ಪ್ರಕಾಶಕರು: ನಿರುತ ಪಬ್ಲಿಕೇಷನ್ಸ್
Publisher: Niruta Publications
ಭಾರತದಲ್ಲಿ ದತ್ತಕವನ್ನು ಕುರಿತು ಪುಸ್ತಕಗಳು ಹೆಚ್ಚಾಗಿ ಬಂದಿಲ್ಲ. ಇನ್ನು ಕನ್ನಡದಲ್ಲಂತೂ ತೀರಾ ವಿರಳ. ಆದ್ದರಿಂದ ಪದ್ಮಾ ಸುಬ್ಬಯ್ಯ ಅವರು ಬರೆದಿರುವ ಈ ಪುಸ್ತಕ ಅತ್ಯಂತ ಸ್ವಾಗತಾರ್ಹ.
ರಾಮಾಯಣ ಮಹಾಕಾವ್ಯದಲ್ಲಿ ಸೀತೆ ಜನಕನ ಪುತ್ರಿ ದತ್ತುಪುತ್ರಿ ಎಂಬುದು ಎಲ್ಲರಿಗೆ ತಿಳಿದಿದ್ದರೂ ವಾಸ್ತವಾಗಿ ನಮ್ಮ ದೇಶದಲ್ಲಿ ದತ್ತು ಪಡೆಯುವುದು ಕುಟುಂಬದ ಒಳಗೇ ಹೆಚ್ಚಾಗಿ ನಡೆಯುತ್ತಿದ್ದವು. ಉತ್ತರಾಧಿಕಾರ ಮತ್ತು ಅಪರಕ್ರಿಯೆಯ ಅಂಶಗಳು ಇದರಲ್ಲಿ ಮುಖ್ಯವಾಗಿರುತ್ತಿದ್ದವು. ಅದರಿಂದಾಗಿ ದತ್ತಕಕ್ಕೆ ಬಂಧುಗಳ ನಡುವೆಯೇ ಗಂಡುಮಗುವಿನ ಹುಡುಕಾಟ ನಡೆಯುತ್ತಿತ್ತು. ನಮ್ಮ ದೇಶದಲ್ಲಿ ಎಲ್ಲಿಂದಾದರೂ ದತ್ತು ಪಡೆಯುವ ವಿಚಾರ ನಮ್ಮ ದೇಶದಲ್ಲಿ ಆರಂಭವಾಗಿದು ಇತ್ತೀಚಿನ ದಶಕಗಳಲ್ಲಿ. ಅದರ ಫಲವಾಗಿ ಸ್ವಾತಂತ್ರ್ಯ ಬಂದ ನಂತರ ಬೇರೆ ದೇಶಗಳಿಗೇ ಮಕ್ಕಳನ್ನು ದತ್ತು ಕೊಡಲಾಗುತ್ತಿತ್ತು.
ಶ್ರೀಮತಿ ಪದ್ಮಾ ಸುಬ್ಬಯ್ಯ ಇಂಥ ವಿಚಾರಗಳನ್ನು ಇಲ್ಲಿ ವಿವರವಾಗಿ ಪರಿಶೀಲಿಸಿದ್ದಾರೆ. ನಮ್ಮ ದೇಶದೊಳಗೇ ಉದಾರವಾಗಿ ದತ್ತಕಗಳು ಆಗಬೇಕೆಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಕಾನೂನು ಪ್ರಕಾರ ದತ್ತಕ ಆಗದಿದ್ದರೆ ಉದ್ಭವವಿರುವ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಫಾಸ್ಟರ್ ಕೇರ್ ಬಗ್ಗೆಯೂ ಚರ್ಚಿಸುವ ಅವರು ಮಗುವಿನ ದೃಷ್ಟಿಯಿಂದ ಇದೆಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ. ಮಗುವನ್ನು ದತ್ತು ಪಡೆಯಲು ಇಚ್ಛಿಸುವ ಕುಟುಂಬಗಳಿಗೆ ನೆರವಾಗುವಂತೆ ಹಲವಾರು ವಿಳಾಸಗಳನ್ನೂ ಅವರು ಕೊಟ್ಟಿದ್ದಾರೆ.
‘ಮಡಿಲಿಗೊಂದು ಮಗು’ ಪುಸ್ತಕದ ಶೈಲಿ ಸರಳ-ಸುಂದರವಾಗಿ ಸುಲಭವಾಗಿ ಓದಿಕೊಳ್ಳಬಹುದು. ಮಗುವನ್ನು ದತ್ತು ಪಡೆಯಲು ಬಯಸುವ ತಂದೆತಾಯಿಗಳಿಗೆ, ಮಗುವನ್ನು ದತ್ತು ಪಡೆದಿರುವ ತಂದೆತಾಯಿಗಳಿಗೆ ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದೊಂದು ಅತ್ಯಂತ ಉಪಯುಕ್ತ ಕೈಪಿಡಿ ಎನ್ನುವುದರಲ್ಲಿ ಸಂಶಯವಿಲ್ಲ.
ಪುಟಗಳು : 186
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !