ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ಅನುಭವ ಕಥನ
ನಿಮ್ಮ ಪ್ರಕಾರ ಬೆಂಗಳೂರು ಅಂದರೇನು? ಹಾಗಂತ ಒಂದು ದಿನ ಗುರುಗಳನ್ನು ಕೇಳಿದ್ದೆ.
‘ಇದು ಇಂದ್ರಪ್ರಸ್ಥದಲ್ಲಿ ಮಯ ನಿರ್ಮಿಸಿದ ಪಾಂಡವರ ಅರಮನೆಯ ಹಾಗಿದೆ. ನೀರು ಅಂತ ಬಟ್ಟೆ ಎತ್ತಿಕೊಂಡು ಕಾಲಿಟ್ಟರೆ, ಅಲ್ಲಿ ನೀರಿರುವುದಿಲ್ಲ. ನೀರಿಲ್ಲ ಅಂತ ಮುಂದೆ ಸಾಗಿದರೆ ಕೊಳದೊಳಗೆ ಬಿದ್ದಿರುತ್ತೇವೆ. ಬಾಗಿಲು ಎಂದು ನುಗ್ಗಿದರೆ ಗೋಡೆಗೆ ತಲೆ ಚಚ್ಚಿಕೊಳ್ಳುತ್ತೇವೆ. ಬಾಗಿಲಿಲ್ಲ ಅಂತ ಅಂದುಕೊಂಡ ಕಡೆ ಬಾಗಿಲಿರುತ್ತದೆ. ನಾವು ದುರ್ಯೋಧನನಂತೆ ಎಡವುತ್ತಾ, ಬೀಳುತ್ತಾ ಹೋಗುವುದು ಮೇಲೆ ನಿಂತು ನೋಡುವವರಿಗೆ ತಮಾಷೆಯಾಗಿ ಕಾಣಿಸುತ್ತದೆ. ದ್ರೌಪದಿ ನಗುತ್ತಲೇ ಇರುತ್ತಾಳೆ. ನಾವು ಕನಲುತ್ತಿರುತ್ತೇವೆ’ ಅಂದಿದ್ದರು ಅವರು.
ಬೆಂಗಳೂರಿಗೆ ಅದಕ್ಕಿಂತ ಒಳ್ಳೆಯ ವರ್ಣನೆ ಬೇಕಿಲ್ಲ. ಅದು ಯಾವಾಗ ಅಪ್ಪಿಕೊಳ್ಳುತ್ತದೆ, ಯಾವಾಗ ಸದೆಬಡಿಯುತ್ತದೆ ಅನ್ನುವುದು ಗೊತ್ತಾಗುವುದೇ ಇಲ್ಲ. ಮೇಲೇರುವವರನ್ನು ಅದು ಹಿಡಿದು ಕೆಳಕ್ಕೆಳೆಯುತ್ತಲೇ ಇರುತ್ತದೆ. ಗುಪ್ತವಾಗಿ ಇರಬೇಕಾದದ್ದನ್ನು ಜಗಜ್ಜಾಹೀರು ಮಾಡುತ್ತದೆ. ಪ್ರಚಾರಕ್ಕೆ ಅರ್ಹವಾದದ್ದನ್ನು ಗುಟ್ಟಾಗಿಡುತ್ತದೆ. ಅಹಂಕಾರಿಗಳನ್ನು ಸದೆ ಬಡಿಯಲಿಕ್ಕೆಂದೇ ಒಂದು ಅಜ್ಞಾತ ಸೇನೆಯನ್ನು ಅದು ಇಟ್ಟುಕೊಂಡಿರುತ್ತದೆ. ಆ ಸೇನೆಯಲ್ಲಿ ಅಧಿಕಾರಿಗಳೂ, ಪತ್ರಕರ್ತರು, ಲಾಯರುಗಳೂ, ಪೊಲೀಸ್ ಅಧಿಕಾರಿಗಳೂ, ಕಾನೂನು ಮಾಡುವವರೂ, ರಾಜಕಾರಣಿಗಳೂ, ಕಡುಬಡವರೂ, ಗೂಂಡಾಗಳೂ, ಹೋರಾಟಗಾರರೂ- ತಮಗೇ ಗೊತ್ತಿಲ್ಲದ ಹಾಗೆ ಸೇರಿಕೊಂಡಿರುತ್ತಾರೆ. ಎಷ್ಟೋ ಸಲ ನಮ್ಮ ಯುದ್ಧ ಯಾರ ವಿರುದ್ಧ ಅನ್ನುವುದೇ ಗೊತ್ತಿರುವುದಿಲ್ಲ.
ಹಾಗಿದ್ದರೆ ನಾವು ಮಹಾನಗರವನ್ನು ದ್ವೇಷಿಸುತ್ತೇವಾ? ಪ್ರೀತಿಸುತ್ತೇವಾ?
ಬೆಂಗಳೂರು ಎಂಬ ಮಾಯಾವಿಯ ಕುರಿತು ಜೋಗಿಯವರ ಅನುಭವ ಕಥನ ಈ ಪುಸ್ತಕ.
ಪುಟಗಳು: 152
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !