ಬರೆದವರು:
ರಾಜೇಶ್ವರಿ ತೇಜಸ್ವಿ
“ನಮ್ಮ ಮನೆಗೂ ಬಂದರು ಗಾಂಧೀಜಿ!” ಒಂದು ಕಾಲದ ನಮ್ಮ ನಾಡಿನ ಸಾಮಾಜಿಕ, ಸಾಂಸ್ಕತಿಕ ಬದುಕಿನ ಸಂಕಥನ. ತನ್ನ ಅಮ್ಮನ ಕಥೆಯನ್ನು ಹೇಳುತ್ತಲೇ ರಾಜೇಶ್ವರಿ ತೇಜಸ್ವಿಯವರು ಇಲ್ಲಿ ಅನೇಕ ಜಗತ್ತುಗಳನ್ನು ಅನಾವರಣ ಮಾಡುತ್ತಾರೆ. ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಸಿರಿವಂತರ ವಲಯ, ಹೋರಾಟವನ್ನು ಉಸಿರಾಗಿಸಿಕೊಂಡು ಬದುಕು ಕಟ್ಟಿಕೊಂಡ ಶ್ರಮ ಸಂಸ್ಕೃತಿಯ ಪರಿಸರ; ಬದಲಾಗುತ್ತಿದ್ದ ಬದುಕಿನ ತಲ್ಲಣ, ರೋಮಾಂಚನಗಳ ವಿವರ; ಸ್ವಾಭಿಮಾನದ ಸಾರ್ಥಕ ಬದುಕಿನ ವ್ಯಾಖ್ಯಾನ; ಹೀಗೆ ಹಲವು ಎಳೆಗಳನ್ನು ಕುಶಲತೆಯಿಂದ ನೆಯ್ದು ರೂಪಿಸಿದ ಈ ಕೃತಿ ಕಳೆದ ಶತಮಾನದ ಭಾರತೀಯ ಬದುಕಿನ ಸೆರಗಿನ ನೆರಿಗೆಯೊಂದನ್ನು ಸಮರ್ಥವಾಗಿ ನಿರೂಪಿ ಸುತ್ತದೆ. ರಾಮಕ್ಕನ ಕಥೆ ಆತ್ಮಗೌರವದ ಕಥನ; ಅಂತೆಯೇ ನಂಜಮ್ಮ, ಸಾಕಮ್ಮರ ಕಥೆಗಳೂ. ಬಹುಮುಖೀ ನೆಲೆಯ ಈ ಕಥನ ತೇಜಸ್ವಿಯವರನ್ನು ನೆನಪಿಸುತ್ತಲೇ ರಾಜೇಶ್ವರಿಯವರಿಗೇ ವಿಶಿಷ್ಟವೆನ್ನಿಸುವ ಸ್ತ್ರೀ ಜಗತ್ತೊಂದನ್ನು ನಮಗೆ ಪರಿಚಯಿಸುತ್ತದೆ. ಇಂಥ ಕಥನಗಳು ಸಂಸ್ಕೃತಿ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಅತ್ಯಂತ ಮುಖ್ಯ.
-ನರಹಳ್ಳಿ ಬಾಲಸುಬ್ರಮಣ್ಯ
ಪುಟಗಳು: 164
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ