Click here to Download MyLang App

ಕತೆ ಕತೆ ಕಾರಣ (ಇಬುಕ್)

ಕತೆ ಕತೆ ಕಾರಣ (ಇಬುಕ್)

e-book

ಪಬ್ಲಿಶರ್
ವೈದೇಹಿ
ಮಾಮೂಲು ಬೆಲೆ
Rs. 115.00
ಸೇಲ್ ಬೆಲೆ
Rs. 115.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ವೈದೇಹಿಯವರ ಸ್ತ್ರೀಸಂವೇದನಾಶೀಲತೆ, ಕೇವಲ ಸ್ತ್ರೀಯರ ಬದುಕನ್ನಷ್ಟೇ ಕುರಿತದ್ದಲ್ಲ. ಮನುಷ್ಯರೆಲ್ಲರನ್ನೂ ಕುರಿತದ್ದು. ಅವರು ಕೆಳಸ್ತರಗಳ ಹೆಂಗಸರ ಬಗ್ಗೆ ಏನನ್ನೂ ಬರೆಯಲಿಲ್ಲ ಎಂದು ಕೆಲವರ ಆಕ್ಷೇಪ ಎಂದಿನಿಂದಲೂ ಇದೆ. 'ಬಾಕಿ ಇತಿಹಾಸ' ಹಾಗೂ ಮಂಜಮ್ಮಜ್ಜಿಯ ಕಥೆಗಳನ್ನು ಓದಿದ ಮೇಲೆ ಆ ಸ್ತ್ರೀಯರ ಜೀವನದ ಸ್ತರ ಯಾವುದೆನ್ನಬಹುದು? ಎಲ್ಲ ಬಗೆಯ ಸೈದ್ಧಾಂತಿಕ ಓದುಗಾರಿಕೆಯಿಂದ ಹುಟ್ಟಿದಂಥ ಪ್ರಶ್ನೆಗಳಿಗೆ ಉತ್ತರ ಹೇಳಲು ಯತ್ನಿಸುವುದು ವೈದೇಹಿಯವರ ವಿಧಾನವಲ್ಲ. ಏನನ್ನೇ ಉತ್ತರಿಸುವುದಕ್ಕೂ ಸೃಜನಶೀಲವೂ, ಕಲಾತ್ಮಕವೂ ಆದ ಕತೆಗಾರಿಕೆಯಲ್ಲೇ ಅವರು ಯತ್ನಿಸುತ್ತಾ ಬಂದಿದ್ದಾರೆ. 'ಕತೆ ಕತೆ ಕಾರಣ'ದ ಕಥೆಗಳು ಅವರ ಅಭಿವ್ಯಕ್ತಿಯ ಹಾದಿಯಲ್ಲಿ ಹೇಗೋ ಹಾಗೆ ಕನ್ನಡದ ಕಥನಸಾಹಿತ್ಯದ ಹಾದಿಯಲ್ಲೂ ಒಂದು ಮೈಲಿಗಲ್ಲಾಗಿವೆ ಎಂಬುದು ನನ್ನ ನಂಬಿಕೆ. ಅದು ಎಲ್ಲ ಕನ್ನಡಿಗರದೂ ಆಗಲಿ.

- ಬಿ. ಎನ್. ಸುಮಿತ್ರಾಬಾಯಿ

 

'ಒಂದು ಸೇಬಿನ ಮರದಲ್ಲಿರುವ ಹಣ್ಣುಗಳನ್ನು ಎಣಿಸಬಹುದು.ಆದರೆ ಸೇಬಿನ ಹಣ್ಣಿನ ಒಳಗೆ ಇರುವ ಮರಗಳನ್ನು ಎಣಿಸುವುದು ಮಾತ್ರ ಅಸಾಧ್ಯ' ಎಂದು ಒಂದು ಚೀನೀಗಾದೆ. ಈ ಗಾದೆಯನ್ನು ವೈದೇಹಿಯವರ ಇತ್ತೀಚೆಗಿನ ಕತೆಗಳ ಸಂಕಲನ, 'ಕತೆ ಕತೆ ಕಾರಣ'ಕ್ಕೂ ಅನ್ವಯಿಸಿ, ಇದರಲ್ಲಿ ೧೨ ಕತೆಗಳಿವೆ ಎಂದು ಹೇಳಬಹುದು; ಆದರೆ ಈ ಕತೆಗಳು ಇನ್ನೆಷ್ಟು ಕತೆಗಳನ್ನು ತಮ್ಮೊಳಗೆ ಇರಿಸಿಕೊಂಡಿವೆ ಎಂಬ ವಿಸ್ಮಯ ಈ ಕತೆಗಳನ್ನು ಓದಿದ ನಂತರ ನಮ್ಮಲ್ಲಿ ಉಳಿದೇ ಬಿಡುತ್ತದೆ. ಸಂಕಲನದ ಕತೆಗಳು ನೀಡುವ ಒಳ ನೋಟದ ಮುಖಾಂತರ ಓದುಗ ಆ ಕತೆಗಳನ್ನು ತಾನೇ ಕಲ್ಪಿಸಿಕೊಳ್ಳಬಲ್ಲ.

- ಜಿ.ರಾಜಶೇಖರ

 

ಪುಟಗಳು: 148

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

Customer Reviews

Based on 1 review
0%
(0)
100%
(1)
0%
(0)
0%
(0)
0%
(0)
S
Soumya KS
12 ಕಥೆಗಳ ಸಂಕಲನ

12 ಕಥೆಗಳ ಚಿಕ್ಕ ಪುಸ್ತಕ.
12 ಕಥೆ ಆದ್ರೂ ಎಷ್ಟೋ ಕಥೆಗಳು ಓದಿದ ಅನುಭವ ಆಗತ್ತೆ. ಕಥೆ ಒಳಗೆ ಕಥೆ ಕಥೆ ಒಳಗೆ ಕಥೆ ಎಂಬಂತೆ.
ಈ ಕಥೆಗಳಲ್ಲಿ ಬರುವ ಸರಿಸೋಸತ್ತೆ, ಮಂಜಮ್ಮಜ್ಜಿ, ಶ್ರೀಮತತ್ತೆ ಇವರೆಲ್ಲ ನಮ್ಮ ಸುತ್ತ ಮುತ್ತ ಇರೋ ವ್ಯಕ್ತಿಗಳೇನೋ ಅನ್ನುವಷ್ಟು ಆಪ್ತ ಪಾತ್ರಗಳು.
Infact ಎಲ್ಲ ಕಥೆಗಳು ನಮಗೆ ತಿಳಿದಿರುವ ವ್ಯಕ್ತಿಗಳ ಸುತ್ತ ಮುತ್ತ ಆದ ಘಟನೆಗಳೇ ಅನ್ನೋ ಅಷ್ಟು ನೈಜವಾಗಿದೆ.
ಕೆಲವು ಕಥೆಗಳು ಕುಂದಾಪುರ ಕನ್ನಡದಲ್ಲಿ ಇರುವುದರಿಂದ, ಆ ಕನ್ನಡ ಅರ್ಥ ಆಗಲ್ಲ ಅಂದಲ್ಲಿ ಕಥೆ ಸ್ವಲ್ಪ ಸಪ್ಪೆ ಅನ್ನಿಸಬಹುದು.