ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ನಾವು ಕೆಲವೊಂದು ಕೆಲಸಗಳನ್ನು ಮಾಡಬೇಕೆಂದು ಮನಸ್ಸು ಮಾಡುತ್ತೇವೆ ಆದರೆ ಮಾಡುವುದಿಲ್ಲ. ಕೆಲವೊಂದು ಕೆಲಸಗಳನ್ನು ಇನ್ನು ಮುಂದೆ ಮಾಡಲೇಬಾರದೆಂದು ನಿರ್ಧರಿಸುತ್ತೇವೆ, ಆದರೆ ಬಿಡುವುದೇ ಇಲ್ಲ.ಯಾಕೆ ಹೀಗೆ, ಮನುಷ್ಯನ ಮನಸ್ಸು ಏಕೆ ದ್ವಂದ್ವದಲ್ಲಿ ಕೆಲಸ ಮಾಡುತ್ತದೆ? ನಿರ್ಧಾರ ಮಾಡಿದರೂ ಅದನ್ನು ಆಗಗೊಡದ ಶಕ್ತಿ ಯಾವುದು? ಬೆಳಗಿನ ಜಾವದಲ್ಲಿ ಏಳಬೇಕೆಂದು ನಿರ್ಧಾರ ಮಾಡುವವರು ನಾವೇ ಆದರೂ, ಬೆಳಿಗ್ಗೆ ಅಲಾರಾಂ ಹೊಡೆದುಕೊಳ್ಳುತ್ತಿದ್ದರೂ ಅದನ್ನು ನಿಲ್ಲಿಸಿ, ಇನ್ನೆರಡು ನಿಮಿಷ ಮಲಗಿಕೊಳ್ತೇನೆ ಎಂದು ನಿದ್ದೆ ಮಾಡುವ ಮನಸ್ಸು ಮಾಡುವವರು ನಾವೇ ಅಲ್ಲವೇ.
ಮಾನವನ ಈ ನಡವಳಿಕೆಗಳು ಹುಟ್ಟುವುದು ಹೇಗೆ, ಅವುಗಳ ಸಿದ್ಧಾಂತಗಳೇನು ಮತ್ತು ನಡವಳಿಕೆಗಳನ್ನು ನಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಹಲವಾರು ಶೋಧ ಗ್ರಂಥಗಳು ಲಭ್ಯವಿವೆ ಅವುಗಳಲ್ಲಿ ಚಾರ್ಲ್ಸ್ ಡ್ಯೂಹಿಗ್‍ನ ಹ್ಯಾಬಿಟ್ಸ್ ಎನ್ನುವ ಪುಸ್ತಕ ಬಹಳ ಜನಪ್ರಿಯವಾಯಿತು. ಚಾರ್ಲ್ಸ್ ವಿಚಾರಧಾರೆಯನ್ನು ಇನ್ನೂ ಮೇಲುಸ್ತರದ ಚಿಂತನೆಗೆ ಒಳಪಡಿಸಿ ಜೇಮ್ಸ್ ಕ್ಲಿಯರ್ ëಅಟಾಮಿಕ್ ಹ್ಯಾಬಿಟ್ಸ್í ಎನ್ನುವ ಪುಸ್ತಕವನ್ನು ಬರೆಯುತ್ತಾನೆ. ಇದರಲ್ಲಿ ನಡವಳಿಕೆಗಳು ಹುಟ್ಟುವ ಮತ್ತು ಬೆಳೆಯುವ ಮನೋವೈಜ್ಞಾನಿಕ ಹಾದಿಯನ್ನು ವಿವರಿಸುತ್ತಾನೆ. ನಡವಳಿಕೆಗಳನ್ನು ರೂಪಿಸಿಕೊಳ್ಳಲು ಜನರ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ವಿಧಾನಗಳನ್ನು ಬಹಳ ಸರಳವಾಗಿ ಹೇಳಿಕೊಡುತ್ತಾನೆ. ಈ ಪುಸ್ತಕ ಬಹಳ ಕಡಿಮೆ ಸಮಯದಲ್ಲಿ ಅತ್ಯಂತ ಜನಪ್ರಿಯವಾಗಿದ್ದಷ್ಟೇ ಅಲ್ಲ.ಲಕ್ಷಾಂತರ ಪ್ರತಿಗಳು ಮುದ್ರಣವಾದವು ಮತ್ತು ಜಗತ್ತಿನ ಅನೇಕ ಭಾಷೆಗಳಲ್ಲಿ ತರ್ಜುಮೆಗೊಂಡವೂ ಕೂಡ.
ಪುಟಗಳು: 136
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !