ಲೇಖಕರು:
ನೂರ್ ಜ಼ಹೀರ್
ಕನ್ನಡಕ್ಕೆ ಪ್ರೊ|| ಎಂ. ಅಬ್ದುಲ್ ರೆಹಮಾನ್ ಪಾಷ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಸಂಪ್ರದಾಯಸ್ಥ ಮುಸ್ಲಿಮ್ ಕುಟುಂಬದಿಂದ ಬಂದ ಸಫಿಯಾ ತನ್ನ ಉದಾರವಾದಿ ಪತಿ ಅಬ್ಬಾಸ್ ಉತ್ತೇಜನದಿಂದ ನಿರ್ದಿಷ್ಟ ನಿಲುವು ಮತ್ತು ಆತ್ಮಸ್ಥೈರ್ಯವನ್ನು ತಾಳಿ, ಎಲ್ಲ ಬಗೆಯಲ್ಲಿ ವಿಮೋಚಿತರಾದ ಮಹಿಳೆಯರ ಸಬಲತೆಯಿಂದಲೇ ಶಕ್ತಿ ಪಡೆಯುವ ಮುಕ್ತ ಭಾರತದ ಕನಸನ್ನು ಕಾಣುತ್ತಾಳೆ. ಸ್ವಾತಂತ್ರ್ಯ ಪೂರ್ವದ ಒಂದೆರಡು ವರ್ಷಗಳಿಂದ ಹಿಡಿದು ಪ್ರಸಿದ್ಧ ಶಾಹ್‍ಬಾನೂ ಪ್ರಕರಣದವರೆಗಿನ ಪ್ರಕ್ಷುಬ್ಧ ಭಾರತದ ಪರಿಸರದಲ್ಲಿ ಕಥೆಯು ನೆಲೆಗೊಳ್ಳುತ್ತದೆ. ಹೋರಾಟದ ಹಾದಿಯಲ್ಲಿ ಪತಿ-ಪತ್ನಿ ಇಬ್ಬರೂ ಸಾಯುತ್ತಾರೆ:
"ಮುಸ್ಲಿಮ್ ಮಹಿಳೆಯರ ದುರವಸ್ಥೆ ಮತ್ತು ಮೂಲಭೂತವಾದಿಗಳ ಮತಾಂಧತೆಯನ್ನು ಅರ್ಥ ಮಾಡಿಕೊಳ್ಳಲು ಮುಸ್ಲಿಮರು ಮತ್ತು ಹಿಂದುಗಳು ಎಲ್ಲರೂ ಓದಲೇಬೇಕಾದ ಒಂದು ಪುಸ್ತಕ" ("ಆರ್ಗನೈಜರ್"). ಈ ಕೃತಿಯು 2011ರ ಫೌಂಡೇಶನ್ ಆಫ್ ಸಾರ್ಕ್ ಲಿಟರೇಚರ್ ಪ್ರಶಸ್ತಿಯನ್ನು ಪಡೆದಿದೆ.
ಪುಟಗಳು: 224
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !