Click here to Download MyLang App

ಕಾರಂತರ ಕಾದಂಬರಿಗಳಲ್ಲಿ ದುಡಿಮೆ (ಇಬುಕ್)

ಕಾರಂತರ ಕಾದಂಬರಿಗಳಲ್ಲಿ ದುಡಿಮೆ (ಇಬುಕ್)

e-book

ಪಬ್ಲಿಶರ್
ಕೆ. ಸತ್ಯನಾರಾಯಣ
ಮಾಮೂಲು ಬೆಲೆ
Rs. 90.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಕಾರಂತರ ಕಾದಂಬರಿಗಳ ಕಾಲಕ್ಕೂ ನಾವು ಬದುಕುತ್ತಿರುವ ಇಂದಿನ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಹಾಗಾಗಿ ಆ ಕಾದಂಬರಿಗಳ ಮರು ಓದಿನಿಂದ ಈಗೇನು ಪ್ರಯೋಜನ ಎಂಬ ಪ್ರಶ್ನೆ ಉಚಿತವಾದದ್ದೇ. ಈ ವರ್ಗದ ಜನರ ಬದುಕು, ಹೆಣಗಾಟದ ವಿನ್ಯಾಸ ಯಾವ ಸ್ವರೂಪದ್ದಿರಬಹುದು ಎಂಬುದರ ಬಗ್ಗೆ ಈ ಕಾದಂಬರಿಗಳ ಓದು ನಮ್ಮ ಸಂವೇದನೆಯನ್ನು ಚುರುಕುಗೊಳಿಸುತ್ತದೆ. ಹಾಗೆ ಹದಗೊಂಡ ಸಂವೇದನೆಯ ಮೂಲಕ ಈವತ್ತು ನಮ್ಮೊಡನೆ ಬದುಕುತ್ತಿರುವ ಈ ಜನವರ್ಗದ ಜೀವನ ವಿನ್ಯಾಸವನ್ನು ಗ್ರಹಿಸಲು ನಮ್ಮ ಮನಸ್ಸಿಗೆ, ಆತ್ಮಸಾಕ್ಷಿಗೆ, ಕೊಂಚ ನೆರವಾಗಬಹುದು ಎಂಬ ಸಣ್ಣ ಆಸೆಯೊಂದು ಈ ಪ್ರಯತ್ನದ ಹಿಂದಿದೆ.

ಇಲ್ಲಿ ಚರ್ಚಿಸಿರುವ ಆರೂ ಕಾದಂಬರಿಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿದ ಮೇಲೆ ಮತ್ತೆ ಒಟ್ಟಂದದ ಮಾತುಗಳ ಅವಶ್ಯಕತೆಯ ಬಗ್ಗೆಯೂ ಯೋಚಿಸಿದೆ. ಆದರೆ ದೊಡ್ಡ ಲೇಖಕರ ಎಲ್ಲ ಬರವಣಿಗೆಗಳಲ್ಲೂ ಒಂದಕ್ಕೊಂದಕ್ಕೆ ಸಂಬಂಧವಿರುತ್ತದೆ. ಒಂದು ಕೃತಿ ಇನ್ನೊಂದು ಕೃತಿಯನ್ನು ಬೆಳಗುತ್ತದೆ ಮತ್ತು ವಿಸ್ತರಿಸುತ್ತಿರುತ್ತದೆ. ಕಲಾಕೃತಿಗಳಾಗಿ ಪ್ರತಿಯೊಂದು ಕಾದಂಬರಿಯೂ ಸ್ವಾಯತ್ತವೂ ಹೌದು, ವಿಶಿಷ್ಟವೂ ಹೌದು. ಆದರೆ, ಒಂದಕ್ಕೊಂದು ಪೂರಕವೂ ಹೌದು. ಜೊತೆಗೆ ಕೃತಿ ರಚಿತವಾದ ಕಾಲದ ಬೇರೆ ಲೇಖಕರು, ಕೃತಿಗಳ ಜೊತೆ ಕೂಡ ವಾಗ್ವಾದ ನಡೆಸುತ್ತಿರುತ್ತಾರೆ. ಈ ಎಲ್ಲ ಕಾರಣಕ್ಕಾಗಿ ಒಟ್ಟಂದದ ಮಾತುಗಳ ಅವಶ್ಯಕತೆಯಿದೆಯೆನಿಸಿತು. ನನ್ನ ಒಟ್ಟಂದದ ಮಾತುಗಳನ್ನು ಓದುಗರು ತಮ್ಮ ಒಟ್ಟಂದದ ಅನಿಸಿಕೆಗಳ ಜೊತೆ ಜೊತೆಯಾಗೇ ಗಮನಿಸಬಹುದು.

ಈ ಕಾದಂಬರಿಗಳು ನಾನು ನನ್ನ ಚರ್ಚೆಯಲ್ಲಿ ಸೀಮಿತಗೊಳಿಸಿಕೊಂಡಿರುವ ಹಾಗೆ ಜೀವನದ ಒಂದು ನಿರ್ದಿಷ್ಟ ಸಮಸ್ಯೆಯನ್ನು ಮಾತ್ರ ಗಮನಿಸುವುದಿಲ್ಲ. ಬದುಕನ್ನು ಸಮಗ್ರವಾಗಿ ನೋಡುತ್ತಲೇ ನಾನು ಅಧ್ಯಯನಕ್ಕೆ ಆರಿಸಿಕೊಂಡಿರುವ ಸಮಸ್ಯೆ ಮತ್ತು ವಿದ್ಯಮಾನವನ್ನು ಕೂಡ ಪರಿಶೀಲಿಸುತ್ತದೆ. ಉತ್ತಮ ಕಥನಗಳು ಇರುವುದೇ ಹೀಗೆ. ಓದುಗರು ಈ ವ್ಯತ್ಯಾಸವನ್ನು ಗಮನಿಸಿ, ಈ ರೀತಿಯ ಬರಹದ ಸ್ವರೂಪದಲ್ಲೇ ಅಂತರ್ಗತವಾಗಿರುವ ಮಿತಿಯನ್ನು ಮನ್ನಿಸುತ್ತಾರೆಂದು ನಂಬಿದ್ದೇನೆ. ನನ್ನ ಬರವಣಿಗೆಯೂ ಕೂಡ ಪ್ರತಿ ಕಾದಂಬರಿಯ ವೈವಿಧ್ಯವಾದ ಪದರುಗಳ ಬಗ್ಗೆ ಕೂಡ ಆದಷ್ಟು ಗಮನ ಸೆಳೆಯಲು ಪ್ರಯತ್ನಿಸುತ್ತದೆ.

 

-ಸತ್ಯನಾರಾಯಣ

 

ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !