Click here to Download MyLang App

ಒಳ್ಳೆಯವನು,  ಅಶೋಕ ಹೆಗಡೆ,  Olleyavanu,  Ashok Hegde,

ಒಳ್ಳೆಯವನು (ಇಬುಕ್)

e-book

ಪಬ್ಲಿಶರ್
ಅಶೋಕ ಹೆಗಡೆ
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 110.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಹಳ್ಳಿ ಕಣ್ಣುಗಳು ದಿಲ್ಲಿ ನೋಡುವವು. ಅವು ಕಾಣುವ ದೂರ ಆಳೆಯುವಲ್ಲಿ ಮೊದಲಾಗುತ್ತವೆ, ಇಲ್ಲಿಯ ಕತೆಗಳು. ಅಲ್ಲಿ ಎದುರಾಗುವ ನಗರ ನಾಗರಿಕತೆಯ ದುಗುಡತನವು ನಗರಕ್ಕೆ ಮೀಸಲಾಗದೆ ಆಧುನಿಕತೆಯ ಅಪರಮುಖವೇ ಆಗಿ ಅರಿವಿಗೆ ಬರುತ್ತದೆ. ಈ ಕಾಣ್ಕೆ ತೆರೆವ ಬದುಕಿನ ತರತರನ ಅಸಂಗತ ತರಗಳು ಏನು/ಏಕೆ, ಸರಿ/ತಪ್ಪುಗಳನ್ನು ಕಲೆಸಿ ವಾಸ್ತವಿಕತೆಯನ್ನು ಜಟಿಲ ಪ್ರಶ್ನೆಯಾಗಿ ತೋರುತ್ತವೆ.

ಈ ಕತೆಗಳಲ್ಲಿ ಸಹಜತೆ ಇಲ್ಲ ಸಾಧಾರಣ ಅನುಭವ ಇಲ್ಲ ಸರ್ವವೇದ್ಯವೂ ಇಲ್ಲ. ಯಾಕೆಂದರೆ ಇವು ಸಹಜ ಬದುಕಿನ ಸಾಧಾರಣ ಅನುಭವಗಳಲ್ಲಿ ಸರ್ವವೇದ್ಯವಾಗದೆ ಉಳಿವ ತಲೆಸಿಡಿತದಂತಹ ಬುಡವಿಲ್ಲದ ಬಾಳ ಬವಣೆಗಳನ್ನು ಶೋಧಿಸುತ್ತವೆ.

ಇಲ್ಲಿ ಕೆಲವೆಡೆ ಪಾತ್ರಗಳು, ಕಥನವು, ಕಥಾಹಂದರವು ಅಮುಖ್ಯವಾಗಿ ಅಲ್ಲಲ್ಲಿ ಅವಿತು ಹೊಳೆಯುವ ಐಡಿಯಾಗಳು ವಿಶೇಷವಾಗುತ್ತವೆ. ಮಾನವೀಯ ಸ್ಥಿತಿಯ ಅಮಾನವೀಯತೆ ಹಾಗು ವ್ಯಕ್ತಿಮತೆಯನ್ನು ಮೀರಿ ವ್ಯವಸ್ಥೆ ಧರಿಸುವ ಭೀಷಣತೆಗಳು ಈ ಕತೆಗಳಲ್ಲಿ ವಿಚಾರಗಳು, ವಿಧಾನಗಳು, ಪ್ರಹಸನವಷ್ಟೇ ಆಗುವುದನ್ನು ಚಿತ್ರಿಸುತ್ತವೆ.

ಈ ಸಾಹಿತ್ಯದ ಕೃತಿಯೊಳಗಿನ ಕ್ರಮ ಒಂದು ಕರ್ತವ್ಯಹೀನತೆ ಹಾಗು ಪಲಾಯನವಾದದಿಂದ ಪಾರಾಗಿ ಎಲ್ಲಿಯೋ ಹರಿವ ನದಿಯ ಹಗುರ ಸದ್ದುಗಳನ್ನು ಆಲಿಸುತ್ತ, ಅದು ಹೇಗೋ ಚಿಮ್ಮುವ ನಸುನಗುಗಳನ್ನು ಪಾಲಿಸುತ್ತ, ಮರೆಯಲಾಗದ ಪದ್ಯಗಳ ಪಲ್ಲವಿಯಂತೆ ಮತ್ತೆ ಮತ್ತೆ ಆಕಾಶದ ಅವಕಾಶವನ್ನು, ಸಮುದ್ರದ ಅಗಾಧತೆಯನ್ನು ತುಂಬಿಕೊಂಡು ನಲಿಸುತ್ತವೆ.

ಹಲವಿನೊಂದಿಗೆ ಹಲುಬದೆ, ಕೆಲವಿನೊಂದಿಗೆ ಕಲೆಯುವ ಆಸೆಯೇ ಕತೆಯಾಗುವ ಈ ಕಥಾಸಂಕಲನ ನವ್ಯೋತ್ತರದ ಕನ್ನಡ ಕಥಾಪರಂಪರೆಗೆ ಒಂದು ಬಹುಮುಖ್ಯ ಸೇರ್ಪಡೆ.

- ಕಮಲಾಕರ ಕಡವೆ

...ಇದರ ಹಿಂದೆ ಹಲವು ಕಾಲದ ತುಡಿತ, ಪ್ರಯೋಗ, ಪರಿಶ್ರಮವಿದೆ. ಕನ್ನಡ ಕಥಾಪರಂಪರೆಯ ಅರಿವನ್ನು ಹೊಂದಿಯೇ ಭಿನ್ನವಾಗುವ, ತನ್ನತನ ಸಾಧಿಸಲು ನಿರಂತರ ಶ್ರಮಿಸುವ ಛಲವಿದೆ. ತೀವ್ರವಾದ ಪ್ರಜ್ಞಾಪರತೆ, ನಾಗರಿಕ ಚಿಕಿತ್ಸಕ ಸಂವೇದನೆ, ಬದುಕಿನ ರೂಕ್ಷಾತಿರೂಕ್ಷ ವಿವರಗಳನ್ನು ಸೂಕ್ಷ್ಮವಾಗಿ ದಾಖಲಿಸುವ ಹವಣಿಕೆ ಮತ್ತು ತನ್ನತನದ ತೀವ್ರ ಹುಡುಕಾಟಗಳು ಓದುಗರನ್ನು ಆವರಿಸಿಕೊಳ್ಳುವ ಅಂಶಗಳೆನ್ನಬಹುದು...

- ಬಿ.ಎನ್‌. ಸುಮಿತ್ರಾಬಾಯಿ

 

ABOUT THE AUTHOR

ಆಶೋಕ ಹೆಗಡೆ ಉತ್ತರ ಕನ್ನಡದ ಸಿದ್ದಾಪುರದ ಬಳಿಯ ಗುಂಜಗೋಡಿನಲ್ಲಿ ಜನಿಸಿದವರು. ಅರ್ಥಶಾಸ್ತ್ರ್ರದಲ್ಲಿ ಸ್ನಾತಕೋತ್ತರ ಮತ್ತು ಪಿ.ಎಚ್.ಡಿಯನ್ನು ಗಳಿಸಿದ ಅಶೋಕ, ಬಂಡವಾಳ ಹೂಡಿಕೆ ಮತ್ತು ಫೈನಾನ್ಸ್‌ನಲ್ಲಿ ಎಂ.ಬಿ.ಎ ಪದವಿಯನ್ನು ಗಳಿಸಿದ್ದಾರೆ. ಇವರ ಒಂದು ತಗಡಿನ ಚೂರು, ಒಳ್ಳೆಯವನು ಎನ್ನುವ ಎರಡು ಕಥಾ ಸಂಕಲನಗಳು, ಅಶ್ವಮೇಧ ಎನ್ನುವ ಕಾದಂಬರಿ ಮತ್ತು ‘ಭೂಸ್ವಾದೀನದ ಪ್ರಕ್ರಿಯೆ ಮತ್ತು ಪರಿಹಾರದ ಎರಡು ಹೊಸ ದಾರಿಗಳು’ ಚಿಂತನ ಲೇಖನ ಇವು ಹೆಗ್ಗೋಡಿನ ಅಕ್ಷರ ಪ್ರಕಾಶನದಿಂದ ಪ್ರಕಟಗೊಂಡಿವೆ.

  

ಪುಟಗಳು: 140

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)