ಪ್ರಕಾಶಕರು: ಕೃಷಿ ಮಾಧ್ಯಮ ಕೇಂದ್ರ
Publisher: Centre for Agricultural Media
ದೊಡ್ಡ ದೊಡ್ಡ ಕಾರ್ಖಾನೆ, ಮಶಿನರಿ, ಸಾಗಾಟಕ್ಕೆ ಟ್ರಕ್ಕು, ಲಾರಿ ಇದಾವುದೂ ಇಲ್ಲದೇ ಕೂತಲ್ಲಿಯೇ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳುವ ದಾರಿ ಯಾವುದು?
ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ ಅನ್ನುವ ಪುಸ್ತಕದ ಮೂಲಕ ಕೃಷಿ ತಜ್ಞ ಶ್ರೀ ಪಡ್ರೆ ಅವರು ಬೆಲೆ ಸಿಗದೆ ನೆಲಕಚ್ಚುವ ಹಣ್ಣು-ತರಕಾರಿಗಳಗೆ ಮಾನ ತಂದುಕೊಡುವ ಮೌಲ್ಯವರ್ಧನೆಯ ಯಶೋಗಾಥೆಗಳನ್ನು ನಮ್ಮ ಮುಂದಿರಿಸಿದ್ದಾರೆ. ಕೃಷಿ ಕ್ಷೇತ್ರ ಖಾಸಗಿ ಕಂಪನಿಗಳ ಪಾಲಾಗುತ್ತಿರುವ ಇಂದಿನ ಸಂಕಷ್ಟದ ಕಾಲದಲ್ಲಿ ಈ ಪುಸ್ತಕ ಪ್ರಯೋಗಶೀಲ ಕೃಷಿಕರಿಗೆ ಹೊಸ ದಿಕ್ಕು ತೋರಬಲ್ಲದು. ಮಾರುಕಟ್ಟೆಯನ್ನು ಹುಡುಕುವುದಲ್ಲ, ಹುಟ್ಟುಹಾಕುವುದು ಎ೦ಬ ಸತ್ಯ ಕೃಷಿಕರಿಗೆ ಅರ್ಥವಾಗಬೇಕಿದೆ. ಅಂಥ ಬದಲಾವಣೆಗೆ ಈ ಪುಸ್ತಕ ದಾರಿ ದೀಪವಾಗುವುದೆಂಬ ಆಶಯ ಲೇಖಕರದ್ದು.
ಪುಸ್ತಕದಲ್ಲಿ ಏನಿದೆ ಅನ್ನುವ ಕುರಿತು ಲೇಖಕರು ನೀಡಿರುವ ಕಿರು ಪರಿಚಯ ಇಲ್ಲಿದೆ..
ಪುಟಗಳು: 168
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !