ಪ್ರಕಾಶಕರು: ಉದಯರವಿ ಪ್ರಕಾಶನ
Publisher: Udayaravi Prakashana
ನಾನು ಸಾಹಿತಿಯಲ್ಲ. ಬರಹಗಾರಳೂ ಅಲ್ಲ. ಬರಿಯ ಸಹೃದಯ ಓದುಗಳಾಗಿರುವೆ. ಈ ಪುಸ್ತಕವೇ ನನ್ನ ಜೀವಮಾನದ ಮೊದಲ ಪ್ರಕಟಿತ ಬರಹ. ಅಣ್ಣ ತೇಜಸ್ವಿಯ ‘ಅಣ್ಣನ ನೆನಪುಗಳು’ ಎಂಬ ಪುಸ್ತಕ ಹೊರ ಬಂದಾಗ, ನನಗೆ ಎಲ್ಲರೂ ತಂದೆಯವರ ನೆನಪು ಬರೆಯಲು ಒತ್ತಾಯಿಸಿದರು. ಎಂದೂ ಬರವಣಿಗೆ ಮಾಡಿಲ್ಲದ ನನಗೆ ಬರೆಯುವ ಮನಸ್ಥಿತಿ ಇರಲಿಲ್ಲ. ತಂದೆಯವರು ತೀರಿಕೊಂಡ ನಂತರ ಅನೇಕ ಸಲ ನಾನು ನನ್ನ ಪತಿ ಚಿದಾನಂದರೊಡನೆ ತಂದೆಯವರ ವಿಷಯವಾಗಿ ಅನೇಕ ವಿಚಾರಗಳು ಸಂದರ್ಭಾನುಸಾರ ಹೇಳುತ್ತಿದ್ದೆ. ಅಂತಹ ಸಮಯದಲ್ಲಿ ಅವರು ಇದನ್ನೆಲ್ಲ ನೀನು ಬರೆದಿಡು ಎಂದು ಹೇಳುತ್ತಿದ್ದರು. ಆದರೂ ನಾನು ಉದಾಸೀನಳಾಗಿದ್ದೆ. ನಾನು ಬರೆಯಬಲ್ಲೆ ಎಂಬ ಯಾವ ಭರವಸೆಯೂ ನನಗೆ ಉಂಟಾಗುತ್ತಿರಲಿಲ್ಲ.
ಈ ಬರಹ ವಿದ್ವತ್ಪೂರ್ಣವಾಗಿ ಕಾವ್ಯ ಭಾಷೆಯಿಂದ ಅಲಂಕೃತಗೊಂಡಿದೆ ಎಂದುಕೊಳ್ಳಬೇಡಿ. ಮಗಳಾಗಿ ಅಪ್ಪಅಮ್ಮನೊಡನೆ ಹೇಗಿದ್ದೆ ಎಂದು ಬರೆದಿದ್ದೇನೆ. ಭಾಷೆಯಲ್ಲಿ ತಪ್ಪಿರಬಹುದು, ಭಾವದಲ್ಲಿ ತೊಡಕಿರಬಹುದು. ಎಲ್ಲವನ್ನೂ ಓದುಗರು ಮನ್ನಿಸುವರಾಗಿ ಭಾವಿಸುವೆ.
ಪುಟಗಳು: 565
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !