ಸೋಮದೇವ ಸೂರಿಯ ‘ನೀತಿವಾಕ್ಯಾಮೃತ’ ಗ್ರಂಥ ಸಾಮಾನ್ಯ ಮತ್ತು ಕನಿಷ್ಠ ಮನುಷ್ಯನ ಬದುಕಿಗೂ ತೀರ ಅಗತ್ಯವಾದ ಮುಖ್ಯ ಸಂಗತಿಗಳನ್ನು, ಪ್ರಸ್ತಾಪಿಸುತ್ತದೆ. ಸೋಮದೇವ ಸೂರಿಯು ಕೌಟಿಲ್ಯನ ಅರ್ಥಶಾಸ್ತ್ರವನ್ನೂ ಸನಾತನ ಗ್ರಂಥಗಳನ್ನೂ ಇತರ ಅರ್ಥಶಾಸ್ತ್ರ, ನೀತಿಶಾಸ್ತ್ರ ಗ್ರಂಥಗಳನ್ನೂ ಗಂಭೀರವಾಗಿ ಅಧ್ಯಯನ ಮಾಡಿ ವಿಷಯ ಸಂಗಹಿಸಿದ್ದಾನೆ. ಆ ಮೂಲಕ ರಾಜಕಾರ್ಯದಲ್ಲಿ ನಿಂತರಾಗಿದ್ದವರಿಗೆ ಅತ್ಯಂತ ಉಪಯುಕ್ತವಾದ ಮತಾತೀತವಾದ ರಾಜನೀತಿಶಾಸ್ತ್ರ ಗ್ರಂಥವನ್ನು ರಚಿಸಿದ್ದಾನೆ. ಈ ಗ್ರಂಥ ವಿದ್ವಾಂಸರೆಲ್ಲರ ಗಮನ ಸೆಳೆದಿದೆ. ಅವರೆಲ್ಲರೂ ಇದೊಂದು ಮಹತ್ವದ ಗ್ರಂಥವೆಂದು ಪರಿಗಣಿಸಿದ್ದಾರೆ.
ಪುಟಗಳು : 200
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !