭಾಗ ಇಲ್ಲಿದೆ. ಇಲ್ಲಿ ಇರುವ ಹತ್ತು ಕತೆಗಳು: 1. ಬ್ಯೋನ್ ಸ್ಟರ್ನ್ ಬ್ಯೋರ್ನ್ ಸರ್ನ್ ಅವರ “ತಂದೆ” 2. ಹೆನ್ರಿಕ್ ಸಿಯೆನ್ ಕಿಯೆವಿಚ್ ಅವರ “ಅನಾಥ” 3. ರಡ್ ಯಾರ್ಡ್ ಕ್ಲಿಪಿಂಗ್ ಅವರ “ನಬೋತ್” 4. ಸೆಲ್ಮಾ ಲಾಗರ್ ಲಾಫ್ ಅವರ “ಒಂದು ಕಥೆಯ ಕಥೆ” 5. ಮೌರೀಸ್ ಮ್ಯಾಟರ್ ಲಿಂಕ್ ಅವರ “ನಿರಪರಾಧಿಗಳ ಕಗ್ಗೊಲೆ” 6. ಗೆರ್ ಹಾರ್ಟ್ ಹಾಪ್ಟ್ ಮನ್ ಅವರ “ಫ್ಲಾಗ್ ಮನ್ ಥಿಯೆಲ್” 7. ರವೀಂದ್ರನಾಥ ಠಾಕೂರ್ ಅವರ “ಸುಭಾ” 8. ಹೆನಗ್ರಿಕ್ ಪೊಂತೋಪ್ಪಿದಾನ್ ಅವರ “ಆ ಊರಿನಲ್ಲಿ” 9. ನುಟ್ ಹ್ಯಾಮ್ಸುನ್ ಅವರ “ಬದುಕು” 10. ಅನಾತೋಲ್ ಫ್ರಾನ್ಸ್ ಅವರ “ಹಳ್ಳಿಯ ಡಾಕ್ಟರೊಬ್ಬರ ಹಸ್ತಪ್ರತಿ”