Click here to Download MyLang App

Kumaravyasa,  ಕುಮಾರವ್ಯಾಸ (ಇಬುಕ್),  ಸುಜನಾ,    Sujanaa,  Sujana,

ಕುಮಾರವ್ಯಾಸ (ಇಬುಕ್)

e-book

ಪಬ್ಲಿಶರ್
ಸುಜನಾ
ಮಾಮೂಲು ಬೆಲೆ
Rs. 35.00
ಸೇಲ್ ಬೆಲೆ
Rs. 35.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ವಿಮರ್ಶೆಯ ಕಿರುಹೊತ್ತಿಗೆ.

 

ತನ್ನ ಅತಿಮಾನಸ ಪ್ರತಿಭೆಯನ್ನೂ ಭಗವದಿಚ್ಛೆಯ ಲಿಪಿಕಾರ ಮಾತ್ರವನ್ನಾಗಿ ಮಾಡಿಕೊಂಡು ಕಾವ್ಯಸೃಷ್ಟಿಗೆ ತೊಡಗಿದೆ ಅನ್ಯಾದೃಶ ಸತ್ತ್ವದ ಮಹಾಕವಿ ನಮ್ಮ ಕುಮಾರವ್ಯಾಸ. ಕೇವಲ ಕವಿಪ್ರತಿಭೆಯ ದೃಷ್ಟಿಯಿಂದಲೆ ನೋಡಿದರೂ ಇವನು ಪ್ರಾಕೃತಿಕ ಅದ್ಭುತವಾಗಿಯೆ ತೋರುತ್ತಾನೆ. ಅಸಾಧಾರಣ ಪ್ರತಿಭೆ, ಸಂಕೀರ್ಣ ಜೀವನಾನುಭವ, ಸೂಕ್ಷ್ಮ ಮನೋವೈಜ್ಞಾನಿಕ ಜ್ಞಾನ, ತೀವ್ರ ಸಂವೇದನೆಗಳ ಜೊತೆಗೆ ದಿವ್ಯದರ್ಶನದೃಷ್ಟಿಯ ವಿಶೇಷ ಸಂಯೋಗ ವನ್ನು ಈ ಮಹಾಸತ್ತ್ವನಲ್ಲಿ ಕಾಣುತ್ತೇವೆ. ಮಹಾ ವಿಶಾಲಮತಿ ಗಳೂ ವಿರಾಟ್‌ದರ್ಶನಸಂಪನ್ನರೂ ಜಟಿಲ ಲೋಕಾನುಭವ ಸಮೃದ್ಧರೂ ಆದ ಮಹರ್ಷಿ ವ್ಯಾಸರ ಮಾನಸಪುತ್ರನೆನಿಸಿಕೊಳ್ಳುವ ಅತಿಶಿಯ ಸೌಭಾಗ್ಯದ ಪುಣ್ಯಕವಿ ಈತ. ಕಾವ್ಯಸೃಷ್ಟಿಯನ್ನು ಚಾರು ಸೃಷ್ಟಿಮಾತ್ರವಾಗಿ ಭಾವಿಸದೆ ಭಗವದ್‌ಯೋಗವಾಗಿ ಸಂಭಾವಿಸಿ ಅನುಭಾವಿಸಿದ; ಲೌಕಿಕಪಾರಮಾರ್ಥಿಕಗಳ, ಮಾನುಷ ಅತಿಮಾನುಷ ಗಳ, ಮಾನಸ ಅತಿಮಾನಸಗಳ ವ್ಯಾಪಾರಗಳನ್ನು ತನ್ನ ಕಾವ್ಯದಲ್ಲಿ ದಿವ್ಯವಾಗಿ ಸಂಯೋಗಿಸಿದ ಯೋಗಿ ಕವಿಯೀತ. ಮೇಲ್‌ನೋಟಕ್ಕೆ ಹುಚ್ಚು ಭಕ್ತನಂತೆ ಭಾವೋದ್ರಿಕ್ತ ಮಾತಾಳಿಯಂತೆ ಭಾಸವಾಗಿ ಅವಜ್ಞೆಗೂ ಪಾತ್ರನಾಗಬಹುದಾದ ಈ ಬಹು ಜಟಿಲ ವಿರಲ ಸರಳ ಕವಿ, ಸಾವಧಾನದ ಅಭ್ಯಾಸಕ್ಕೆ ನಿರಾವರಣಚೇತನವಾಗಿ, ಭಗವತ್‌ ಚೋದ್ಯವಾಗಿ ಅನುಭೂತವಾದರೆ ಆಶ್ಚರ್ಯವೇನೂ ಇಲ್ಲ. ಹೀಗೆ, ಪ್ರಾರಂಭದಲ್ಲಿ ಸರಲವೆಂಬಂತೆ ತೋರಿ ಗಂಭೀರ ಅನುಭವಕ್ಕೆ ಬಹುಸೂಕ್ಷ್ಮ ಸಂಕೀರ್ಣವಾಗಿ ಪ್ರಜ್ಞಾಗೋಚರವಾಗುವ ಕವಿಗಳು ಕನ್ನಡದಲ್ಲಿ ಬಹಳಷ್ಟು ಜನರಿಲ್ಲ ಎಂದೇ ಹೇಳಬೇಕು.

ಕುಮಾರವ್ಯಾಸ ತನ್ನನ್ನು ವೀರನಾರಾಯಣನ ಲಿಪಿಕಾರನೆಂದು ಪ್ರಜ್ಞಾಪೂರ್ವಕವಾಗಿ ಮಾತ್ರವೆ ಅಂದುಕೊಂಡಿದ್ದರೆ ಅವನ ಈ ಕಾವ್ಯವೆಲ್ಲವೂ ಆಗ ಬುದ್ಧಿ ಜಾತವಾದ ಭಗವದ್‌ತತ್ತ್ವ ಪ್ರದರ್ಶನ ವಾಗುತ್ತಿದ್ದಿತಷ್ಟೆ. ಸುದೈವದಿಂದ, ಅವನು ಅಪ್ರಜ್ಞಾವಶಿಯಾಗಿ, ಅಥವಾ ಭಗವದ್ ಆಜ್ಞಾವಶಿಯಾಗಿದ್ದುದರಿಂದಲೊ ಏನೊ ಈಗಿನ ಅವನ ಕಾವ್ಯ. 'ದರ್ಶನಪ್ರತಿಭೆಯ' ಮಹದ್‌ ಸೃಷ್ಟಿಯಾಗಿ ಮೈದಾಳಿದೆ. ಭಾವಾವೇಶದ ಉದ್ದಾಮತೆಯಿಂದಾಗಿ ಒಮ್ಮೊಮ್ಮೆ ಅಸಾಂಸ್ಕೃತಿಕವೆಂಬ ಭ್ರಾಂತಿಯನ್ನುಂಟುಮಾಡಬಹುದಾದರೂ ಅವನ ದರ್ಶನದೃಷ್ಟಿ ಮಾತ್ರ ಸಾಮಾನ್ಯವಾಗಿ ಎಲ್ಲೂ ಮುಗ್ಗರಿಸು ವುದಿಲ್ಲ; ನಾಲಗೆ ತೊದಲುವುದಿಲ್ಲ. ಬುದ್ಧಿ ಪೂರ್ವಕವಾಗಿ ಅವನೆಲ್ಲೂ, ತಾನಾಗಿ ಸಂಯೋಗಗೊಂಡು ಬಾರದ ಏನೊಂದೂ ತತ್ತ್ವವನ್ನು ನಿಯೋಗಿಸಹೋಗುವುದಿಲ್ಲ. ಆದ್ದರಿಂದಲೆ ಈ ಕಾವ್ಯ ಭಾಗವತ ಪುರಾಣವಾಗಲಿ, ತತ್ತ್ವ ಬಾಷ್ಯವಾಗಲಿ, ಭಾವಾತಿಸಾರದ ಭಕ್ತಿ ಸಾರಾಯವಾಗಲಿ ಆಗಿಲ್ಲ. ಅದೊಂದು ಮಾನುಷ ಅತಿಮಾನುಷಗಳ, ಮಾನಸ ಅತಿಮಾನಸಗಳ, ಪೌರುಷೇಯ ಅಪೌರುಷೇಯಗಳ ಸಂಗಮಕ್ಷೇತ್ರ. ಪೌರುಷವನ್ನು ಅತಿ ಸರಳಗೊಳಿಸದೆ ಅದನ್ನು ಅಪೌರುಷದ ಬೆಲೆಯಿಂದ ಮತ್ತೂ ಸಂಕೀರ್ಣಗೊಳಿಸುವ ಭಕ್ತಿ ಜ್ಞಾನದೀಪ್ತವಾಗಿದೆ ಇಲ್ಲಿ. ಆದ್ದರಿಂದಲೆ ಈ ಕಾವ್ಯ ಯಾವ ಒಂದು ಸರಳವಿವೇಚನೆಗೂ ಒಳಪಡುವುದಿಲ್ಲ.



ಪುಟಗಳು: 50
 
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)