Click here to Download MyLang App

ಶಿವರಾಮ ಕಾರಂತರ ಲೇಖನಗಳು ಸಂಪುಟ,  ಬಿ. ಮಾಲಿನಿ ಮಲ್ಯ,   shivram karantha,  shivram karanth shivram karanth,  shivram karant,  shivarm karanth,  Shivarama Karanthara Lekhanagalu Samputa,  shivarama karanta,  shivaram karanth,  B. Malini Malya,

ಶಿವರಾಮ ಕಾರಂತರ ಲೇಖನಗಳು ಸಂಪುಟ - 6 (ಇಬುಕ್)

e-book

ಪಬ್ಲಿಶರ್
ಬಿ. ಮಾಲಿನಿ ಮಲ್ಯ
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಡಾ| ಶಿವರಾಮ ಕಾರಂತರ 90ನೆಯ ವರ್ಷದ ಪೂರ್ತಿ ನೆನಪಿಗಾಗಿ ಅವರಿಗೆ ನಮ್ಮ ಮನ್ನಣೆಯ ದ್ಯೋತಕವಾಗಿ ʼಶಿವರಾಮ ಕಾರಂತ ಪೀಠ'ವನ್ನು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಯಿತು. ಈ ಪೀಠದ ಸ್ಥಾಪನೆಗೆ ಅವಶ್ಯವಿರುವ ಎಲ್ಲಾ ಕ್ರಮಗಳನ್ನು ಪೂರೈಸಿ ಸರಕಾರದಿಂದ ಲಿಖಿತ ಅನುಮೋದನೆ ದೊರೆಯುವ ಹೊತ್ತಿಗೆ ಶಿವರಾಮ ಕಾರಂತರ ಪತ್ರ ಕೈ ಸೇರಿತು. ಕಾರಂತರ ಬಿಡಿ ಲೇಖನಗಳನ್ನೆಲ್ಲಾ ಒಟ್ಟುಗೂಡಿಸಿ ವಿಶ್ವವಿದ್ಯಾನಿಲಯದಿಂದ ಪ್ರಕಟಿಸುವ ಸಾಧ್ಯತೆ ಬಗ್ಗೆ ವಿಚಾರಿಸಿದ್ದರು. ಕಾರಂತ ಪೀಠದಿಂದ ಮೊತ್ತಮೊದಲನೆಯದಾಗಿ ಎತ್ತಿಕೊಳ್ಳಬಹುದಾದ ಇದಕ್ಕಿಂತ ಚೆನ್ನಾದ ಇನ್ನೊಂದು ಕಾರ್ಯವಿಲ್ಲವೆಂದು ಎನಿಸಿ ಶೀಘ್ರವೇ ಅವರ ಸೂಚನೆಯನ್ನು ಸ್ವೀಕರಿಸಿರುವುದಾಗಿ ತಿಳಿಸಿದೆ.

ಕಾರಂತರು ಬರೆದ ಪುಸ್ತಕಗಳ ಸಂಖ್ಯೆ ಸಾಕಷ್ಟಿದೆ. ಅವುಗಳಿಗೆ ಸಲ್ಲಬೇಕಾದ ಗೌರವವೂ ಸಂದಿದೆ. ಆದರೆ ಹಲವಾರು ನಿಯತಕಾಲಿಕೆಗಳಲ್ಲಿ, ಸನ್ಮಾನ ಗ್ರಂಥಗಳಲ್ಲಿ, ಅಪ್ರಕಟಿತ ಲೇಖನಗಳಲ್ಲಿ ಹಂಚಿಹೋದ ಹಾಗೂ ಎಪ್ಪತ್ತು ವರ್ಷಗಳ ಅವರ ಕೃಷಿಯಲ್ಲಿ ಹುಟ್ಟಿಕೊಂಡ ಬಿಡಿಲೇಖನಗಳು ಲೆಕ್ಕಕ್ಕಿಲ್ಲ. ಅವುಗಳನ್ನೆಲ್ಲಾ ಒಂದುಗೂಡಿಸದಿದ್ದರೆ ಅವುಗಳಲ್ಲಿನ ಕಾರಂತದರ್ಶನ ಮುಂದಿನ ತಲೆಮಾರಿಗೆ ಕಾಣೆಯಾಗುವ ಸಂದರ್ಭವೇ ಹೆಚ್ಚು. ಅವುಗಳನ್ನೆಲ್ಲಾ ಒಂದುಗೂಡಿಸಿ ವಿಶ್ವವಿದ್ಯಾನಿಲಯ ಪ್ರಕಟಿಸುವುದು. ಕೇವಲ ಕಾರಂತರಿಗೆ ಮರ್ಯಾದೆ ಮಾಡುವುದಕ್ಕಾಗಿ ಅಲ್ಲ. ಕಾಲಮಾನದ ಬದಲಾವಣೆಗಳಲ್ಲಿ, ಬೆಳವಣಿಗೆಗಳಲ್ಲಿ, ಸಂಘರ್ಷಗಳಲ್ಲಿ ಒಬ್ಬ ಚಿಂತನಶೀಲ ಪ್ರತಿಭಾನ್ವಿತ ಹಾಗೂ ಕಳಕಳಿಯ ವ್ಯಕ್ತಿ ಯಾವ ರೀತಿ ಸ್ಪಂದಿಸಿದ? ಯಾವ ರೀತಿ ವಿಚಾರಿಸಿದ? ಯಾವ ರೀತಿ ಚಿಂತನೆ, ಸ್ಪಂದನೆಯನ್ನು ಬರವಣಿಗೆಗಳಲ್ಲಿ, ಭಾಷಣಗಳಲ್ಲಿ ಅಭಿವ್ಯಕ್ತಿಸಿದ ಎನ್ನುವುದು ನಾಡಿನ ಇತಿಹಾಸದ ದೃಷ್ಟಿಯಿಂದ ಮೌಲಿಕ.

ಈ ಹಿನ್ನೆಲೆಯಲ್ಲಿ ಅವರ ಎಲ್ಲಾ ಬಿಡಿ ಲೇಖನಗಳನ್ನು ಸೇರಿಸಿ, ವಿಂಗಡಿಸಿ ಎಂಟು ಸಂಪುಟಗಳಾಗಿ 3 ವರುಷದ ಅವಧಿಯಲ್ಲಿ ಪ್ರಕಟಿಸಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಈಗ ಹೊರಬರುತ್ತಿರುವುದು ಆರನೆಯ ಸಂಪುಟ. ಈ ಸಂಪುಟವು ಅವರ ಐತಿಹಾಸಿಕ, ರಾಜಕೀಯ ಮತ್ತು ಆರ್ಥಿಕ ವಿಚಾರಧಾರೆಗಳನ್ನೊಳಗೊಂಡಿದೆ. ಅವರು ವಿವೇಚಿಸದ ಕ್ಷೇತ್ರಗಳೇ ಇಲ್ಲ. ನಮ್ಮ ನಾಡಿನ ಚರಿತ್ರೆ, ರಾಜಕೀಯ ಪರಿಸ್ಥಿತಿ, ಎಲ್ಲವಕ್ಕೂ ಮೂಲಾಧಾರವಾಗಿರುವ ಆರ್ಥಿಕತೆ ಇವೆಲ್ಲವೂ ಕಾರಂತರ ಚಿಂತನೆಗೆ ಆಹಾರವಾಗಿದೆ. ಜೀವನದ ವಾಸ್ತವತೆಯನ್ನು ತೆರೆದಿಡುವ ರೀತಿ ನಮ್ಮನ್ನು ಬೆರಗುಗೊಳ್ಳುವಂತೆ ಮಾಡುತ್ತದೆ. ಸಾಹಿತ್ಯೇತರ ವಿಚಾರಗಳಲ್ಲೂ ಬೆಳೆದು ಬಂದಿರುವ ಕಾರಂತರ ವ್ಯಕ್ತಿತ್ವವನ್ನು ಇಲ್ಲಿ ನಾವು ಗುರುತಿಸುತ್ತೇವೆ.

 

ಪುಟಗಳು: 560

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)