Click here to Download MyLang App

ಮಾನಸಿಕ ಸಮಸ್ಯೆಗಳಿಗೆ 'ಮನಸ್ಸು' ಇಲ್ಲದ ಮಾರ್ಗ (ಇಬುಕ್)

ಮಾನಸಿಕ ಸಮಸ್ಯೆಗಳಿಗೆ 'ಮನಸ್ಸು' ಇಲ್ಲದ ಮಾರ್ಗ (ಇಬುಕ್)

e-book

ಪಬ್ಲಿಶರ್
ಡಾ|| ಮೀನಗುಂಡಿ ಸುಬ್ರಮಣ್ಯ
ಮಾಮೂಲು ಬೆಲೆ
Rs. 175.00
ಸೇಲ್ ಬೆಲೆ
Rs. 175.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಎಲ್ಲಿಂದಲಾದರೂ ಓದಲು ಪ್ರಾರಂಭಿಸಿದರೆ ಸರಿಯಾಗಿ ಅರ್ಥ ಆಗುವುದಕ್ಕಿಂತ ಹೆಚ್ಚಾಗಿ ಅಪಾರ್ಥ ಅನರ್ಥಗಳೇ ಆಗುವ ಸಂಭವವಿರುವುದರಿಂದ, ದಯಮಾಡಿ, ಈ ಪುಸ್ತಕವನ್ನು ಮೊದಲ ಪುಟದಿಂದ ಅನುಕ್ರಮವಾಗಿ ಓದಿ. ಒಂದು ವಾಕ್ಯದಲ್ಲಿ ಮಂಡಿಸಿದ ವಿಷಯ ಸರಿ ಅಲ್ಲ ಎಂದು ನಿಮಗೆ ಅನಿಸಿದರೆ, ದಯಮಾಡಿ, ಆ ಅಧ್ಯಾಯ ಮುಗಿಯುವವರೆಗೆ ನಿಮ್ಮ ನಿರ್ಣಯವನ್ನು ಕಾಯ್ದಿರಿಸಿ. ಈ ಪುಸ್ತಕದ ವಿಷಯ ಮನಸ್ಸು ಅಥವಾ ಮನಶ್ಶಾಸ್ತ್ರ ಅಲ್ಲ. ಈ ಪುಸ್ತಕ ಬರೆದಿರುವುದು ಮನುಷ್ಯರ ಬಗ್ಗೆ. ಎಂದರೆ ನಮ್ಮ ಬಗ್ಗೆ, ನಮ್ಮ ಸಹವರ್ತಿಗಳ ಬಗ್ಗೆ, ನಮ್ಮ ಸಮಸ್ಯೆಗಳ ಬಗ್ಗೆ, ನಮ್ಮ ಜೀವನ ಶೈಲಿಯ ಬಗ್ಗೆ. ಮಾನಸಿಕ ಸಮಸ್ಯೆಗಳ ಬಗ್ಗೆ ಪ್ರಚಲಿತವಿರುವ ಕೆಲವು ಸಾಂಪ್ರದಾಯಿಕ ಮತ್ತು ಸಾರ್ವತ್ರಿಕ ನಂಬಿಕೆಗಳ ಔಚಿತ್ಯವನ್ನು ನಾನು ಪ್ರಶ್ನಿಸಿದ್ದೇನೆ. ನಾನು ಮಂಡಿಸಿರುವ ವಾದಗಳಿಗೆ, ನಾನು ಎತ್ತಿರುವ ಪ್ರಶ್ನೆಗಳಿಗೆ ಸರಿಯಾದ ಸಾಂಪ್ರದಾಯಿಕ ವೈಜ್ಞಾನಿಕ ಉತ್ತರಗಳು ಇವೆ ಎಂಬ ಅರಿವು ನನಗಿದೆ. ಆದರೆ ಆ ಉತ್ತರಗಳು ಕೇವಲ ಉತ್ತರಗಳಾಗಿಯೇ ಉಳಿಯುತ್ತವೇ ವಿನಾ ಅವುಗಳಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಇಲ್ಲಿನ ವಾದಗಳೆಲ್ಲ ಸಮಸ್ಯೆಯನ್ನು ಪರಿಹಾರ ಮಾಡುವುದು ಹೇಗೆ ಎಂಬ ಚಿಕಿತ್ಸಾ ತಂತ್ರಗಳ ಕುರಿತದ್ದು. 'ತಲೆ ಸರಿ ಇಲ್ಲದವರಿಗೆ ಮಾತ್ರ ಸೈಕಾಲಜಿ' ಎಂಬ ಸಾರ್ವತ್ರಿಕ ಕಲ್ಪನೆ ಪ್ರಬಲವಾಗಿ ಚಲಾವಣೆಯಲ್ಲಿದೆ. ಆದರೆ 'ತಲೆ ಸರಿ ಇರುವವರು' ಕೂಡ ಸೈಕಾಲಜಿ ತಿಳಿದು ತಮ್ಮ 'ಸರಿಯಾದ' ಜೀವನ ಶೈಲಿಯನ್ನು ಇನ್ನಷ್ಟು ಸರಿಮಾಡಿಕೊಳ್ಳಬಹುದು ಎಂಬುದು ವಾಸ್ತವ. ಕನ್ನಡ ಓದುವ ಎಲ್ಲರಿಗೂ ಅರ್ಥವಾಗುವಂತೆ ನಿತ್ಯ ಬಳಕೆಯಲ್ಲಿರುವ ಶಬ್ಧಗಳನ್ನೇ ಉಪಯೋಗಿಸಬೇಕು ಎಂಬ ಮಿತಿ ಹಾಕಿಕೊಂಡು ಬರೆಯಲು ಶುರು ಮಾಡಿದಾಗ 'ಭಾಷಾ ಸಮಸ್ಯೆ' ಎದುರಿಸಬೇಕಾಯಿತು. ಕನ್ನಡದಲ್ಲೇ ಮಾತನಾಡಿ ಚಿಕಿತ್ಸೆ ಪಡೆದ, ಚೆನ್ನಾಗಿ ಇಂಗ್ಲೀಷ್ ಗೊತ್ತಿರುವ ನನ್ನ ಸಮಸ್ಯಾ ವ್ಯಕ್ತಿಗಳೊಡನೆ ಸುಮಾರು ಐದು ವರ್ಷಗಳಿಂದ ಚರ್ಚಿಸಿ, ಪ್ರಯೋಗದಲ್ಲಿ ಸರಾಗವಾಗಿ ಅಂಗೀಕರಿಸಲ್ಪಟ್ಟ ಭಾಷಾ ಸೂತ್ರವನ್ನು ನೀವು ಅಂಗೀಕರಿಸುತ್ತೀರಿ ಎಂದು ಆಶಿಸುತ್ತೇನೆ.

- ಡಾ. ಮೀನಗುಂಡಿ ಸುಬ್ರಮಣ್ಯ.

ಲೇಖಕರ ಭಾಷೆ, ಶೈಲಿ ಹಾಗೂ ವಿಷಯ ಮಂಡನಾ ವಿಧಾನ ಆಕರ್ಷಣೀಯವಾಗಿದೆ. ಪುಸ್ತಕದ ಮೊದಲ ಭಾಗ ‘ಮುಗಿಸಿದ ಯುದ್ಧಗಳು’ ಬಹಳ ಆಕರ್ಷಣೀಯವಾಗಿದ್ದು, ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಕುತೂಹಲ ಕೆರಳಿಸುವ ವೃತ್ತಾಂತಗಳು ಓದುಗರನ್ನು ಮೆಚ್ಚಿಸುತ್ತವೆ. ಈ ಪುಸ್ತಕ ಕನ್ನಡಕ್ಕೆ ಒಂದು ಉತ್ತಮ ಕೊಡುಗೆ.

- ಡಾ. ಸಿ ಆರ್ ಚಂದ್ರಶೇಖರ್

 

ಪುಟಗಳು: 288

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
S
Sudarshan Hegde
Transactional Analysis & Gestalt Therapy explained in very simple way with good flow

ಕನ್ನಡದ ಮಾನಸಿಕ ಆರೋಗ್ಯದ ಪುಸ್ತಕಗಳಲ್ಲಿ ಅತ್ಯುತ್ತಮ ಎನಿಸಿಕೊಳ್ಳುವ ಪುಸ್ತಕ. ವೈಯಕ್ತಿಕವಾಗಿ ನನಗೆ
ಮನೋಚಿಕಿತ್ಸಕನಾಗಲು ಪ್ರೆರೇಪಿಸಿದ ಶಕ್ತಿ ಈ ಪುಸ್ತಕ

C
Customer
Super

Super

C
Customer

Thumba chennagidhe