Click here to Download MyLang App

ಮುದ್ರಕನ ಸಾಹಿತ್ಯ ನಂಟು (ಇಬುಕ್)

ಮುದ್ರಕನ ಸಾಹಿತ್ಯ ನಂಟು (ಇಬುಕ್)

e-book

ಪಬ್ಲಿಶರ್
ಶೇಷನಾರಾಯಣ
ಮಾಮೂಲು ಬೆಲೆ
Rs. 100.00
ಸೇಲ್ ಬೆಲೆ
Rs. 100.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಕತೆಗಾರ ಶೇಷನಾರಾಯಣ ಶಾಲೆ-ಕಾಲೇಜುಗಳ ಸಾಂಪ್ರದಾಯಿಕ ಶಿಕ್ಷಣ ಪಡೆದವರಲ್ಲ. ಬಾಲ್ಯದಲ್ಲೇ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡು ಅಲ್ಲೇ ಅಕ್ಷರ ಕಲಿತು, ತುಂಬ ಪರಿಶ್ರಮದಿಂದ ಮುಂದೆ ಬಂದವರು. ಅವರ ಸಾಹಿತ್ಯದ ಗಂಭೀರ ಅಧ್ಯಯನ ಹಾಗೂ ಬರಹ ಸಹ ಈ ಅಚ್ಚು-ಮೊಳೆಗಳ ಗದ್ದಲ ಗೋಜುಗಳ ಮಧ್ಯೆಯೇ ಸಾಗಿಬಂದದ್ದು. ಮುದ್ರಕನಾಗಿ
ಅರ್ಧ ಶತಮಾನಕ್ಕೂ ಹೆಚ್ಚುಕಾಲ ದುಡಿದ ಅವರು ಪ್ರಕಾಶಕರಾಗಿ ಇದುವರೆಗೆ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ 1,500ನ್ನು ಮೀರುತ್ತದೆ.

ಕುವೆಂಪು, ಡಿವಿಜಿ, ಗೋವಿಂದ ಪೈ, ನಿರಂಜನ, ಅನಕೃ ಮುಂತಾದ ಸಾಹಿತಿ ದಿಗ್ಗಜರ ಪುಸ್ತಕಗಳನ್ನು ಪ್ರಕಟಿಸುವ ಜತೆ ಜತೆಗೆ ಅವರ ಒಡನಾಟದಿಂದ ನವೋದಯ. ಪ್ರಗತಿಶೀಲ, ನವೃಕಾಲದ ಸಾಹಿತ್ಯದ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದವರು. ಪ್ರೂಫ್‌ ತಿದ್ದುವ ಜತೆಗೆ ಅದನ್ನು ಸಾಹಿತಿಗಳ ಮನೆಗೆ ತಾವೇ ಮುದ್ದಾಂ ಒಯ್ದು ಕೊಟ್ಟು ಅವರೊಂದಿಗೆ ಮಾತುಕತೆಗೆ ಇಳಿದ ಸಂದರ್ಭ ಹಾಗೂ ಅವರ ಅತಿಥ್ಯದ ಸೂಕ್ಷ್ಮ ಅವಲೋಕನವನ್ನು ಇಲ್ಲಿ ಆಪ್ತ ವ್ಯಕ್ತಿ ಚಿತ್ರಗಳಾಗಿ ಬಿಡಿಸಿಟ್ಟಿದ್ದಾರೆ. ಕುವೆಂಪುರಿಂದ ಲಂಕೇಶ್‌ವರೆಗೆ 31 ಸಾಹಿತಿಗಳ ಗುಣ ಸ್ವಭಾವ, ಇತಿ-ಮಿತಿಗಳನ್ನು ಸರಳವಾಗಿ, ಕಲಾತ್ಮಕವಾಗಿ ಕಟ್ಟಿಕೊಡುತ್ತಾರೆ.

ಕಾಮ, ಫುಲ್‌ಸ್ಟಾಪ್‌ನಂತಹ ಮರಿಮೀನುಗಳು ಅದಷ್ಟು ಜಾರಿಕೊಳ್ಳದೆ, ಒಂದಕ್ಷರ ತಪ್ಪಿಲ್ಲದೆ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಶೇಷನಾರಾಯಣ ಇಲ್ಲಿನ ಆಪ್ತ ಚಿತ್ರಣಗಳಲ್ಲಿ ಒಂದು ಶಬ್ದವನ್ನಾದರೂ ವ್ಯಯ ಮಾಡಿದ್ದಾರೆ ಎನಿಸುವುದಿಲ್ಲ. ಆದರೆ ಅವರೇ ಹೇಳಿಕೊಂಡಂತೆ ಒಬ್ಬಿಬ್ಬರನ್ನು ಹೊರತುಪಡಿಸಿ ಕರಾವಳಿ ಹಾಗೂ ಉತ್ತರ ಕರ್ನಾಟಕದ ಪ್ರಕಾಶಕರ, ಸಾಹಿತಿಗಳ ಚಿತ್ರಣ ಇಲ್ಲಿ ಇಲ್ಲ.

 

ಪುಟಗಳು: 117

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !