ಪ್ರಕಾಶಕರು: ಸಾವಣ್ಣ
Publisher: Sawanna
ಸಾವಣ್ಣ ಪ್ರಕಾಶನದ ಸಹೃದಯ ಮಿತ್ರರಾದ ಶ್ರೀ ಜಮೀಲ್ ಸಾಹೇಬರು ಹೊರತರುತ್ತಿರುವ ನನ್ನ ಐದನೆಯ ಪುಸ್ತಕವಿದು. ಬರೆಯುವುದೇ ಒಲ್ಲೆನೆಂದು ಓದುವ ಪುಸ್ತಕ ಹಿಡಿದು ಒರಗುತ್ತಿದ್ದ ನನ್ನ ಈ ದೇಹವೆಂಬ ಬಂಡಿಗೆ ಒಂದು ಗಾಲಿಯಾಗಿ ವಿಶ್ವೇಶ್ವರ ಭಟ್ಟರು ಇನ್ನೊಂದು ಗಾಲಿಯಾಗಿ ಜಮೀಲ್ ಸಾಹೇಬರು ಎಬ್ಬಿಸಿ ನಿಲ್ಲಿಸಿದರು. ಶ್ರೀ ವಿಶ್ವೇಶ್ವರ ಭಟ್ಟರು ಕೈಯಲ್ಲಿ ಪೆನ್ನು ಹಿಡಿಸಿದರೆ ಶ್ರೀ ಜಮೀಲರು ಪ್ರಿಂಟಾಗಿಸುವ ಪುಸ್ತಕವಾಗಿ ನನ್ನ ಬರಹಗಳನ್ನು ನೋಡುವ ಹುಚ್ಚು ಹಿಡಿಸಿದರು. ಕಂಡ ಪುಸ್ತಕಗಳನ್ನೆಲ್ಲ ಓದುವ ಹುಚ್ಚಿರುವ ನನಗೆ, ನನ್ನ ಪುಸ್ತಕಗಳನ್ನೂ ಓದುವವರಿದ್ದಾರೆಂದು ತಿಳಿದದ್ದೇ, ಒಂದೊಂದು ಪುಸ್ತಕವೂ ಮೂರು-ನಾಲ್ಕು ಮುದ್ರಣ ಕಾಣುತ್ತಿರುವದು ಕಂಡಾಗ. ಮಾಡಿದ ಅಡಿಗೆಯನ್ನು ಮನೆಯ ಜನರು ಉಂಡರೆ ಗೃಹಿಣಿಗೆ ಖುಷಿ. ಹಾಗೆಯೇ ಬರೆದದ್ದನ್ನು ನನ್ನ ಕನ್ನಡಿಗರು ಓದಿದರೆ ನನಗೂ ಖುಷಿ. ವಿಶ್ವವಾಣಿ ಪತ್ರಿಕೆಯ ಅಂಕಣದಲ್ಲಿ ಇವುಗಳನ್ನು ಪ್ರಕಟಿಸಿದ ಶ್ರೀ ವಿಶ್ವೇಶ್ವರ ಭಟ್ಟರಿಗೂ, ಮೂವತ್ತು ಲೇಖನ ಆಗುವುದನ್ನೇ ಕಾಯುತ್ತಾ ಕೂತು ಪುಸ್ತಕ ಮಾಡುವ ಶ್ರೀ ಜಮೀಲರಿಗೂ ನಾನು ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಇನ್ನು ಖರೀದಿಸಿ ಓದುವ ಕನ್ನಡದ ಕಲಿಗಳಿಗಂತೂ ನಾನು ಯಾವಜ್ಜೀವ ಋಣಿ.
-ಗಂಗಾವತಿ ಪ್ರಾಣೇಶ್
ಪುಟಗಳು : 168
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !