ಲೇಖಕರು:
ಎಸ್. ಆರ್. ವಿಜಯಶಂಕರ
ಸಂಪಾದಕ : ಡಾ।। ಪ್ರಧಾನ್ ಗುರುದತ್ತ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಡಾ|| ಕೆ. ವಿ. ತಿರುಮಲೇಶ್ ಕನ್ನಡ ನಾಡು ಕಂಡಿರುವ ಅಪರೂಪದ ಸಾಹಿತ್ಯಿಕ ಮತ್ತು ವಿದ್ವತ್‍ಪೂರ್ಣ ಪ್ರತಿಭೆ. ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಡೀನ್ ಆಗಿ ನಿವೃತ್ತರಾದ ಅವರು ಕಾವ್ಯ, ಕತೆ, ಕಾದಂಬರಿಗಳಲ್ಲದೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿರುವ ಅವರು ಸವ್ಯಸಾಚಿ ಬರಹಗಾರರು. ಅಪ್ಪಟ ಆಧುನಿಕ ಬರಹಗಾರರಾದರೂ ತಿರುಮಲೇಶ್ ಮನುಷ್ಯರೆಲ್ಲರೂ ಭಾವುಕತೆ ಮತ್ತು ರಮ್ಯತೆಯಿಂದ ಹೊರತಲ್ಲ ಎಂಬ ವಾಸ್ತವ ಪ್ರಜ್ಞೆಯಿಂದಲೂ ಬದುಕನ್ನು ಅವಲೋಕಿಸುವವರು. ಅವರು ತಮ್ಮ ಕಾವ್ಯದಲ್ಲಿ ಮನುಷ್ಯ ಬದುಕಿನ ಸಾಮಾನ್ಯತೆಯ ಆರಾಧಕ.
ಕೆ. ವಿ. ತಿರುಮಲೇಶ್ ಅವರ ಕುರಿತು ಈ ಕೃತಿಯನ್ನು ರಚಿಸಿರುವ ಶ್ರೀ ಎಸ್. ಆರ್. ವಿಜಯಶಂಕರ ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರು. ವೃತ್ತಿಯಿಂದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಇವರು ತಮ್ಮ ವಿಮರ್ಶಾ ಬರಹಗಳಲ್ಲದೆ ಅಂಕಣಕಾರರಾಗಿಯೂ ಪರಿಚಿತರಾಗಿದ್ದಾರೆ. ನವ್ಯ ಹಾಗೂ ನವ್ಯೋತ್ತರ ಕ್ಷೇತ್ರಗಳಲ್ಲಿ ಹಾಗೂ ಭಾಷೆ, ಭಾಷಾ ವಿಜ್ಞಾನ, ಅನುವಾದ ಮುಂತಾದ ಹಲವು ಕ್ಷೇತ್ರಗಳಿಗೆ ಕಾಣಿಕೆಯನ್ನು ನೀಡಿರುವ ಕೆ. ವಿ. ತಿರುಮಲೇಶ್ ಅವರ ಅಧ್ಯಯನಕ್ಕೆ ಬಹು ಉಪಯುಕ್ತವಾಗಬಲ್ಲ ಒಳನೋಟಗಳಿಂದ ಕೂಡಿದ ವಿದ್ವತ್‍ಪೂರ್ಣ ಕೃತಿಯೊಂದನ್ನು ವಿಜಯಶಂಕರ ರಚಿಸಿದ್ದಾರೆ.
ಪುಟಗಳು: 136
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !