ರಾಘವೇಂದ್ರ ಕೋಲಾರ, ಇವರು ನಿವೃತ್ತ ಬೆಮಲ್ (ಬಿ.ಈ.ಎಂ.ಎಲ್) ಉದ್ಯೋಗಿ. ಕೋಲಾರ ಜಿಲ್ಲೆಯಲ್ಲಿ ಓದು, ವ್ಯಾಸಂಗ ಮುಗಿಸಿ ಶಿಕ್ಷಕರಾಗಿ ಕಾರ್ಯವಾರಂಭಿಸಿದ ಶ್ರೀಯುತರು ನಂತರ ಸರ್ಕಾರೀ ಅಂಗಸಂಸ್ಥೆಯಾದ ಬೆಮಲ್ ಸೇರಿದರು.
ಮೊದಲಿನಿಂದಲೂ ಸಾಹಿತ್ಯಾಭಿಮಾನಿಯಾದ ಇವರಿಗೆ ಜಾನಪದ, ದಾಸರ ಪದ, ಭಾವಗೀತೆಗಳ ಮೇಲೆ ವಿಶಿಷ್ಟ ಆಸಕ್ತಿ. ೨೦೧೯ ಯಿಂದ ಈಚೆಗೆ ಸೋಶಿಯಲ್ ಮೀಡಿಯಾವನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಹಲವಾರು ಕಲಾಭಿಮಾನಿಗಳ ಸಂಪರ್ಕದಿಂದ ಮತ್ತೆ ತಮ್ಮನ್ನು ತಾವು ದುಡಿಸಿಕೊಂಡು ಕಾವ್ಯಾತ್ಮಕವಾಗಿ ಕ್ರಿಯಾಶೀಲರಾದರು.
ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ಓದು , ದಿನಚರಿ, ನೆನಪುಗಳಿಂದ ಸ್ಫೂರ್ತಿ ಪಡೆದು ಹವ್ಯಾಸಕ್ಕೆ ಚುಟುಕು, ಕವನ, ಕವಿತೆ ಬರೆಯುವ ಅಭ್ಯಾಸ ಮಾಡಿಕೊಂಡಿರುವ ರಾಘವೇಂದ್ರರವರ ಮೊದಲ ಕವನ ಸಂಕಲನ ಈ 'ಮುದ್ದು ಮನುಜ - ಸಾಲುಗಳ ಸಾಂಗತ್ಯ'.
ತಮ್ಮ ಆತ್ಮಸಂತೋಷಕ್ಕೆ ಬರೆದ ಸಾಲುಗಳಿಗೆ ಸಿಕ್ಕ ಪ್ರೋತ್ಸಾಹವೇ ಈ ಪುಸ್ತಕಕ್ಕೆ ಪ್ರೇರಣೆ.
Muddu Manuja, Raghavendra Kolar