ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ವ್ಯಕ್ತಿಗಳಲ್ಲಿನ ಕೀಳರಿಮೆಗೆ ಕಾರಣಗಳು ಅನೇಕ. ಸಾಮಾನ್ಯವಾಗಿ ಇತರರಿಂದ ಹೀಯಾಳಿಸಲ್ಪಟ್ಟಾಗ, ಸದಾ ಟೀಕೆ - ಬಯ್ಗಳನ್ನು ಎದುರಿಸಿ ಬಾಳಬೇಕಾದ ಸಂದರ್ಭ ಒದಗಿದಾಗ ವ್ಯಕ್ತಿಗೆ ತಾನು ನಿಷ್ಪ್ರಯೋಜಕ - ಏನೂ ಸಾಧಿಸಲಾಗದವ ಎಂಬ ಭಾವನೆ ಬಲವಾಗುತ್ತಾ ಹೋಗಿ ಆತ್ಮವಿಶ್ವಾಸ ಕುಂದತೊಡಗಿ ಜೀವನದಲ್ಲಿ ಭರವಸೆಯನ್ನೇ ತೊರೆದು ಅಂತರ್ಮುಖಿಯಾಗುತ್ತಾನೆ. ಅನೇಕ ಸಾಮಾಜಿಕ-ವೈಯಕ್ತಿಕ ಕಾರಣಗಳಿಂದ ಗುರಿಮುಟ್ಟಲಾಗದೆ ಚಡಪಡಿಸುತ್ತ ಕೀಳರಿಮೆಯಿಂದ ಬಳಲುತ್ತಾನೆ. ಇದೊಂದು ಮಾನಸಿಕ ಸ್ಥಿತಿ. ಇದಕ್ಕೆ ಬಾಲ್ಯದ ಅನುಭವಗಳು ಇನ್ನಷ್ಟು ಕಾರಣವಾಗಿ, ಸರಿಯಾದ ಮಾರ್ಗದರ್ಶಕರಿಲ್ಲದೆ ತಾನೇನು ಮಾಡಬೇಕೆಂಬ ಅರಿವು ಇಲ್ಲದೆ ಒಂದು ರೀತಿಯ ಅನಾಥ ಭಾವ ಕಾಡತೊಡಗುತ್ತದೆ. ಇಂಥ ಸ್ಥಿತಿಯನ್ನು ಮೆಟ್ಟಿ ನಿಲ್ಲುವ ಬಗ್ಗೆ, ಸ್ವ ಸಾಮಥ್ರ್ಯವನ್ನು ಬೆಳೆಸಿಕೊಳ್ಳುವ ಬಗ್ಗೆ ಈ ಕೃತಿಯಲ್ಲಿ ಸವಿವರವಾಗಿ ತಿಳಿಸಲಾಗಿದೆ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !