ಪ್ರಕಾಶಕರು: ಸಾವಣ್ಣ
Publisher: Sawanna
ಓದಿದವರು: ಪ್ರತಿಬಿಂಬ ತಂಡ
ಆಡಿಯೋ ಪುಸ್ತಕದ ಅವಧಿ : 3 ಗಂಟೆ 39 ನಿಮಿಷ
ಮಹಾಭಾರತ ಒಂದು ಮಹಾಸಾಗರ. ಇಂಡಿಯಾದ ಬಹುತೇಕ ಕತೆ, ಕಾವ್ಯ, ನಾಟಕಗಳು ಹುಟ್ಟಿದ್ದೇ ಮಹಾಭಾರತದ ಸ್ಫೂರ್ತಿಯಿಂದ. ಕಾಲಕಾಲಕ್ಕೆ ಹೊಸದಾಗುವ, ಪ್ರಸ್ತುತವಾಗುವ, ಸಮಕಾಲೀನವಾಗುವ ಗುಣ ಹೊಂದಿರುವ ಮಹಾಭಾರತ ಮತ್ತು ರಾಮಾಯಣಗಳ ಒಳಹೊಕ್ಕು ಅಲ್ಲಿಂದ ಎಲ್ಲರಿಗೂ ಗೊತ್ತಿರುವ ಆದರೆ ಯಾರಿಗೂ ಗೊತ್ತಿರದ ಕತೆಯೊಂದನ್ನು ಹೆಕ್ಕಿ ತರುವುದು ಸಾಹಸದ ಕೆಲಸ. ಅದಕ್ಕೆ ಅಪೂರ್ವ ಪ್ರತಿಭೆಯೂ ಅಸಾಧ್ಯ ತಾಳ್ಮೆಯೂ ಬೇಕು. ಹೊಸ ದೃಷ್ಟಿಕೋನ ಬೇಕು. ಮಹಾಭಾರತವನ್ನು ಎಲ್ಲ ದಿಕ್ಕುದೆಸೆಗಳಿಂದ ನೋಡಿ, ಅದರಿಂದ ಏನೇನನ್ನು ಸ್ವೀಕರಿಸಲು ಸಾಧ್ಯವೋ ಅದನ್ನೆಲ್ಲ ಮಥಿಸಿ ಪಡೆದುಕೊಂಡ ನಂತರವೂ ಎಲ್ಲವನ್ನೂ ತನ್ನಲ್ಲೇ ಉಳಿಸಿಕೊಂಡಿರುವ ಮಹಾಕೃತಿಯನ್ನು ಜಗದೀಶ ಶರ್ಮರು ತಮ್ಮದೇ ಆದ ಹಾದಿಯಿಂದ ಪ್ರವೇಶಿಸುವ ಕೃತಿ ಇದು.
ಈ ಕಾಲದ ಭಾಷೆಯಲ್ಲಿ ಹೇಳುವುದಾದರೆ ಜಗದೀಶ ಶರ್ಮರು ಮಹಾಭಾರತದ ಮೇಲೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ತಮಗೆ ಬೇಕುಬೇಕಾದ್ದನ್ನು ಹೆಕ್ಕಿಕೊಂಡು ಅದನ್ನು ತಮ್ಮ ಪ್ರತಿಭೆಯ ದಾರದಲ್ಲಿ ಪೋಣಿಸಿ ಸುಂದರವಾದ ಕಥಾಹಾರವನ್ನಾಗಿಸಿದ್ದಾರೆ. ಇದರ ಓದು ನಮಗೆ ಅನೇಕ ನೆನಪುಗಳನ್ನು ಮರುಕಳಿಸುತ್ತದೆ. ಅನೇಕ ಹೊಸ ಸಂಗತಿಗಳನ್ನು ತಿಳಿಸಿಕೊಡುತ್ತದೆ. ಮಹಾಭಾರತದ ಒಳಗೆ ಪ್ರವೇಶಿಸಲು ಇರುವ ಅಸಂಖ್ಯ ಹಾದಿಗಳಲ್ಲಿ ಮತ್ತೊಂದು ದಾರಿ ಗೊತ್ತಾಗುತ್ತದೆ.
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.