ಬರೆದವರು : ಶ್ವೇತ ಹಿರೇನಲ್ಲೂರು
ಓದಿದವರು : - ಧ್ವನಿಧಾರೆ ಮಿಡಿಯಾ ತಂಡ
ಆಡಿಯೋ ಪುಸ್ತಕದ ಅವಧಿ : 3 ಗಂಟೆ 32 ನಿಮಿಷ
ರೆಡ್ ಹೆಲ್ಮೆಟ್ ಒಂದು ಮಕ್ಕಳ ಪತ್ತೇದಾರಿ ಕಾದಂಬರಿ. ಉತ್ತರ ಕನ್ನಡ ಭಾಗದ ಕಡಲ ತೀರದಲ್ಲಿ ವಾಸವಾಗಿರುವ ಚಂದು ಮತ್ತು ಲೀನಾ ಎಂಬ ಇಬ್ಬರು ಹನ್ನೆರಡು ವರ್ಷ ವಯಸ್ಸಿನ ಮಕ್ಕಳ ಸಾಹಸಗಾಥೆ. ತಮ್ಮ ಊರಿನ ಕಡಲ ತೀರದಲ್ಲಿ ನಡೆಯುತ್ತಿದ್ದಂತಹ ಅನುಮಾನಾಸ್ಪದ ವ್ಯವಹಾರವನ್ನು ಕಂಡ ಮಕ್ಕಳು ಸುಮ್ಮನೆ ಕೂರದೆ ಅದರ ಜಾಡು ಹಿಡಿದು ಹೊರಡುತ್ತಾರೆ. ಏನು ಆ ಅವ್ಯವಹಾರ? ಇದರ ಹಿಂದೆ ಯಾರಿದ್ದಾರೆ? ಅವರ ಮುಂದಿನ ಉದ್ದೇಶ ಏನು? ಚಂದು ಮತ್ತು ಲೀನಾ ಕಳ್ಳರನ್ನು ಹಿಡಿಯುವುದರಲ್ಲಿ ಯಶಸ್ವಿಯಾಗುತ್ತಾರೆಯೇ? ಇದೆಲ್ಲವನ್ನೂ ತಿಳಿದುಕೊಳ್ಳಲು ರೆಡ್ ಹೆಲ್ಮೆಟ್ ಕಾದಂಬರಿಯನ್ನು ಖಂಡಿತ ಓದಿ. ಮಾಧ್ಯಮಿಕ ಹಾಗು ಪ್ರೌಢ ಶಾಲಾ ಮಕ್ಕಳಿಗೆ ಹೆಚ್ಚು ಸೂಕ್ತವಾದರೂ, ಮಕ್ಕಳ ಮನಸಿನ ದೊಡ್ಡವರಿಗೂ ಈ ಕಾದಂಬರಿ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.