ಲೇಖಕರು:
ಡಾ|| ಆರ್. ಶ್ರೀನಿವಾಸನ್
ಎಸ್. ಸೀತಾರಾಮು
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಜಗತ್ತಿನ ಪೀಠ ಭೂಮಿಗಳ ಪೈಕಿ ಕರ್ನಾಟಕವು ಒಂದು. ಭೂಮಿಯ ಆದಿಮ ಸ್ಥಿತಿಯಲ್ಲಿ ರೂಪುಗೊಂಡ ಅತ್ಯಂತ ಪುರಾತನ ಶಿಲೆಗಳು ಇಲ್ಲಿವೆ. ಮುನ್ನೂರು ಕೋಟಿ ವರ್ಷಗಳಿಗೂ ಹಿಂದೆ ಹುಟ್ಟಿದ ಶಿಲೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿವೆ. ಈ ಸುದೀರ್ಘ ಅವಧಿಯಲ್ಲಿ ಈ ನೆಲ ನಿರಂತರವಾಗಿ ಬದಲಾವಣೆ ಹೊಂದಿದೆ. ಅಗ್ನಿ ಶಿಲೆಗಳು ಕೊಚ್ಚಿ ಹೋಗಿ, ಸಾಗರ ತಳ ಸೇರಿ, ಸಂಚಯನ ಶಿಲೆಯಾಗಿ ಪುರ್ನರ್ವಿಸಿವೆ. ನೆಲದಾಳಕ್ಕೆ ಕುಸಿದು ಅಧಿಕ ಒತ್ತಡ, ಉಷ್ಣತೆಯಲ್ಲಿ ರೂಪಾಂತರಣ ಗೊಂಡಿವೆ. ಮಳೆ, ಗಾಳಿ, ಬಿಸಿಲು, ನದಿ, ಒಂದೊಂದೊ ಭೂ ಮೇಲ್ಮೈನ ಚಹರೆಯನ್ನೇ ಬದಲಾಯಿಸಿವೆ. ಈ ಎಲ್ಲ ಪ್ರಕ್ರಿಯೆಯಲ್ಲಿ ನೆಲದ ಮೇಲ್ಮೈಯಲ್ಲಿ ವೈವಿಧ್ಯಮಯ ರೂಪಗಳು ಮೈದಳೆಯುತ್ತವೆ. ಹೀಗೆ ಮೊಡುವ ಆಕೃತಿಗಳು ಮಾನವನ ಅನುಕರಣೆಗೆ ಮೀರಿವೆ. ಕರ್ನಾಟಕದ ಅನೇಕ ಭಾಗಗಳಲ್ಲಿ ಭೂಮಿಯಲ್ಲಿ ಉಂಟಾಗಿರುವ ಅಸಂಖ್ಯಾತ ಬದಲಾವಣೆಗಳು ನೈಸರ್ಗಿಕ ಕಲಾಶಿಲ್ಪವಾಗಿ ಉಳಿದಿವೆ. ಮೈಸೂರಿನ ಚಾಮುಂಡಿಬೆಟ್ಟ ನೆಲದಿಂದ ಮೇಲೆದ್ದು ೭೯ ಕೋಟಿ ವರ್ಷಗಳಾಗಿವೆ. ಆಗ ಹಿಮಾಲಯದ ಪರ್ವತವೇ ಹುಟ್ಟಿರಲಿಲ್ಲ. ಭಾರತ ಉಪಖಂಡ ದಕ್ಷಿಣ ಗೊಳಾರ್ಧದ ಖಂಡಗಳೊಡನೆ ಬೆಸುಗೆ ಯಾಗಿತ್ತು. ದೈತ್ಯ ಪೆಡಂಭೂತಗಳು ಭೊಮಿಯ ಮೇಲೆ ಹುಟ್ಟುತ್ತವೆಂಬ ಸೂಚನೆಗಳು ಆಗ ಇರಲಿಲ್ಲ. ಈ ನೆಲದ ಒಂದೊಂದು ಬಗೆಯ ಶಿಲೆಯಲ್ಲೂ ಭೂಮಿಯ ರೋಚಕ ಚರಿತ್ರೆಯ ಪುಟಗಳು ಅಡಗಿವೆ.
- ವಿಕಿಪೀಡಿಯಾ ಪರಿಚಯ..
ಕರ್ನಾಟಕದ ಅಂತಹ ಭೂ ವೈಜ್ಞಾನಿಕ ವಿಸ್ಮಯಗಳನ್ನು ಈ ಕೃತಿ ಪರಿಚಯಿಸಿದೆ.
ಪುಟಗಳು: 72
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !