ಇವರು ದುಷ್ಟರು, ಇವರು ಶಿಷ್ಟರು ಎಂದೇನೂ ನೋಡದೆ ಪ್ರಕೃತಿ ಎಲ್ಲರಿಗೂ ಆಶ್ರಯ ಕೊಡುತ್ತದೆ. ಆದರೆ ದುಷ್ಟರು ಕೂಡಾ ಮಾಡಿದ್ದನ್ನು ಅನುಭವಿಸಲೇ ಬೇಕು ಎನ್ನುವುದು ಪ್ರಕೃತಿಯನ್ನೂ ದುಷ್ಟರನ್ನೂ ನಿರ್ಮಾಣ ಮಾಡಿದ ಭಗವಂತನ ನಿಯಮ. ಇದು ವೀರಪ್ಪನ್ ಕತೆಯಲ್ಲ: ಆದರೆ ಅದನ್ನೇ ಹೋಲುವ ಕಾಡಿನ ಬದುಕನ್ನು ಹೊರಜಗತ್ತಿಗೆ ತೋರಿಸುವ ಪರೋಕ್ಷ ಪ್ರಯತ್ನ ಅಷ್ಟೇ. ಜ್ಞಾನದ ಕೊರತೆ ಇರುವ ಮನುಷ್ಯ ಹೇಗೆ ಮೃಗದಂತೆ ವರ್ತಿಸುತ್ತಾನೆ:ಅನಿವಾರ್ಯತೆ ಎಂತಹ ವಾತಾವರಣ ಸೃಷ್ಟಿಸುತ್ತದೆ; ಹುಟ್ಟುಗುಣದಂತೆ ಪರಿಸರ ಕೂಡ ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಸೂಕ್ಷ್ಮವೂ ಇದರಲ್ಲಿ ಸಿಗಬಹುದು. ಇನ್ನೊಬ್ಬರ ಕಷ್ಟ ಅರ್ಥ ಮಾಡಿಕೊಳ್ಳದವರ ಬದುಕಿನ ಕತೆ-ವ್ಯಥೆಯೂ ಇದರಲ್ಲಿದೆ. ಒಬ್ಬ ವ್ಯಕ್ತಿ ದುಷ್ಟನಾಗಲು ಸಮಾಜದ ಕೊಡುಗೆಯೂ ಕಾರಣವಾಗುತ್ತದೆ ಎನ್ನುವುದನ್ನು ಕೂಡ ಮರೆಯುವಂತಿಲ್ಲ.
ಕತೆಯ ಜೊತೆಗೇ ಪಶ್ಚಿಮ ಘಟ್ಟದ ಚಳಿ, ಮಳೆ, ಬಿಸಿಲು, ಮಂಜು, ಕಷ್ಟ-ನಷ್ಟ, ಗುಡ್ಡ-ಬೆಟ್ಟ, ಪ್ರಾಣಿ-ಪಕ್ಷಿ, ಪರಿಸರಗಳ ಬಗ್ಗೆಯೂ ಒಂದಷ್ಟು ರೋಚಕ ಚಿತ್ರಣ ನೀಡುವ ಉದ್ದೇಶವೂ ಇದರಲ್ಲಿದೆ. ಮಲೆನಾಡಿನಲ್ಲೆ ಹುಟ್ಟಿ ಕಾಡಿನಲ್ಲಿ ಕಳೆದ ಅನುಭವಗಳು ಬೆನ್ನಿಗಿವೆ. ‘ಮಲೆನಾಡಿನ ರೋಚಕ ಕತೆ’ಗಳ ಸರಣಿಯಲ್ಲಿ ಎಲ್ಲವನ್ನೂ ಒಂದೊಂದಾಗಿ ಓದುಗರ ಮುಂದಿಡಲು ಯತ್ನಿಸುತ್ತಿದ್ದೇನೆ.
ಪುಟಗಳು : 240
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !