ಲೇಖಕರು:
ಸಂಪಾದಕ: ಡಾ।। ನಾ. ಸೋಮೇಶ್ವರ
ಲೇಖಕ: ವೈ.ಜಿ.ಮುರಳೀಧರನ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಸುಭಾಷ್‌ಚಂದ್ರ ಬೋಸ್ ಬಾಲ್ಯದಿಂದಲೇ ಪ್ರತಿಭಾವಂತರು. ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರ ವಿಚಾರಧಾರೆಗಳಿಂದ ಪ್ರಭಾವಿತರಾದರು. ಹೆತ್ತವರ ಒತ್ತಾಯದ ಮೇರೆಗೆ ಇಂಗ್ಲೆಂಡಿಗೆ ಹೋಗಿ ಐಸಿಎಸ್ ಪರೀಕ್ಷೆಯನ್ನು ತೆಗೆದುಕೊಂಡು ನಾಲ್ಕನೆಯ ರ‍್ಯಾಂಕ್ ಗಳಿಸಿದರು. ಜಲಿಯನ್‍ವಾಲಾ ಬಾಗ್ ದುರಂತವನ್ನು ಕೇಳಿ ತನ್ನ ಐಸಿಎಸ್ ತರಬೇತಿಯನ್ನು ಅರ್ಧದಲ್ಲಿಯೇ ಬಿಟ್ಟು ಭಾರತಕ್ಕೆ ಹಿಂದಿರುಗಿದರು. ಮಹಾತ್ಮ ಗಾಂಧಿ ಪ್ರಭಾವಕ್ಕೊಳಗಾಗಿ ಕಾಂಗ್ರೆಸ್ ಸೇರಿದರು. ಎರಡು ಬಾರಿ ಕಾಂಗ್ರೆಸ್ ಅಧ್ಯಕ್ಷರಾದರು. ಕಾಂಗ್ರೆಸ್ ನೀತಿಯಿಂದ ಬೇಸತ್ತು ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದರು. ‘ಶತ್ರುವಿನ ಶತ್ರು ನಮ್ಮ ಮಿತ್ರ‘ ಎಂಬ ತತ್ತ್ವದ ಮೇಲೆ ಜರ್ಮನಿಯಲ್ಲಿ ಹಿಟ್ಲರನ್ನು ಭೇಟಿಯಾಗಿ ಆತನ ಸಹಾಯದಿಂದ ಸೇನೆಯನ್ನು ಕಟ್ಟಿದರು. ಜಪಾನಿಗೆ ಬಂದು ಜಪಾನಿಯರ ನೆರವಿನೊಂದಿಗೆ ಸೇನೆಯನ್ನು ಕಟ್ಟಿ ಬ್ರಿಟಿಷರ ಮೇಲೆ ದಾಳಿ ಮಾಡಿ ಸೋತರು. ಸುಭಾಷರ ಸಾವು ಇಂದಿಗೂ ನಿಗೂಢ! ಭಾರತದಲ್ಲಿ ಗಾಂಧಿ, ನೆಹರೂರವರಿಗೆ ದೊರೆತ ಸನ್ಮಾನ ಬೋಸರಿಗೆ ದೊರೆಯಲಿಲ್ಲ ಎನ್ನುವುದು ಐತಿಹಾಸಿಕ ಸತ್ಯ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !