ಲೇಖಕರು:
ವಿವಿಧ ಲೇಖಕರು
ಕಥೆಗಳ ಆಯ್ಕೆ: ಸಹನ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಬಾಲ್ಯದಲ್ಲಿ ಮಕ್ಕಳ ದೈಹಿಕ ಬೆಳವಣಿಗೆಯಷ್ಟೇ ಅವರ ಮಾನಸಿಕ ಬೆಳವಣಿಗೆಯೂ ಮುಖ್ಯ. ಸಾಹಸೀ ಮನೋಭಾವ, ಪ್ರಯತ್ನ , ಕಷ್ಟ ಸಹಿಷ್ಣುತೆ, ಸತ್ಯಸಂಪನ್ನತೆ ಇತ್ಯಾದಿಗಳು ಮಕ್ಕಳಲ್ಲಿ ಮೂಡಿಸುವಂತೆ ಮಾಡುವಲ್ಲಿ ಕಥೆಗಳ ಪಾತ್ರ ಹಿರಿದು.
ಮಕ್ಕಳಲ್ಲಿ ಕನ್ನಡ ಭಾಷೆಯ ಬಗೆಗೆ ಒಲವು ಮೂಡುವಂತೆ, ಪುಸ್ತಕಗಳಲ್ಲಿ ಆಸಕ್ತಿ ಮೂಡಿಸುವಂತೆ ಓದುವ ಹವ್ಯಾಸವನ್ನು ಬೆಳೆಸುವುದು ನಮ್ಮ ಆಶಯ.
ಈ ಸಂಕಲನದಲ್ಲಿ ಮಕ್ಕಳ ಕುತೂಹಲವನ್ನು ಕೆರಳಿಸುವಂಥ ಕಥೆಗಳನ್ನು ಆರಿಸಿ ಕೊಡಲಾಗಿದೆ. ಈ ಸಂಕಲನದಲ್ಲಿ ಪ್ರಸಿದ್ಧ ಮಕ್ಕಳ ಕಥೆಗಾರರಾದ ನೀಲಾಂಬರಿ, ಪ. ರಾಮಕೃಷ್ಣ ಶಾಸ್ತ್ರಿ , ನವಗಿರಿನಂದ, ಪಳಕಳ ಸೀತಾರಾಮ ಭಟ್ಟ , ಕಮಲಾ ರಾಮಸ್ವಾಮಿ, ಎನ್ಕೆ. ಸುಬ್ರಹ್ಮಣ್ಯ ಮತ್ತು ‘ದತ್ತಾತ್ರಯ’ ಯಲ್ಲಾಪುರ ಇವರ ಕಥೆಗಳು ಸೇರಿವೆ. ಹರಿಶ್ಚಂದ್ರ ಶೆಟ್ಟಿಯವರ ಅಂದವಾದ ಚಿತ್ರಗಳಿಂದ ಕೂಡಿದ ಈ ಕಥೆಗಳು ಮಕ್ಕಳ ಮನರಂಜಿಸಿ ಅವರು ಇನ್ನೂ ಹೆಚ್ಚು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಲಿ.
ಆರ್. ಎಸ್. ರಾಜಾರಾಮ್
ನವಕರ್ನಾಟಕ ಪ್ರಕಾಶನ
ಪುಟಗಳು: 112
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !