ಬರಹಗಾರ: ಪೂರ್ಣಚಂದ್ರ ತೇಜಸ್ವಿ
ಇಂದು ಹುಲಿಗಳು ನಮಗೆ ಪ್ರಾಣಿ ಸಂಗ್ರಹಾಲದಲ್ಲಿ ಮಾತ್ರ ಕಾಣುತ್ತವೆ. ಕಾಡು ನಾಶವಾದಂತೆ ಹುಲಿಗಳ ಪ್ರಮಾಣವೂ ಕುಸಿದಿದೆ. ಆದರೆ ಹಿಂದೆ ಹುಲಿಗಳು ಅಪಾರ ಪ್ರಮಾಣದಲ್ಲಿ ಇದ್ದಾಗ ಮತ್ತು ಅವು ಆಕಸ್ಮಿಕವಾಗಿಯೋ, ಹಸಿವಿನಿಂದಲೋ ನರಭಕ್ಷಕರಾಗಿ ಮನುಷ್ಯರನ್ನು ಕಾಡಿದಾಗ ಅಂತಹ ಹುಲಿಯನ್ನು ಬೇಟೆ ಮಾಡಿ ಜನರಿಗೆ ರಕ್ಷಣೆ ಕೊಟ್ಟವರು ಆ ಕತೆಯನ್ನು ರೋಚಕವಾಗಿ ಬಣ್ಣಿಸಿದರೆ ಹೇಗಿರುತ್ತೆ?
ಅಂತಹದೊಂದು ಸರಣಿಯೇ ಕೆನೆತ್ ಅಂಡರ್ಸನ್ ಅವರ ಅನುಭವಗಳ ಸಂಗ್ರಹವನ್ನು ಕನ್ನಡದ್ದೇ ನೆಲೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಭಾವಾನುವಾದ ಮಾಡಿದಾಗ ಹುಟ್ಟಿದ ಕಾಡಿನ ಕತೆಗಳ ಸರಣಿ. ಇಲ್ಲಿ ತೇಜಸ್ವಿ ಅವರು ಚಿತ್ರಿಸಿರುವ ಕಾಡು, ಕಾಡಿನ ಪಾತ್ರಗಳು, ಕಾಡಂಚಿನ ಊರಿನ ಬದುಕು ಎಲ್ಲವೂ ಓದುಗರ ಅಪಾರ ಮನ್ನಣೆ ಗಳಿಸಿವೆ.
ನಾಲ್ಕು ಸರಣಿಯಲ್ಲಿ ಮೂಡಿದ ಈ ಕಾಡಿನ ಕತೆಗಳಲ್ಲಿ ಇದು ಮೊದಲನೆಯದ್ದು. ಈಗ ಓದಿ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ ಮೈಲ್ಯಾಂಗ್ ಆಪ್ ಮೂಲಕ
ಪುಟಗಳು: 88
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !