ಶ್ರೀ ಪು.ತಿ.ನ ಮತ್ತು ಅವರ ಸಾಹಿತ್ಯದ ಬಗೆಗಿನ ಏಳು ಲೇಖನಗಳು.
ಪ್ರೊ ಸುಜನಾ ಅವರು ನಾಡಿನ ಖ್ಯಾತ ವಿದ್ವಾಂಸರು, ಶ್ರೇಷ್ಠ ಕವಿಗಳು ಹಾಗೂ ದಾರ್ಶನಿಕ ವಿಮರ್ಶಕರು. ಲೋಕದ ಸಂಗತಿಗಳನ್ನಾಗಲಿ, ಸಾಹಿತ್ಯದ ಅಂತರಂಗವನ್ನಾಗಲಿ ಅವರು ನೋಡುವ ದೃಷ್ಟಿ ವಿನೂತನವಾ ದದ್ದು. ವಿಸ್ತಾರವಾದ ವಿದ್ವತ್ತಿನಿಂದಾಗಿ, ಸಮೃದ್ಧ ಲೋಕಾನುಭವದಿಂದಾಗಿ ಕವಿಸಹಜವಾದ ಸ್ಫೂರ್ತಿಯಿಂದಾಗಿ ಅವರ ವಿಮರ್ಶೆಯಲ್ಲಿ ವೈಜ್ಞಾನಿಕ ಪ್ರಭೆಯಿದೆ, ವೈಚಾರಿಕ ತೇಜಸ್ಸಿದೆ, ದಾರ್ಶನಿಕ ಸತ್ಯದ ಪ್ರಖರತೆಯಿದೆ. ಕವಿಗೂ ಕಾಣದ ಅನೇಕ ಸಂಗತಿಗಳು ಹಾಗೂ ಒಳನೋಟಗಳು ಈ ವಿಮರ್ಶ ಕರ ಗರುಡ ದೃಷ್ಟಿಗೆ ಹೊಳೆಯುತ್ತವೆ. ಪು ತಿ ನ ಅವರ ಮೆಚ್ಚಿನ ಕವಿ ಗಳಲ್ಲೊಬ್ಬರು. ಅವರ ಕೃತಿಗಳ ಅಂತರಂಗ ಶೋಧನೆಯಲ್ಲಿ ದಾರ್ಶನಿಕನ ಸತ್ಯ ನಿಷ್ಠೆ ಇದೆಯೆಂಬುದು ಇಲ್ಲಿಯ ಪ್ರಬಂಧಗಳನ್ನೋದಿದಾಗ ವೇದ್ಯವಾಗದಿರದು.
ಪುಟಗಳು: 157
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !