ಲೇಖಕರು:
ವಿವಿಧ ಲೇಖಕರು
ಕಥೆಗಳ ಆಯ್ಕೆ: ವಿ. ರಾಮಚಂದ್ರ ಶಾಸ್ತ್ರಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟವಾಗುತ್ತಿರುವ ‘ಪ್ರಾಣಿ-ಪಕ್ಷಿಗಳ ಕಥೆಗಳು’ ಒಂದು ವಿಶಿಷ್ಟ ಕಥಾಸಂಕಲನ.
ಇಲ್ಲಿ ಪ್ರಾಣಿಗಳು ಪರಸ್ಪರ ಗೆಳೆಯರಾಗಿ, ನೆರೆಹೊರೆಯವರಾಗಿ ಬಾಳುತ್ತವೆ. ಮನುಷ್ಯರಂತೆ ಆಲೋಚಿಸುತ್ತವೆ. ಇವುಗಳಿಗೂ ಕಷ್ಟ , ಸುಖ, ದುಃಖ ಉಂಟು. ಕಷ್ಟದ ಸಂದರ್ಭ ಒದಗಿದಾಗ ತಂತ್ರಗಾರಿಕೆಯಿಂದ ನಿಭಾಯಿಸಿಕೊಳ್ಳಬಲ್ಲವು. ವಂಚನೆ, ಕುತಂತ್ರವನ್ನು ಸಹ ಇವು ತಮ್ಮ ಕಾರ್ಯಸಾಧನೆಗೆ ಬಳಸಿಕೊಳ್ಳುವುದುಂಟು. ತಮ್ಮ ನಡವಳಿಕೆಯ ಮೂಲಕ ಮನುಷ್ಯರಿಗೂ ನೀತಿಪಾಠ ಹೇಳಬಲ್ಲವು.
ಇದು ಪ್ರಾಣಿ-ಪಕ್ಷಿಗಳ ಕಥಾ ಪ್ರಪಂಚ. ಚಿತ್ರಗಾರರಾದ ಶ್ರೀ ಹರಿಣಿ ಸೂಕ್ತ ಸಂದರ್ಭೋಚಿತ ಚಿತ್ರಗಳನ್ನು ಬಿಡಿಸಿ ಪುಸ್ತಕದ ಅಂದವನ್ನು ಹೆಚ್ಚಿಸಿದ್ದಾರೆ.
ಈ ಸಂಕಲನದಲ್ಲಿ ಮಕ್ಕಳ ಕಥಾಸಾಹಿತ್ಯದಲ್ಲಿ ಹೆಸರು ಮಾಡಿರುವ ಗಣೇಶ ಪಿ. ನಾಡೋರ, ನೀಲಾಂಬರಿ, ಜಂಬುನಾಥ ಕಂಚ್ಯಾಣಿ, ಪಳಕಳ ಸೀತಾರಾಮ ಭಟ್ಟ , ಪಾರ್ವತಮ್ಮ ಮಹಲಿಂಗ ಶೆಟ್ಟಿ , ದು. ನಿಂ. ಬೆಳಗಲಿ ಇವರುಗಳು ರಚಿಸಿರುವ ಕಥೆಗಳನ್ನು ಆಯ್ದು ಸಂಕಲಿಸಲಾಗಿದೆ.
ಮಕ್ಕಳೇ ನೀವು ಈ ಕಥೆಗಳನ್ನು ಓದಿ, ಆನಂದಿಸಿ ನಿಮ್ಮ ಸ್ನೇಹಿತರಿಗೂ ಹೇಳಿ. ಇದೇ ಮಾಲೆಯಲ್ಲಿ ಜಾಣ ಕಥೆಗಳು, ನೀತಿ ಕಥೆಗಳು, ವಿನೋದ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಇನ್ನೂ ಮುಂತಾದ ಕಥಾ ಸಂಕಲನಗಳೂ ಬರಲಿವೆ. ಅವುಗಳೂ ನಿಮ್ಮ ಕುತೂಹಲ, ಜಾಣ್ಮೆಯನ್ನು ಹೆಚ್ಚಿಸಲಿ ಎಂಬುದೇ ನಮ್ಮ ಆಶಯ.
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ
ಪುಟಗಳು: 128
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !