ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕಿ: ಸುಮಂಗಲಾ ಎಸ್. ಮುಮ್ಮಿಗಟ್ಟಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಪೈಥಾಗೊರಸ್ ತನ್ನ ಅನುಯಾಯಿಗಳಿಗೆ ಫಾವಾ ಅವರೆಯನ್ನು ತಿನ್ನದಂತೆ ಕಟ್ಟಪ್ಪಣೆಯನ್ನು ವಿಧಿಸಿದ್ದನು. ಸ್ವಯಂ ಪೈಥಾಗೊರಸನನ್ನು ಅವನ ಪಂಥದ ವಿರೋಧಿಗಳು ಅಟ್ಟಿಸಿಕೊಂಡು ಬಂದಾಗ, ಪೈಥಾಗೊರಸನ ಮುಂದೆ ಒಂದು ಫಾವಾ ಅವರೆಯ ಹೊಲ ಎದುರಾಗುತ್ತದೆ. ಹೊಲದೊಳಗೆ ಕಾಲಿಡದ ಪೈಥಾಗೊರಸ್ ವೈರಿಗಳಿಗೆ ಬಲಿಯಾಗುತ್ತಾನೆ. ಇದು ಮೇಲುನೋಟಕ್ಕೆ ಮೂಢನಂಬಿಕೆಯಂತೆ ಕಾಣಿಸುತ್ತದೆ. ಆದರೆ ಈಗ ನಮಗೆ ಸತ್ಯ ಗೊತ್ತಾಗಿದೆ. ಮೆಡಿಟರೇನಿಯನ್ ಸಮುದ್ರದ ದ್ವೀಪಗಳಲ್ಲಿ ವಾಸಿಸುವ ಬಹುಪಾಲು ಜನರಿಗೆ ಜಿ-6-ಪಿಡಿ ಎಂಬ ಕಿಣ್ವದ ಕೊರತೆ ಯಿರುತ್ತದೆ. ಹಾಗಾಗಿ ಅವರು ಫಾವಾ ಅವರೆಯನ್ನು ತಿನ್ನುವುದಂತಿರಲಿ ವಸಂತ ಋತುವಿನಲ್ಲಿ ಅದು ಹೂವನ್ನು ಬಿಟ್ಟಾಗ ಅದರ ಪರಾಗ ಕಣಗಳಿಂದಲೂ ದೂರವಿರುತ್ತಿದ್ದರು. ಫಾವಾ ಅವರೆ ಇವರಲ್ಲಿ ರಕ್ತಮೂತ್ರವನ್ನುಂಟುಮಾಡಿ ಅನೀಮಿಯಕ್ಕೆ ಕಾರಣವಾಗಿ ಸಾವಿನಲ್ಲಿ ಕೊನೆಗೊಳಿಸುತ್ತಿತ್ತು. ಪೈಥಾಗೊರಸನಿಗೆ ಜಿ-6-ಪಿಡಿ ಬಗ್ಗೆ ಗೊತ್ತಿರಲಿಲ್ಲ. ಆದರೆ ಅದನ್ನು ಸೇವಿಸಿದ ಹಲವರು ಸಾವಿಗೆ ತುತ್ತಾಗುವುದನ್ನು ನೋಡಿ, ತನ್ನವರಿಗೆ ಫಾವಾ ಅವರೆಯಿಂದ ದೂರವಿರುವಂತೆ ಕಟ್ಟಪ್ಪಣೆಯನ್ನು ವಿಧಿಸಿದ್ದನು.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !