'ದೀಪ' ಮನಸ್ಸಿನ ಶಕ್ತಿಯ ಸುತ್ತ ಹೆಣೆದಿರುವ ಒಂದು ರೋಚಕ ಕಾದಂಬರಿ.
"...ಜಸ್ಟ್ ಪಾಸ್ ಆಗೋ ವಿದ್ಯಾರ್ಥಿಗೆ ಫೇಲಾಗ್ತೀನೇನೋ ಅನ್ನೋ ಭಯ. ಫಸ್ಟ್ ಬರೋ ವಿದ್ಯಾರ್ಥಿಗೆ ಮೊದಲ ಸ್ಥಾನ ತಪ್ಪತ್ತೇನೋ ಅನ್ನೋ ಭಯ!
ಬಡವನಿಗೆ ಅಧಿಕಾರಿಗಳು ಲಂಚ ಕೇಳಿದರೆ ಏನ್ಮಾಡೋದು ಅನ್ನೋ ಭಯ, ಭ್ರಷ್ಟ ಅಧಿಕಾರಿಗಳಿಗೆ ಲಂಚ ತೊಗೊಳ್ಳುವಾಗ ಸಿಕ್ಕಾಕೊಂಡ್ರೆ ಏನ್ಮಾಡೋದು ಅನ್ನೋ ಭಯ!
ಕಾಡಲ್ಲಿರೋ ಜಿಂಕೆಗೆ ಹುಲಿ ಬಂದು ಬೇಟೆಯಾಡತ್ತೇನೋ ಅನ್ನೋ ಭಯ, ಹುಲಿಗೆ ಜಿಂಕೆ ತಪ್ಪಿಸಿಕೊಂಡರೆ ಹೊಟ್ಟೆಗೆ ಏನ್ಮಾಡೋದು ಅನ್ನೋ ಭಯ!
ಸೃಷ್ಟಿಯ ಪ್ರತಿಯೊಂದು ಜೀವಿಗೂ ಬದುಕಿನ ಯಾವುದೋ ಒಂದು ಸಂದರ್ಭದಲ್ಲಿ ಈ 'ಭಯ' ಅನ್ನೋ ಭಾವನೆ ಖಂಡಿತ ಕಾಡೇ ಕಾಡತ್ತೆ.
ಭಯದ ವಿರುಧ್ದದ ನಿರಂತರ ಹೋರಾಟವೇ ಈ ದೀಪ!
ಇದು ಬರೀ ಕಥೆಯಲ್ಲ, ಬದುಕಿನ ಪ್ರತಿಬಿಂಬವೇ ಈ ದೀಪ...!"
ಭಯವೆಂಬ ಭಾವನೆಗೆ ಮನುಷ್ಯರೂಪ ಕೊಟ್ಟು, ಅನಿರೀಕ್ಷಿತ ರೋಚಕ ಸಂದರ್ಭಗಳನ್ನು ಸೃಷ್ಟಿಸಿ, ಭಯದ ಕರಾಳತೆಯನ್ನು, ಅದನ್ನು ಎದುರಿಸುವ ಪರಿಯನ್ನು, ಮನುಷ್ಯನ ಮನಸ್ಸಿನ ಶಕ್ತಿಯನ್ನು ಮನಸ್ಸಿಗೆ ನಾಟುವಂತೆ ವಿವರಿಸಿರುವ ಒಂದು ವಿಭಿನ್ನ ಕಾದಂಬರಿ.