ಲೇಖಕರು:
ಹಿಂದಿ ಮೂಲ ಹಿಮಾಂಶು ಜೋಶಿ
ಕನ್ನಡಕ್ಕೆ ಡಾ|| ಜೆ. ಎಸ್. ಕುಸುಮಗೀತ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಖ್ಯಾತ ಹಿಂದಿ ಲೇಖಕ ಹಿಮಾಂಶು ಜೋಶಿ ಅವರ ಕಥಾ ಜಗತ್ತು ಅತ್ಯಂತ ವ್ಯಾಪಕ. ವಿವಿಧ ಆಯಾಮ ಗಳನ್ನೊಳಗೊಂಡ ಇವರ ಕೃತಿಗಳಲ್ಲಿ ಜೀವನದ ಯಥಾರ್ಥ ಸಹಜವಾಗಿ ಮೂಡಿ ಬಂದಿದೆ. ಇವರ ಸಜೀವ ಪಾತ್ರಗಳ ದರ್ಪಣದಲ್ಲಿ ಪ್ರತಿಬಿಂಬಿತಗೊಂಡಿರುವ ಜಗತ್ತು ಓದುಗನಿಗೆ ತನ್ನ ಸುತ್ತಮುತ್ತಲಿನದೇ ಎನಿಸ ತೊಡಗುತ್ತದೆ - ತನ್ನದೇ ಅನುಭೂತಿಗಳ ವಿವಿಧ ಬಿಂಬಗಳೆಂಬಂತೆ. ಇಂದಿನ ಕಥಾಜಗತ್ತಿನಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಗುರುತಿಸಿಕೊಂಡಿರುವ ಈ ಕತೆಗಳಲ್ಲಿ ಮುಂಬರುವ ನಾಳಿನ ಕತೆಗಳ ಸ್ವರೂಪದ ಹೊಳಹು ಕಾಣುತ್ತದೆ.
"ಹಿಮಾಂಶು ಜೋಶಿ ಕೀ ಲೋಕಪ್ರಿಯ ಕಹಾನಿಯಾಂ" ಮತ್ತು "ಸಾಗರ್ ತಟ್ ಕೇ ಶಹರ್" - ಈ ಎರಡು ಕಥಾಸಂಕಲನಗಳಿಂದ ಆಯ್ದ ಹದಿನಾರು ಕತೆಗಳು ಲೇಖಕರ ಜೀವನಾನುಭವ ಹಾಗೂ ಅನುಭೂತಿಗಳಿಂದ ಮೂಡಿಬಂದಿರುವ ಸುಂದರ ಚಿತ್ರಗಳು. ತಮ್ಮ ಸುತ್ತಮುತ್ತಲಿನ ಪರಿಸರ - ವಿಶೇಷವಾಗಿ ಪರ್ವತ ಪ್ರದೇಶ, ಜನಜೀವನ, ಮಣ್ಣಿನ ಸೊಗಡು, ಹೆಣ್ಣಿನ ಬವಣೆ, ಸ್ವಾತಂತ್ರ್ಯ ಹೋರಾಟಗಾರರ ನೋವು ಹಾಗೂ ಹಿರಿಯ ನಾಗರಿಕರ ಅಸಹಾಯಕತೆ - ಇವುಗಳನ್ನು ನಾನಾ ರೂಪಗಳಲ್ಲಿ, ನಾನಾ ಬಣ್ಣಗಳಲ್ಲಿ ಚಿತ್ರಿಸಿದ್ದಾರೆ. ಕನ್ನಡದ ಓದುಗರ ಆಸ್ವಾದನೆಗಾಗಿ ಹಿಂದಿಕತೆಗಳನ್ನು ಅನುವಾದಿಸಿದವರು ಡಾ. ಜೆ. ಎಸ್. ಕುಸುಮಗೀತ.
ಪುಟಗಳು: 124
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !