ಸುಳಿದಾಡುವ ಗಾಳಿಯಲ್ಲಿ ಒಲಿದು ಬಂದಂತೆ ಬಂದ ನನ್ನ ಗೆಳೆಯ ಡಾ. ಅಜಿತ್ ಹರೀಶಿ ಕೃತಿಗಳ ಒಳಗೆ ದಟ್ಟವಾದ ಮಾನವೀಯ ಸೆಲೆಗಳನ್ನು ನಾನು ಅನೇಕ ಬಾರಿ ಕಂಡಿದ್ದೇನೆ. ಅವರು ಮಿತಭಾಷಿ ಮತ್ತು ಅನೇಕ ಬಾರಿ ಮೌನಿ. ಅಜಿತ್ ಕಥೆಗಳನ್ನು ಓದಿದಾಗಲೆಲ್ಲಾ ನನಗೆ ಅವರ ಮೌನದ ಅರ್ಥ ಏನು ಎಂಬುದು ಈ ಕೃತಿಯಲ್ಲಿ ಗೊತ್ತಾಗಿದೆ.
"ಆವಿ” ಕಥೆಯ ಶರತ್ ಅಥವಾ ದಿಶಾಗಿಂತ ಸುನೀಲನ ಮೌನ ಹೆಚ್ಚು ಆಪ್ಯಾಯಮಾನವಾಗುತ್ತದೆ. “ಮೂಚಿಮ್ಮ” ಕಥೆಯಲ್ಲಿ ಬಾಂದು ಕಲ್ಲಿನ ಆ ಕಡೆ ಮತ್ತು ಈ ಕಡೆ ಎರಡು ಪುಟ್ಟ ಪುಟ್ಟ ಔಷಧೀಯ ಗಿಡಗಳನ್ನು ಕೈಯಾರೆ ನೆಟ್ಟ ಮೂಚಿಮ್ಮನ ಮೌನ ಹರಿದಾಡುತ್ತದೆ. “ವಿಲಿಪ್ತ”ದ ಗುರೂಜಿ ವರಲೆ ತಿಂದ ಕಾಷ್ಠವಾಗಿ ಆತನ ಮೌನವೇ ಆತನನ್ನು ಒಳಗೊಳಗೆ ತಿಂದು ಮುಗಿಸುತ್ತದೆ. “ದಹನ”ದ ಕನಸಿನ ಸ್ವಾಮಿ ಗಂಗಾಧರನ ಕನಸುಗಳು ಮತ್ತೊಂದು ಮೌನವನ್ನು ಓದುಗನಿಗೆ ಅರ್ಥಪೂರ್ಣವಾಗಿ ದಾಟಿಸುತ್ತದೆ.”ಪತನ”ದ ವಿನಯನ ಬರಹಗಳಲ್ಲಿ ಮೌನವೇ ಕಥೆಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ.”ಜನಾರ್ದನ” ಕಥೆಯಲ್ಲಿ ಜನಾರ್ದನ ಭಟ್ಟರ ಮೌನ ಪುಂಡ ಮಗನನ್ನು ಪರಿವರ್ತಿಸುತ್ತದೆ. “ಬೆಸುಗೆ”ಯ ಸುಮಾ, ಸಿರಿ ಮತ್ತು ಪ್ರಶಾಂತರ ನಡುವಿನ ಪ್ರೀತಿಯ ಸ್ಪರ್ಶದಲ್ಲಿ ತಾನೇ ಮೌನಕ್ಕೆ ಸರಿದ ರೀತಿ ಆಪ್ಯಾಯಮಾನವೆನಿಸುತ್ತದೆ. “ತಾನೊಂದು ಬಗೆದರೆ” ಕಥೆಯಲ್ಲಿ ಸುದೀರ್ಘ ವಿವರಗಳ ನಡುವೆಯೂ ವೆಂಕಟ ತನ್ನ ನಿರೂಪಣೆಯಲ್ಲಿ ಕೊಟ್ಟ ಅಖಂಡ ಮೌನವೊಂದು ನಮ್ಮನ್ನು ದಾಟಿ ಹೋದ ಭಾಸವಾಗುತ್ತದೆ. “ಪರಿವರ್ತನೆ” ಕಥೆಯ ಅನಂತ ಹೆಗಡೇರು ಕಾಲದ ಓಟದಲ್ಲಿ ತಾನೂ ಭಾಗಿಯಾಗಲಾರದೇ ಮೌನ ಸಾಕ್ಷಿಯಾಗಿ ಕೊನೆಗೂ “ಅಪೀ ನಿಧಾನ ಓಡೇ” ಎಂದು ಹೇಳುವಲ್ಲಿಗೆ ಮನಸ್ಸು ಮುದ್ದೆಯಾಗುತ್ತದೆ. “ನಟ’’ ಕಥೆಯಲ್ಲಿ ನಟರಾಜನ ಅಳು ಅವನ ಮನಸ್ಸಿನ ಮೌನದ ಹರಿವಿನಂತೆ ತಾಕುತ್ತದೆ.
ಈ ಕೃತಿಯಲ್ಲಿ ಬಹಳಷ್ಟು ಕಥೆಗಳು ಸಾಗರಸೀಮೆಯ ಲಹರಿಗಳನ್ನು ಢಾಳಾಗಿ ಹರಿಸಿವೆ. ಭರಣಿಯಲ್ಲಿ ಹೊದ್ದು ಮುಚ್ಚಿದ ಅಪ್ಪೆಮಿಡಿಯ ಸೋನೆಯಂತೆ ಘಮ ಇವೆ. ಒಂದೊಂದು ಕಥೆಯೂ ಕಾಯಿ ಹಾಲಿಗೆ ತೊಡೆದೇವು ಮುರುಕಿದಂತೆ ಓದಿನ ರುಚಿಗೆ ನಮ್ಮನ್ನು ಅಣಿಗೊಳಿಸುತ್ತದೆ.
- ಗೋಪಾಲಕೃಷ್ಣ ಕುಂಟಿನಿ
ಅಜಿತ್ ಅವರ ಕತೆಗಳನ್ನು ಓದುವಾಗ ಮೊದಲು ನನಗೆ ವಿಶಿಷ್ಟವೆನಿಸಿದ್ದು ವಿಷಯಗಳ, ಕಥಾಸೂತ್ರಗಳ, ಮತ್ತು ಪಾತ್ರಗಳ ವೈವಿಧ್ಯ. ಒಳನಾಡಿನ ಹಳ್ಳಿಗಳ, ಸಣ್ಣ ಊರುಗಳ ಬೆಳೆಗಾರರ ಬದುಕಿನಿಂದ ಹಿಡಿದು ನಗರ ಜೀವನದ ಸೂಕ್ಷ್ಮಗಳ ವರೆಗೂ ಅವರ ಕತೆಗಳ ಹರಹು ಸರಾಗವಾಗಿ ಹಬ್ಬುತ್ತದೆ. ನೆಲದ ಸೊಗಡಿನ ಘಮವನ್ನು ಎಲ್ಲಿಯೂ ಕಳೆದುಕೊಳ್ಳದೆಯೇ ಆಧುನಿಕ ಜೀವನದ ತೊಡಕುಗಳ ಬಗ್ಗೆ , ಸೂಕ್ಷ ಪ್ರಶ್ನೆಗಳ ಬಗ್ಗೆಯೂ ಅಪರೂಪದ ಸಂವೇದನೆಯನ್ನು ಅವರು ಮಿಡಿಯುತ್ತಾರೆ. ಕತೆಗಾರರಲ್ಲಿ ಇಂಥ ವಿಸ್ತಾರ ನಿಜಕ್ಕೂ ಅಪರೂಪ. ಹೊರನೋಟಕ್ಕೆ ಎರಡು ತುದಿಗಳಂತೆ ಕಂಡು ಬರುವ ಇವೆರಡು ಜೀವನ ದೃಷ್ಟಿಗಳ ನಡುವೆ ಸೇತುವೆಗಳನ್ನು ಕಟ್ಟಬಲ್ಲ ಅಜಿತ್ ರಂಥ ಕತೆಗಾರರು ಕನ್ನಡಕ್ಕೆ ಇಂದು ನಿಜಕ್ಕೂ ಬೇಕಾಗಿದ್ದಾರೆ.
ಸ್ಪಷ್ಟವಾದ ಉಚ್ಛಾರಣೆ ಮತ್ತು ಕತೆಯ ಪ್ರಾದೇಶಿಕತೆಯ ಅನುಗುಣವಾಗಿ ಸುಂದರವಾದ ವಾಚನ. ಪಾತ್ರಗಳಿಗೆ ಅನುಗುಣವಾಗಿ ಧ್ವನಿಯಲ್ಲಿ ಏರಿಳಿತ ಎಲ್ಲವೂ ಉತ್ತಮ ಮಟ್ಟದಲ್ಲಿದೆ.
A
Amritha Shetty
ಕಥಾ ಸಂಕಲನ: ಮೂಚಿಮ್ಮ
ಲೇಖಕರು: ಡಾ. ಅಜಿತ್ ಹರೀಶಿ
ಬಿಡುಗಡೆ : ಮೈಲಾಂಗ್ ಡಿಜಿಟಲ್
ಆಡಿಯೋ ಧ್ವನಿ: ಮಮತಾ ಶೆಟ್ಟಿ
ಲೇಖಕರಾದ ಡಾಕ್ಟರ್ ಅಜಿತ್ ಹರೀಶಿ ಯವರು ಬರೆದ ','ಮೂಚಿಮ್ಮ' ಎನ್ನುವ ಕಥಾ ಸಂಕಲನ ಇತ್ತೀಚಿಗೆ ಯಶಸ್ವಿಯಾಗಿ ಮೈಲಾಂಗ್ ಡಿಜಿಟಲ್ ನಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಓದುಗರಿಗೆ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ . ( ಇಬುಕ್, ಪ್ರಿಂಟ್ ಪ್ರತಿ, ಆಡಿಯೋ ಬುಕ್) ಈ ಕಥಾಸಂಕಲನದ ಕುರಿತು ಅನೇಕ ಓದುಗರು ಬರೆದಂತಹ ವಿಮರ್ಶೆಗಳನ್ನು, ಪರಿಚಯವನ್ನು ನಾವು ಈಗಾಗಲೇ ಓದಿದ್ದೇವೆ. ನಾನು ಈ ಕಥಾಸಂಕಲನದ ಆಡಿಯೋ ಬುಕ್ಕನ್ನು ಖರೀದಿಸಿ, ಅದನ್ನು ಕೇಳಿ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದೇನೆ.
ಈ ಆಡಿಯೋ ಬುಕ್ ಗೆ ಧ್ವನಿ ನೀಡಿದವರು ಮಮತಾ ಶೆಟ್ಟಿಯವರು. ಈ ಕಥಾಸಂಕಲನದ ಹತ್ತು ಕಥೆಗಳು ಬೇರೆ ಬೇರೆ ಸನ್ನಿವೇಶಗಳಿಂದ, ಬೇರೆಬೇರೆ ಭಾವನೆಗಳಿಂದ ಕೂಡಿದ ಕಥಾಹಂದರವಾಗಿದೆ. ಪ್ರತಿಯೊಂದು ಕಥೆಗಳು ವಿ ಭಿನ್ನತೆಯಿಂದ ಕೂಡಿದೆ. ಆ ವಿಭಿನ್ನ ಶೈಲಿಯ ಕಥೆಗಳಿಗೆ ತನ್ನ ಮಧುರವಾದ ಕಂಠದಿಂದ ಕಥೆಗಳಿಗೆ ಜೀವ ತುಂಬಿದ್ದಾರೆ ಮಮತಾ ಶೆಟ್ಟಿಯವರು. ತನ್ನ ಧ್ವನಿಯಿಂದ ಆ ಕಥೆಯ ಭಾವನೆಗಳನ್ನು ಓದುಗನ ಮನಸ್ಸು, ಹೃದಯವನ್ನು ತಟ್ಟುವಲ್ಲಿ ಧ್ವನಿ ಕಲಾವಿದೆ ಮಮತಾರವರು ಯಶಸ್ವಿಯಾಗಿದ್ದಾರೆ ಅನ್ನಿಸಿತು. ಭಾವನೆಗಳ ಏರಿಳಿತವನ್ನು, ಕಥೆಗಳ ಭಾವನೆಗಳೊಂದಿಗೆ ಒಂದಾಗಿ ಧ್ವನಿ ಮತ್ತು ಕಥೆಗೆ ಜೀವತುಂಬಿದ್ದಾರೆ ಎನ್ನಬಹುದು. ಅದರಲ್ಲೂ ಇನ್ನೊಂದು ವಿಶೇಷತೆ ಎಂದರೆ, ಹವ್ಯಕ ಭಾಷೆಯಲ್ಲಿರುವ ಕಥೆಗಳನ್ನು, ಆ ಭಾಷೆ ತನ್ನದೇ ಅನ್ನುವಷ್ಟು ಆ ಭಾಷೆಯ ಹಿಡಿತವನ್ನು ತಮ್ಮ ಧ್ವನಿಯಲ್ಲಿ ರಿಸಿಕೊಂಡು, ಆ ಭಾಷೆಯ ಸೊಗಡು ಮತ್ತು ಆಪ್ತತೆಯನ್ನು ಓದುಗರಲ್ಲಿ ಇನ್ನಷ್ಟು ಹೆಚ್ಚಿಸಿದ್ದಾರೆ. ಈ ಕಥೆಯಲ್ಲಿ ಬೇರೆಬೇರೆ ಅದ್ಭುತ ಸಂದೇಶಗಳನ್ನು ಕೊಡುವ ಪ್ರತೀ ಪಾತ್ರವೂ ನಮ್ಮ ಮನೆಯಲ್ಲಿಯೇ ಅಥವಾ ನಮ್ಮ ಸುತ್ತಮುತ್ತಲೇ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಕತೆಯನ್ನು ಓದುಗನಿಗೆ ತನ್ನ ಧ್ವನಿಯಿಂದ ಮಮತಾ ಶೆಟ್ಟಿಯವರು ಮುಟ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು. ಕಥೆಗೆ ಧ್ವನಿ ನೀಡಲು ಬೇಕಾಗಿರುವ ಎಲ್ಲಾ ರೀತಿಯ ಏರಿಳಿತದ ಹಿಡಿತ, ಮೃದುವಾದ ದ್ವನಿ, ಭಾವನೆಗಳಿಗೆ ಸ್ಪಂದಿಸುವಂತೆ ಧ್ವನಿಯ ಬದಲಾವಣೆ ಇದೆಲ್ಲವೂ ಮಮತಾ ರವರಲ್ಲಿ ಇದೆ. ನಾನು ಈಗಾಗಲೇ ಈ ಧ್ವನಿಯನ್ನು ಆಸ್ವಾದಿಸಿದ್ದೇನೆ. ನೀವು ಕೂಡ ಆಡಿಯೋ ಬುಕ್ ಖರೀದಿಸಿ ಮಮತ ರವರ ಧ್ವನಿಯನ್ನು ಆಸ್ವಾದಿಸಿ. ಇನ್ನಷ್ಟು ಆಡಿಯೋ ಬುಕ್ಕುಗಳು ಅವರ ಧ್ವನಿಯಲ್ಲಿ ಹೊರಬರಲಿ ಎನ್ನುವ ಪ್ರೀತಿಯ ಹಾರೈಕೆ. ವಿಶೇಷವಾಗಿ ಮೈಲ್ಯಾಂಗ್ ತಂಡಕ್ಕೂ ಕೂಡ ಹಾರ್ದಿಕವಾದ ಅಭಿನಂದನೆಗಳು.
A
Amritha Shetty
ಕಥಾ ಸಂಕಲನ: ಮೂಚಿಮ್ಮ
ಲೇಖಕರು: ಡಾ. ಅಜಿತ್ ಹರೀಶಿ
ಬಿಡುಗಡೆ : ಮೈಲಾಂಗ್ ಡಿಜಿಟಲ್
ಆಡಿಯೋ ಧ್ವನಿ: ಮಮತಾ ಶೆಟ್ಟಿ
ಲೇಖಕರಾದ ಡಾಕ್ಟರ್ ಅಜಿತ್ ಹರೀಶಿ ಯವರು ಬರೆದ ','ಮೂಚಿಮ್ಮ' ಎನ್ನುವ ಕಥಾ ಸಂಕಲನ ಇತ್ತೀಚಿಗೆ ಯಶಸ್ವಿಯಾಗಿ ಮೈಲಾಂಗ್ ಡಿಜಿಟಲ್ ನಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಓದುಗರಿಗೆ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ . ( ಇಬುಕ್, ಪ್ರಿಂಟ್ ಪ್ರತಿ, ಆಡಿಯೋ ಬುಕ್) ಈ ಕಥಾಸಂಕಲನದ ಕುರಿತು ಅನೇಕ ಓದುಗರು ಬರೆದಂತಹ ವಿಮರ್ಶೆಗಳನ್ನು, ಪರಿಚಯವನ್ನು ನಾವು ಈಗಾಗಲೇ ಓದಿದ್ದೇವೆ. ನಾನು ಈ ಕಥಾಸಂಕಲನದ ಆಡಿಯೋ ಬುಕ್ಕನ್ನು ಖರೀದಿಸಿ, ಅದನ್ನು ಕೇಳಿ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದೇನೆ.
ಈ ಆಡಿಯೋ ಬುಕ್ ಗೆ ಧ್ವನಿ ನೀಡಿದವರು ಮಮತಾ ಶೆಟ್ಟಿಯವರು. ಈ ಕಥಾಸಂಕಲನದ ಹತ್ತು ಕಥೆಗಳು ಬೇರೆ ಬೇರೆ ಸನ್ನಿವೇಶಗಳಿಂದ, ಬೇರೆಬೇರೆ ಭಾವನೆಗಳಿಂದ ಕೂಡಿದ ಕಥಾಹಂದರ ವಾಗಿದೆ. ತನ್ನ ಧ್ವನಿಯಿಂದ ಆ ಕಥೆಯ ಭಾವನೆಗಳನ್ನು ಓದುಗನ ಮನಸ್ಸು, ಹೃದಯವನ್ನು ತಟ್ಟುವಲ್ಲಿ ಧ್ವನಿ ಕಲಾವಿದೆ ಮಮತಾರವರು ಯಶಸ್ವಿಯಾಗಿದ್ದಾರೆ ಅನ್ನಿಸಿತು. ಭಾವನೆಗಳ ಏರಿಳಿತವನ್ನು, ಕಥೆಗಳ ಭಾವನೆಗಳೊಂದಿಗೆ ಒಂದಾಗಿ ಧ್ವನಿ ಮತ್ತು ಕಥೆಗೆ ಜೀವತುಂಬಿದ್ದಾರೆ ಎನ್ನಬಹುದು. ಅದರಲ್ಲೂ ಇನ್ನೊಂದು ವಿಶೇಷತೆ ಎಂದರೆ, ಹವ್ಯಕ ಭಾಷೆಯಲ್ಲಿರುವ ಕಥೆಗಳನ್ನು, ಆ ಭಾಷೆ ತನ್ನದೇ ಅನ್ನುವಷ್ಟು ಆ ಭಾಷೆಯ ಹಿಡಿತವನ್ನು ತಮ್ಮ ಧ್ವನಿಯಲ್ಲಿ ರಿಸಿಕೊಂಡು, ಆ ಭಾಷೆಯ ಸೊಗಡು ಮತ್ತು ಆಪ್ತತೆಯನ್ನು ಓದುಗರಲ್ಲಿ ಇನ್ನಷ್ಟು ಹೆಚ್ಚಿಸಿದ್ದಾರೆ. ಈ ಕಥೆಯಲ್ಲಿ ಬೇರೆಬೇರೆ ಅದ್ಭುತ ಸಂದೇಶಗಳನ್ನು ಕೊಡುವ ಪ್ರತೀ ಪಾತ್ರವೂ ನಮ್ಮ ಮನೆಯಲ್ಲಿಯೇ ಅಥವಾ ನಮ್ಮ ಸುತ್ತಮುತ್ತಲೇ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಕತೆಯನ್ನು ಓದುಗನಿಗೆ ತನ್ನ ಧ್ವನಿಯಿಂದ ಮಮತಾ ಶೆಟ್ಟಿಯವರು ಮುಟ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು. ಕಥೆಗೆ ಧ್ವನಿ ನೀಡಲು ಬೇಕಾಗಿರುವ ಎಲ್ಲಾ ರೀತಿಯ ಏರಿಳಿತದ ಹಿಡಿತ, ಮೃದುವಾದ ದ್ವನಿ, ಭಾವನೆಗಳಿಗೆ ಸ್ಪಂದಿಸುವಂತೆ ಧ್ವನಿಯ ಬದಲಾವಣೆ ಇದೆಲ್ಲವೂ ಮಮತಾ ರವರಲ್ಲಿ ಇದೆ. ನಾನು ಈಗಾಗಲೇ ಈ ಧ್ವನಿಯನ್ನು ಆಸ್ವಾದಿಸಿದ್ದೇನೆ. ನೀವು ಕೂಡ ಆಡಿಯೋ ಬುಕ್ ಖರೀದಿಸಿ ಮಮತ ರವರ ಧ್ವನಿಯನ್ನು ಆಸ್ವಾದಿಸಿ. ಇನ್ನಷ್ಟು ಆಡಿಯೋ ಬುಕ್ಕುಗಳು ಅವರ ಧ್ವನಿಯಲ್ಲಿ ಹೊರಬರಲಿ ಎನ್ನುವ ಪ್ರೀತಿಯ ಹಾರೈಕೆ
A
Amritha Shetty
ಕಥಾ ಸಂಕಲನ: ಮೂಚಿಮ್ಮ
ಲೇಖಕರು: ಡಾ. ಅಜಿತ್ ಹರೀಶಿ
ಬಿಡುಗಡೆ : ಮೈಲಾಂಗ್ ಡಿಜಿಟಲ್
ಆಡಿಯೋ ಧ್ವನಿ: ಮಮತಾ ಶೆಟ್ಟಿ
ಲೇಖಕರಾದ ಡಾಕ್ಟರ್ ಅಜಿತ್ ಹರೀಶಿ ಯವರು ಬರೆದ ','ಮೂಚಿಮ್ಮ' ಎನ್ನುವ ಕಥಾ ಸಂಕಲನ ಇತ್ತೀಚಿಗೆ ಯಶಸ್ವಿಯಾಗಿ ಮೈಲಾಂಗ್ ಡಿಜಿಟಲ್ ನಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಓದುಗರಿಗೆ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ . ( ಇಬುಕ್, ಪ್ರಿಂಟ್ ಪ್ರತಿ, ಆಡಿಯೋ ಬುಕ್) ಈ ಕಥಾಸಂಕಲನದ ಕುರಿತು ಅನೇಕ ಓದುಗರು ಬರೆದಂತಹ ವಿಮರ್ಶೆಗಳನ್ನು, ಪರಿಚಯವನ್ನು ನಾವು ಈಗಾಗಲೇ ಓದಿದ್ದೇವೆ. ನಾನು ಈ ಕಥಾಸಂಕಲನದ ಆಡಿಯೋ ಬುಕ್ಕನ್ನು ಖರೀದಿಸಿ, ಅದನ್ನು ಕೇಳಿ ನನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದೇನೆ.
ಈ ಆಡಿಯೋ ಬುಕ್ ಗೆ ಧ್ವನಿ ನೀಡಿದವರು ಮಮತಾ ಶೆಟ್ಟಿಯವರು. ಈ ಕಥಾಸಂಕಲನದ ಹತ್ತು ಕಥೆಗಳು ಬೇರೆ ಬೇರೆ ಸನ್ನಿವೇಶಗಳಿಂದ, ಬೇರೆಬೇರೆ ಭಾವನೆಗಳಿಂದ ಕೂಡಿದ ಕಥಾಹಂದರ ವಾಗಿದೆ. ತನ್ನ ಧ್ವನಿಯಿಂದ ಆ ಕಥೆಯ ಭಾವನೆಗಳನ್ನು ಓದುಗನ ಮನಸ್ಸು, ಹೃದಯವನ್ನು ತಟ್ಟುವಲ್ಲಿ ಧ್ವನಿ ಕಲಾವಿದೆ ಮಮತಾರವರು ಯಶಸ್ವಿಯಾಗಿದ್ದಾರೆ ಅನ್ನಿಸಿತು. ಭಾವನೆಗಳ ಏರಿಳಿತವನ್ನು, ಕಥೆಗಳ ಭಾವನೆಗಳೊಂದಿಗೆ ಒಂದಾಗಿ ಧ್ವನಿ ಮತ್ತು ಕಥೆಗೆ ಜೀವತುಂಬಿದ್ದಾರೆ ಎನ್ನಬಹುದು. ಅದರಲ್ಲೂ ಇನ್ನೊಂದು ವಿಶೇಷತೆ ಎಂದರೆ, ಹವ್ಯಕ ಭಾಷೆಯಲ್ಲಿರುವ ಕಥೆಗಳನ್ನು, ಆ ಭಾಷೆ ತನ್ನದೇ ಅನ್ನುವಷ್ಟು ಆ ಭಾಷೆಯ ಹಿಡಿತವನ್ನು ತಮ್ಮ ಧ್ವನಿಯಲ್ಲಿ ರಿಸಿಕೊಂಡು, ಆ ಭಾಷೆಯ ಸೊಗಡು ಮತ್ತು ಆಪ್ತತೆಯನ್ನು ಓದುಗರಲ್ಲಿ ಇನ್ನಷ್ಟು ಹೆಚ್ಚಿಸಿದ್ದಾರೆ. ಈ ಕಥೆಯಲ್ಲಿ ಬೇರೆಬೇರೆ ಅದ್ಭುತ ಸಂದೇಶಗಳನ್ನು ಕೊಡುವ ಪ್ರತೀ ಪಾತ್ರವೂ ನಮ್ಮ ಮನೆಯಲ್ಲಿಯೇ ಅಥವಾ ನಮ್ಮ ಸುತ್ತಮುತ್ತಲೇ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಕತೆಯನ್ನು ಓದುಗನಿಗೆ ತನ್ನ ಧ್ವನಿಯಿಂದ ಮಮತಾ ಶೆಟ್ಟಿಯವರು ಮುಟ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು. ಕಥೆಗೆ ಧ್ವನಿ ನೀಡಲು ಬೇಕಾಗಿರುವ ಎಲ್ಲಾ ರೀತಿಯ ಏರಿಳಿತದ ಹಿಡಿತ, ಮೃದುವಾದ ದ್ವನಿ, ಭಾವನೆಗಳಿಗೆ ಸ್ಪಂದಿಸುವಂತೆ ಧ್ವನಿಯ ಬದಲಾವಣೆ ಇದೆಲ್ಲವೂ ಮಮತಾ ರವರಲ್ಲಿ ಇದೆ. ನಾನು ಈಗಾಗಲೇ ಈ ಧ್ವನಿಯನ್ನು ಆಸ್ವಾದಿಸಿದ್ದೇನೆ. ನೀವು ಕೂಡ ಆಡಿಯೋ ಬುಕ್ ಖರೀದಿಸಿ ಮಮತ ರವರ ಧ್ವನಿಯನ್ನು ಆಸ್ವಾದಿಸಿ. ಇನ್ನಷ್ಟು ಆಡಿಯೋ ಬುಕ್ಕುಗಳು ಅವರ ಧ್ವನಿಯಲ್ಲಿ ಹೊರಬರಲಿ ಎನ್ನುವ ಪ್ರೀತಿಯ ಹಾರೈಕೆ.