ಕಳೆದೊಂದು ದಶಕದಲ್ಲಿ, ಅದರಲ್ಲೂ ಪ್ರಮುಖವಾಗಿ ರಾಷ್ತ್ರೀಯತೆಯ ಮರುವ್ಯಾಖ್ಯಾನದ ಈ ಕಾಲಘಟ್ಟದಲ್ಲಿ ನನ್ನ ಅಭಿರುಚಿಗೆ ಅನುಗುಣವಾಗಿ ಅಥವಾ ವಿರುದ್ಧವಾಗಿ ಜರುಗಿದ ಬಹುತೇಕ ಕ್ರಿಯೆಗಳಿಗೆ ನನ್ನ ಮರುಸ್ಪಂದನೆಯರೂಪದಲ್ಲಿ ನನ್ನ ಈ ಕವನ ಸಂಕಲನದ ಕವಿತೆಗಳು ಹೊರಬಂದಿರುವಂತದ್ದು. ಈ ಎಲ್ಲ ಕವಿತೆಗಳು ರಾಷ್ಟ್ರೀಯತೆ ಸುತ್ತ ಗಿರಕಿ ಹೊಡೆಯುತ್ತವೆ ಅಂತಲ್ಲ. ಈ ಪರಿಸ್ಥಿತಿಯ ಮತ್ತು ಈ ವಾತಾವರಣದಲ್ಲಿ ನಡೆದಂತಹ ಹಲವಾರು ಆಯಾಮದ ಘಟನೆಗಳಿಗೆ ನಾನು ಮಿಡಿದಿದ್ದೇನೆ ಎನ್ನುವುದು ಕಟುಸತ್ಯ.
ಅವುಗಳಲ್ಲಿ, ರೈತ ಚಳುವಳಿ ಇರಬಹುದು, ನಮ್ಮ ದೇಶದ ವಿದೇಶಾಂಗ ವ್ಯವಹಾರ ಇರಬಹುದು ಅಥವಾ ಯಾವುದೋ ಒಂದು ಕಾನೂನಾತ್ಮಕ ಬದಲಾವಣೆ ಇರಬಹುದು ಅಥವಾ ನಮ್ಮ ದೇಶದ, ರಾಜ್ಯದ ಸರ್ಕಾರಗಳ ಆಡಳಿತಾತ್ಮಕ ಉದ್ದೇಶಗಳ ನಿರ್ಧಾರಗಳಿರಬಹುದು ಅಥವಾ ಸಾಮಾಜಿಕ, ರಾಜಕೀಯ ಅಥವಾ ಇತರೇ ಘಟಣೆಗಳೇ ಇರಬಹುದು.. ಇವೆಲ್ಲದಕ್ಕೂ ಕವಿಯ ಸ್ಪಂಧನೆಯ ರೂಪದಲ್ಲಿ ಆಯಾ ಸಂದರ್ಭಕ್ಕನುಸಾರವಾಗಿ ಹೊಮ್ಮಿದ ಭಾವನಾತ್ಮಕ ಮಡಿವಂತಿಕೆ ಇವುಗಳ ವಸ್ತು..
-ಸಿದ್ರಾಮ್ ಪಾಟೀಲ
ಪುಟಗಳು: 140
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !