ಇದು ನಾ ಬರೆದ ಭಾವ ಸಂಕಲನದ ಕಿರುಗುಚ್ಛ. ಕನ್ನಡ ಕವಿಶ್ರೇಷ್ಠ ರೆನಿಸಿದ ಕುವೆಂಪು, ಬೇಂದ್ರೆ, ಅಡಿಗರ್, ಕೆ. ಎಸ್ ನರಸಿಂಹಸ್ವಾಮಿ ಮುಂತಾದವರ ಕಾವ್ಯ ಸ್ಪೂರ್ತಿಯಿಂದ ಪ್ರೇರೇಪಿತನಾಗಿ, ಸುಮಾರು ಒಂದು ವರ್ಷದ ಕಾಲವದಿಯಲ್ಲಿ ಬೇರೆ ಬೇರೆ ಸಮಯದಲ್ಲಿ ಬರೆದ ಕವನಗಳಿವು. ಏಕಾಂತದಲ್ಲಿರುವಾಗ ಮನಸ್ಸನ್ನು ಕಲಕಲೋಸುಗ ಅಲೆಯಾಗಿ ತೇಲಿ ಬಂದ ಸಿಹಿ, ಕಹಿ ನೆನಪುಗಳನ್ನು ಭಾವನುಭವಗಳನ್ನಾಗಿ ಸಂಗ್ರಯಿಸಿ ಬರೆದ ಈ ಕವನಗಳು ಓದುಗರ ಮನಸ್ಸನ್ನು ಭಾವನದಲೆಯಲ್ಲಿ ತೇಲಾಡಿಸುವವು ಎಂಬ ಪೂರ್ಣ ನಂಬಿಕೆಯಿಂದ ಈ ಭಾವಸಂಕಲನವನ್ನು ಓದುಗರಾದ ನಿಮ್ಮಲ್ಲಿ ಅರ್ಪಿಸುತ್ತಿದ್ದೇನೆ. ಭಾವನೆಗಳಿಗೆ ಎಲ್ಲೆಯಂಬುದಿಲ್ಲ, ಮನಸ್ಸು ಹೋದ ಕಡೆಗೆ ಭಾವನೆಗಳು ಚೆಲಿಸಬಲ್ಲವು!. ಗಂಧದ ಕಣಗಳು ಗಾಳಿಯಲ್ಲಿ ಬೆರೆತು ಸುಗಂಧ ಪರಿಮಳವನ್ನು ಚೆಲ್ಲುವಂತೆ, ಅಕ್ಷರದಲ್ಲಿ ಬೆರೆತ ಭಾವನೆಗಳು ಸಹ ಮಧುರ ನೆನಪುಗಳನ್ನು ಮನಸ್ಸಿಗೆ ಉಣಬಡಿಸಬಲ್ಲವು. ಆದ್ದರಿಂದ ಹಳೆಯ ನೆನಪನ್ನು ಹೊತ್ತು ತರುವ ಈ ಕವನಗಳು ಅಲೆ ಅಲೆಯಾಗಿ ನಿಮ್ಮ ಹೃದಯವನ್ನು ಸ್ಪರ್ಶಿಸಲಿ ಎಂದಾರೈಸುತ್ತ ಈ ಕಿರು ಕವನ ಸಂಕಲವನ್ನು ನಿಮ್ಮ ಬಿನ್ನಹಕ್ಕೆ ಅರ್ಪಿಸುತ್ತಿದ್ದೇನೆ. ಈ ಪುಟ್ಟ ಕವನಗುಚ್ಛವು ಓದುಗರಾದ ತಮಗೆ ಮೆಚ್ಚುಗೆಯಾದಲ್ಲಿ ಅದುವೇ ನನ್ನ ಭಾಗ್ಯವೆಂದು ನೆನೆವೆ. ಒಂದು ಮಾತು! ಮೆಚ್ಚುಗೆ ಪ್ರಶಂಸೆಗಳೆಲ್ಲ ನಿಮ್ಮ ಮನದಲ್ಲೇ ಇರಲಿ, ಸಂಕಲನದ ತಪ್ಪು ಒಪ್ಪುಗಳು ಮಾತ್ರ ನನ್ನ ಮನ ಮುಟ್ಟಲಿ.