ಪ್ರಕಾಶಕರು: ಛಂದ ಪುಸ್ತಕ
Publisher: Chanda pusthaka
ಈ ಸಂಕಲನದ ಮುಖ್ಯ ಕತೆ "ಕಾರಂತಜ್ಜನಿಗೊಂದು ಪತ್ರ" ಚಲನಚಿತ್ರವಾಗಿದೆ. ಅತ್ಯಂತ ವಿಭಿನ್ನ ಮತ್ತು ಆಧುನಿಕ ವಸ್ತುಗಳನ್ನು ಬಳಸಿ ಇಲ್ಲಿ ಕತೆಗಾರ ಸಚ್ಚಿದಾನಂದ ಹೆಗಡೆ ಕತೆ ರೂಪಿಸಿದ್ದಾರೆ. ಸಾಕಷ್ಟು ಓದುಗರ ಮೆಚ್ಚುಗೆಯನ್ನು ಪಡೆದ ಈ ಕಥಾಸಂಕಲನ, ಹಲವು ಪ್ರಶಸ್ತಿಗಳನ್ನೂ ಪಡೆದಿದೆ.
ಲೇಖಕರ ಪರಿಚಯ
ಸಚ್ಚಿದಾನಂದ ಹೆಗಡೆ 1976ರಲ್ಲಿ ಉತ್ತರ ಕನ್ನಡ ಜಿಲ್ಲೆ ಇಡಗುಂಜಿಯಲ್ಲಿ ಜನನ. ಮಾರೂಕೇರಿ, ಕರ್ಕಿಯಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರು ಮತ್ತು ಜರ್ಮನಿಯಲ್ಲಿ ತಾಂತ್ರಿಕ ಶಿಕ್ಷಣ. ಪ್ರಾಡಕ್ಟ್ ಡಿಸೈನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಅಮೇರಿಕಾ ಮತ್ತು ಜರ್ಮನಿಯಲ್ಲಿ ಕೆಲವು ಕಾಲ ವೃತ್ತಿ ನಿರ್ವಹಿಸಿದ್ದಾರೆ. ಈಗ ಪತ್ನಿ ವಂದನಾ ಮತ್ತು ಒಂದು ವರ್ಷದ ಮುದ್ದಿನ ಮಗ ಚಿರಂತನ ಜತೆಯಲ್ಲಿ ಬೆಂಗಳೂರಿನಲ್ಲಿ ವಾಸ. ಕನ್ನಡ ಪತ್ರಿಕೆಗಳಲ್ಲಿ ಕತೆಗಳು ಪ್ರಕಟವಾಗಿವೆ, ಬಹುಮಾನ ಪಡೆದಿವೆ. ‘ಕಾರಂತಜ್ಜನಿಗೊಂದು ಪತ್ರ’ ಕತೆ ಚಲನಚಿತ್ರವಾಗಿದೆ.
ಪುಟಗಳು: 160
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !