ಓದಿದವರು : ಧ್ವನಿಧಾರೆ ಮೀಡಿಯಾ ತಂಡ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ನಿರ್ಮಾಣ ಸಹಾಯ : ಧ್ವನಿಧಾರೆ ಮೀಡಿಯಾ
ಆಡಿಯೋ ಪುಸ್ತಕದ ಅವಧಿ : 1 ಗಂಟೆ 44 ನಿಮಿಷ
ಲೇಖಕರು:
ವಿವಿಧ ಲೇಖಕರು
ಕಥೆಗಳ ಆಯ್ಕೆ: ವಿ. ರಾಮಚಂದ್ರ ಶಾಸ್ತ್ರಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟ ವಾಗುತ್ತಿರುವ ‘ನೀತಿ-ನಡತೆಯ ಕಥೆಗಳು’ ಸರಳ ಶೈಲಿಯ ವಿಶಿಷ್ಟವಾದ ಕಥಾಸಂಕಲನ.
ಮಕ್ಕಳು ಇಲ್ಲಿರುವ ಕಥೆಗಳನ್ನು ಓದುವ ಮೂಲಕ ‘ಇದರಿಂದ ನಾವು ತಿಳಿದುಕೊಳ್ಳಬೇಕಾದ ನೀತಿ ಏನು ?’ ಎಂಬ ಪ್ರಶ್ನೆಗೆ ತಾವೇ ಉತ್ತರ ಕಂಡುಕೊಳ್ಳುತ್ತಾರೆ. ಇಲ್ಲಿ ಬರುವ ಪಾತ್ರಗಳ ಮೂಲಕ ಬದುಕಿನ ನಾನಾ ಮುಖಗಳ ಪರಿಚಯ ಮಕ್ಕಳಿಗಾಗುತ್ತದೆ.
ಈ ಕಥೆಗಳಿಗೆ ಚಿತ್ರಕಾರ ಸ್ಯಾಮ್ ಮತ್ತು ಕಮಲಂ ಅರಸು ಸೂಕ್ತ ಸಾಂದರ್ಭಿಕ ಚಿತ್ರಗಳನ್ನು ಬಿಡಿಸಿ ಪುಸ್ತಕದ ಸೊಗಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಈ ಸಂಕಲನದಲ್ಲಿ ಪ. ರಾಮಕೃಷ್ಣ ಶಾಸ್ತ್ರಿ , ಪಳಕಳ ಸೀತಾರಾಮ ಭಟ್ಟ , ಸಂಪಟೂರು ವಿಶ್ವನಾಥ್, ದೊಡ್ಡಬಾಣಗೆರೆ ಪ್ರಕಾಶಮೂರ್ತಿ ಮತ್ತು ವಿ. ರಾಮಚಂದ್ರ ಶಾಸ್ತ್ರಿ ಇವರುಗಳು ಬರೆದ ಕಥೆಗಳಿವೆ. ಈ ಎಲ್ಲ ಕಥೆಗಳಲ್ಲಿ ನೀತಿಪಾಠ ಒಂದಲ್ಲ ಒಂದು ರೀತಿಯಲ್ಲಿ ಹೇಳಲಾಗಿದೆ.
ಈ ಹೊಸ ಮಾದರಿಯ ಕಥಾಸಂಕಲನ ಮಾಲೆಯಲ್ಲಿ ಜಾಣ ಕಥೆಗಳು, ವಿನೋದ ಕಥೆಗಳು, ಪ್ರಾಣಿ-ಪಕ್ಷಿಗಳ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಇನ್ನೂ ಮುಂತಾದ ಕಥಾಸಂಕಲನಗಳು ಪ್ರಕಟವಾಗಿವೆ. ಇವೆಲ್ಲವೂ ನಿಮಗೆ ಇಷ್ಟವಾಗುವ ಕಥೆಗಳು, ಓದಿ ಆನಂದ ಪಡೆಯಿರಿ.
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.
ವಿವರಗಳು
- ಪ್ರಾಣದ ಬೆಲೆ ಪ. ರಾಮಕೃಷ್ಣ ಶಾಸ್ತ್ರಿ
- ಆಟದ ಕೋವಿ ಪಳಕಳ ಸೀತಾರಾಮ ಭಟ್ಟ
- ಅತಿ ಆಸೆ ಗತಿಗೇಡು ಪಳಕಳ ಸೀತಾರಾಮ ಭಟ್ಟ
- ಸನ್ಯಾಸಿ ಮತ್ತು ದರೋಡೆಕೋರರು ಪಳಕಳ ಸೀತಾರಾಮ ಭಟ್ಟ
- ಪಾಠ ಕಲಿಸಿದ ನಾಟಕ ಪಳಕಳ ಸೀತಾರಾಮ ಭಟ್ಟ
- ಸದ್ದಿಲ್ಲದ ದೀಪಾವಳಿ ಸಂಪಟೂರು ವಿಶ್ವನಾಥ್
- ಚೆಲುಮೆ ಸಂಪಟೂರು ವಿಶ್ವನಾಥ್
- ಪರೋಪಕಾರ ಸಂಪಟೂರು ವಿಶ್ವನಾಥ್
- ಶಿಷ್ಯವೃತ್ತಿ ಸಂಪಟೂರು ವಿಶ್ವನಾಥ್
- ಸತ್ಯವೇ ನಿತ್ಯ ದೊಡ್ಡಬಾಣಗೆರೆ ಪ್ರಕಾಶಮೂತಿ
- ನಂಬಿಕೆಗೆ ದ್ರೋಹ ಬಗೆದ ರಾಜಕುಮಾರ ದೊಡ್ಡಬಾಣಗೆರೆ ಪ್ರಕಾಶಮೂತಿ
- ಯಾರು ಬಡವರು ವಿ. ರಾಮಚಂದ್ರ ಶಾಸ್ತ್ರಿ
- ಕಥೆಗಾರ ಲೋಕೇಶನ ಕಥೆ ವಿ. ರಾಮಚಂದ್ರ ಶಾಸ್ತ್ರಿ