ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ನಾಟಕ
ಬೆಂಗಳೂರಿಗೆ ಅಂಟಿಯೂ ಅಂಟದೇ ಇದ್ದ ವೈಯೆನ್ಕೆ ಅವರಿಗೆ ಬೆಂಗಳೂರಿನ ಮಧ್ಯಮ ವರ್ಗಗಳ ಕುರಿತು ಅಪಾರವಾದ ನಂಬಿಕೆ ಮತ್ತು ಅಪನಂಬಿಕೆ. ಅವರು ಸದಾ ಹೇಳುತ್ತಿದ್ದ ಮಾತೊಂದು; ಬೆಂಗಳೂರಲ್ಲಿ ಮಧ್ಯಮ ವರ್ಗ ಎದ್ದು ನಿಂತರೆ ವ್ಯವಸ್ಥೆ ನಾಶವಾಗುತ್ತೆ. ವ್ಯವಸ್ಥೆ ನಾಶವಾದರೆ ಸರ್ಕಾರ ಉರುಳುತ್ತೆ, ರೌಡಿಗಳು ಸರ್ವನಾಶ ಆಗುತ್ತಾರೆ, ಭ್ರಷ್ಟರು ತೊಲಗುತ್ತಾರೆ. ಆದರೆ, ಮಧ್ಯಮ ವರ್ಗ ಇಲ್ಲಿ ನಿರಾತಂಕದ ಭಾವವನ್ನು ಹುಟ್ಟಿಸಿ ಸುಮ್ಮನುಳಿಯಿತು. ಕೆಳಮಧ್ಯಮ ವರ್ಗವು ತನ್ನ ವಾಚಾಳಿತನದಲ್ಲಿ, ಮೇಲು ಮಧ್ಯಮವರ್ಗವು ತನ್ನ ಮೌನದಲ್ಲಿ ರಾಜಕೀಯವನ್ನು ನಿಯಂತ್ರಿಸಿತು.ಇದನ್ನೆಲ್ಲ ನಾಟಕದ ರೂಪದಲ್ಲಿ ಹಿಡಿಯುವ ಪ್ರಯತ್ನ ಜೋಗಿಯವರ ಈ ಪುಸ್ತಕದ್ದು.
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !