ಲೇಖಕರು:
ಸಂಪಾದಕ ಡಾ।। ನಾ. ಸೋಮೇಶ್ವರ
ಲೇಖಕ ಡಾ|| ಮಹಾಬಲೇಶ್ವರ ರಾವ್
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ವಿದ್ಯೆಯಿಲ್ಲದೆ ಮತಿಹೀನರಾದೆವು, ಮತಿಯಿಲ್ಲದೆ ನೀತಿಹೀನರಾದೆವು
ನೀತಿಯಿಲ್ಲದೆ ಗತಿಹೀನರಾದೆವು, ಗತಿಗೆಟ್ಟು ಹಣವಿಲ್ಲದೆ ನರಳಿದೆವು
ಹಣವಿಲ್ಲದೆ, ಬದುಕನ್ನು ನಡೆಸಲಾಗದೆ ಶೂದ್ರರೆಲ್ಲ ಚಡಪಡಿಸಿದರು
ಅವಿದ್ಯಾ ಅನರ್ಥ ಪರಂಪರೆಗೆ ತುತ್ತಾಗಿ ನಿರಂತರ ನರಳುತ್ತಿರುವೆವು
ಜ್ಯೋತಿ ಬಾ ಫುಲೆಯವರು ತಮ್ಮ ಮಡದಿ ಸಾವಿತ್ರಿಬಾಯಿ ಫುಲೆಯವರಿಗೆ ಶಿಕ್ಷಣವನ್ನು ನೀಡಿ 1847ರಲ್ಲಿ ಮಹಾರಾಷ್ಟ್ರದ ಮೊದಲ ಶಿಕ್ಷಕಿಯನ್ನಾಗಿ ಮಾಡಿದರು. 1848ರಲ್ಲಿ ಹೆಣ್ಣು ಮಕ್ಕಳಿಗಾಗಿ "ಕನ್ಯಾಪಾಠಶಾಲೆ"ಯನ್ನು ಆರಂಭಿಸಿದರು. 1854ರಲ್ಲಿ ಬ್ರಾಹ್ಮಣ ವಿಧವೆಯರಿಗಾಗಿ ಆಶ್ರಮವನ್ನು ಸ್ಥಾಪಿಸಿದರು. 1864ರಲ್ಲಿ ವಿಧವೆಯರ ಮರುಮದುವೆಗೆ, ಸರಳ ಮದುವೆಗೆ ಪೆÇ್ರೀತ್ಸಾಹವನ್ನು ನೀಡಿದರು. 1873ರಲ್ಲಿ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಮಹಾರಾಷ್ಟ್ರದ ಸಾರ್ವಜನಿಕರು ಜ್ಯೋತಿ ಬಾ ಫುಲೆಯವರ 60ನೆಯ ಜನ್ಮದಿನದಂದು, ಅಂದರೆ ಮೇ 11, 1888ರಂದು ಸಾರ್ವಜನಿಕವಾಗಿ ಅಭಿನಂದಿಸಿ ಅವರನ್ನು "ಮಹಾತ್ಮ" ಎಂದು ಕರೆದರು. ಜನಸಾಮಾನ್ಯರಿಂದ "ಮಹಾತ್ಮ" ಎಂದು ಕರೆಯಿಸಿಕೊಂಡ ಮತ್ತೊಂದು ಉದಾಹರಣೆಯು ಜಗತ್ತಿನಲ್ಲಿ ದೊರೆಯುವುದಿಲ್ಲ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !