ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಕಾಮವನ್ನು ಒಂದು ಜ್ಞಾನ ಎಂದು ಪರಿಗಣಿಸಿ, ಜಗತ್ತಿನ ಕಾಮಶಾಸ್ತ್ರವನ್ನು ನೀಡಿದ ನಮ್ಮ ನಾಡಿನಲ್ಲಿ, ಇಂದು ಲೈಂಗಿಕ ಅಜ್ಞಾನ ತಾಂಡವವಾಡುತ್ತಿದೆ. ಕಾಮವು ನಾಲ್ಕು ಗೋಡೆಗಳ ನಡುವೆ ನಡೆಯುವ, ಬಹಿರಂಗವಾಗಿ ಚರ್ಚಿಸ ಬಾರದ, ಮಡಿವಂತಿಕೆಯ ವಿಷಯವಾಗಿದೆ. ಲೈಂಗಿಕ ಸಂಪರ್ಕದಲ್ಲಿ ದಂಪತಿಗಳು ಪಾಲಿಸಬೇಕಾದ ಸ್ವಚ್ಛತೆಯ ಬಗ್ಗೆ ಅವರ ಅರಿವು ತೀರಾ ಕನಿಷ್ಠ, ಜನನಾಂಗಗಳು. ಹಾಗೂ ಜನನಾಂಗಗೆಳೊಡನೆ. ನಿಕಟವಾಗಿರುವ ವಿಸರ್ಜನಾಂಗಗಳ ರಚನೆ ಹಾಗೂ ಕಾರ್ಯದ ಬಗ್ಗೆ ಸರಿಯಾಗಿ ತಿಳಿದಿರುವುದಕ್ಕಿಂತ ತಪ್ಪಾಗಿ ತಿಳಿದಿರುವುದೇ ಹೆಚ್ಚು. ದಂಪತಿಗಳ ನಡುವೆ ನಡೆಯುವ, ನಡೆಯಬಹುದಾದ ವೈವಿಧ್ಯಮಯ ಲೈಂಗಿಕ ಚಟುವಟಿಕೆಗಳು ನಮ್ಮ ಕಲ್ಪನೆಯನ್ನು ಮೀರಿಸುತ್ತವೆ. ಆವು ವೈಯಕ್ತಿಕವಾದವು. ತೀರಾ ಖಾಸಗಿಯಾಗಿರುವಂತಹವು . ಈ ಚಟುವಟಿಕೆಗಳು. ಇಬ್ಬರ ಆರೋಗ್ಯಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು. ಇದಕ್ಕೆ ದಂಪತಿಗಳು ಮುಖ್ಯವಾಗಿ ಜನನಾಂಗ ಸ್ಫಚ್ಛತೆಯನ್ನು ಹಾಗೂ ಆಸನ ಸ್ವಚ್ಛತೆಯನ್ನು ಸರಿಯಾಗಿ ಪಾಲಿಸಬೇಕು. ಆಗ ಅವರ ಲೈಂಗಿಕ ಬದುಕು ಮಾತ್ರವಲ್ಲ ಸಮಗ್ರ ಆರೋಗ್ಯವೂ ತೃಪ್ತಿಕರವಾಗಿರುತ್ತದೆ. ಈ ಅರಿವನ್ನು ಹೆತ್ತವರು ತಮ್ಮ ಮಕ್ಕಳಿಗೆ ಸಕಾಲದಲ್ಲಿ ತಿಳಿಸಬೇಕು . ಈ ಪುಸ್ತಕವು. ಕನ್ನಡದಲ್ಲಿ ಲೈಂಗಿಕ ಸ್ವಚ್ಛತೆಯ ಬಗ್ಗೆ ಸಮಗ್ರವಾಗಿ ತಿಳಿಸುವ ಏಕೈಕ ಪುಸ್ತಕವಾಗಿದೆ.
ಡಾ ।। ನಾ. ಸೋಮೇಶ್ವರ ಅವರು ವೈದ್ಯ ಸಾಹಿತಿಯಾಗಿ ಹಾಗೂ ‘ಥಟ್ ಅಂತ ಹೇಳಿ’ ದೂರದರ್ಶನ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಜನಪ್ರಿಯರಾಗಿದ್ದಾರೆ. ನವಕರ್ನಾಟಕದ ‘ವಿಶ್ವಮಾನ್ಯರು’ ಮಾಲಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ‘ನಮ್ಮ ದಿನ ನಿತ್ಯದ ಆಹಾರ’, ‘ಜ್ಞಾನೇಂದ್ರಿಯಗಳು’, ‘ದೈಹಕ ಸ್ವಚ್ಛತೆ’, ‘ನಮ್ಮ ಆಹಾರ ಹೇಗಿರಬೇಕು?’, ’ಹುಲಿಯ ಬೆನ್ನೇರಿ….’.’ಹುಲಿಯ ಜೊತೆ ಜೊತೆಯಲಿ…’ , ‘ಅದೃಶ್ಯ ಲೋಕದ ಆಗೋಚರ ಜೀವಿಗಳು’ ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
ಪುಟಗಳು: 96
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !