ಬರೆದವರು: ಡಾ.ಅಜಿತ್ ಹರೀಶಿ
ಪ್ರಕಾಶಕರು: ಮೈಲ್ಯಾಂಗ್ ಬುಕ್ಸ್
Publisher: MyLang Books
ಸುಳಿದಾಡುವ ಗಾಳಿಯಲ್ಲಿ ಒಲಿದು ಬಂದಂತೆ ಬಂದ ನನ್ನ ಗೆಳೆಯ ಡಾ. ಅಜಿತ್ ಹರೀಶಿ ಕೃತಿಗಳ ಒಳಗೆ ದಟ್ಟವಾದ ಮಾನವೀಯ ಸೆಲೆಗಳನ್ನು ನಾನು ಅನೇಕ ಬಾರಿ ಕಂಡಿದ್ದೇನೆ. ಅವರು ಮಿತಭಾಷಿ ಮತ್ತು ಅನೇಕ ಬಾರಿ ಮೌನಿ. ಅಜಿತ್ ಕಥೆಗಳನ್ನು ಓದಿದಾಗಲೆಲ್ಲಾ ನನಗೆ ಅವರ ಮೌನದ ಅರ್ಥ ಏನು ಎಂಬುದು ಈ ಕೃತಿಯಲ್ಲಿ ಗೊತ್ತಾಗಿದೆ.
ಅಜಿತ್ ಅವರ ಕತೆಗಳನ್ನು ಓದುವಾಗ ಮೊದಲು ನನಗೆ ವಿಶಿಷ್ಟವೆನಿಸಿದ್ದು ವಿಷಯಗಳ, ಕಥಾಸೂತ್ರಗಳ, ಮತ್ತು ಪಾತ್ರಗಳ ವೈವಿಧ್ಯ. ಒಳನಾಡಿನ ಹಳ್ಳಿಗಳ, ಸಣ್ಣ ಊರುಗಳ ಬೆಳೆಗಾರರ ಬದುಕಿನಿಂದ ಹಿಡಿದು ನಗರ ಜೀವನದ ಸೂಕ್ಷ್ಮಗಳ ವರೆಗೂ ಅವರ ಕತೆಗಳ ಹರಹು ಸರಾಗವಾಗಿ ಹಬ್ಬುತ್ತದೆ. ನೆಲದ ಸೊಗಡಿನ ಘಮವನ್ನು ಎಲ್ಲಿಯೂ ಕಳೆದುಕೊಳ್ಳದೆಯೇ ಆಧುನಿಕ ಜೀವನದ ತೊಡಕುಗಳ ಬಗ್ಗೆ , ಸೂಕ್ಷ ಪ್ರಶ್ನೆಗಳ ಬಗ್ಗೆಯೂ ಅಪರೂಪದ ಸಂವೇದನೆಯನ್ನು ಅವರು ಮಿಡಿಯುತ್ತಾರೆ. ಕತೆಗಾರರಲ್ಲಿ ಇಂಥ ವಿಸ್ತಾರ ನಿಜಕ್ಕೂ ಅಪರೂಪ. ಹೊರನೋಟಕ್ಕೆ ಎರಡು ತುದಿಗಳಂತೆ ಕಂಡು ಬರುವ ಇವೆರಡು ಜೀವನ ದೃಷ್ಟಿಗಳ ನಡುವೆ ಸೇತುವೆಗಳನ್ನು ಕಟ್ಟಬಲ್ಲ ಅಜಿತ್ ರಂಥ ಕತೆಗಾರರು ಕನ್ನಡಕ್ಕೆ ಇಂದು ನಿಜಕ್ಕೂ ಬೇಕಾಗಿದ್ದಾರೆ.
-ಪವಮಾನ್ ಅಥಣಿ, ಮೈಲ್ಯಾಂಗ್ ಬುಕ್ಸ್
ಪುಟಗಳು: 142
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !