ಲೇಖಕರು:
ವಿವಿಧ ಲೇಖಕರು
ಕಥೆಗಳ ಆಯ್ಕೆ: ವಿ. ರಾಮಚಂದ್ರ ಶಾಸ್ತ್ರಿ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟವಾಗುತ್ತಿರುವ ‘ನೀತಿ ಕಥೆಗಳು’ ಸರಳ ಶೈಲಿಯ ವಿಶಿಷ್ಟವಾದ ಕಥಾಸಂಕಲನ.
ಮಕ್ಕಳು ಇಲ್ಲಿರುವ ಕಥೆಗಳನ್ನು ಓದುವ ಮೂಲಕ ‘ಇದರಿಂದ ನಾವು ತಿಳಿದುಕೊಳ್ಳಬೇಕಾದ ನೀತಿ ಏನು ?’ ಎಂಬ ಪ್ರಶ್ನೆಗೆ ತಾವೇ ಉತ್ತರ ಕಂಡುಕೊಳ್ಳುತ್ತಾರೆ. ಇಲ್ಲಿ ಬರುವ ಪಾತ್ರಗಳ ಮೂಲಕ ಬದುಕಿನ ನಾನಾ ಮುಖಗಳ ಪರಿಚಯ ಮಕ್ಕಳಿಗಾಗುತ್ತದೆ.
ಈ ಕಥೆಗಳಿಗೆ ಚಿತ್ರಗಾರ ಸ್ಯಾಮ್ ಸೂಕ್ತ ಸಾಂದರ್ಭಿಕ ಚಿತ್ರಗಳನ್ನು ಬಿಡಿಸಿ ಪುಸ್ತಕದ ಸೊಗಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಈ ಸಂಕಲನದಲ್ಲಿ ನವಗಿರಿನಂದ, ಪ. ರಾಮಕೃಷ್ಣ ಶಾಸ್ತ್ರಿ , ನೀಲಾಂಬರಿ, ಪಳಕಳ ಸೀತಾರಾಮ ಭಟ್ಟ , ಮತ್ತೂರು ಸುಬ್ಬಣ್ಣ , ಪಾರ್ವತಮ್ಮ ಮಹಲಿಂಗ ಶೆಟ್ಟಿ , ಬೇಬಿ ಎಮ್. ಮಾಣಿಯಾಟ್ ಇವರುಗಳು ಬರೆದ ಕಥೆಗಳಿವೆ. ಈ ಎಲ್ಲ ಕಥೆಗಳಲ್ಲಿ ನೀತಿಪಾಠ ಒಂದಲ್ಲ ಒಂದು ರೀತಿಯಲ್ಲಿ ಹೇಳಲಾಗಿದೆ.
ಈ ಹೊಸ ಮಾದರಿಯ ಕಥಾಸಂಕಲನ ಮಾಲೆಯಲ್ಲಿ ಜಾಣ ಕಥೆಗಳು, ವಿನೋದ ಕಥೆಗಳು, ಪ್ರಾಣಿ-ಪಕ್ಷಿಗಳ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಇನ್ನೂ ಮುಂತಾದ ಕಥಾಸಂಕಲನಗಳು ಬರಲಿವೆ. ಇವೆಲ್ಲವೂ ನಿಮಗೆ ಇಷ್ಟವಾಗುವ ಕಥೆಗಳು, ಓದಿ ಆನಂದ ಪಡೆಯಿರಿ.
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ
ಪುಟಗಳು: 120
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !