ಪ್ರಕಾಶಕರು: ಸಾವಣ್ಣ
Publisher: Sawanna
ಹಲವು ಸಂದರ್ಭಗಳಲ್ಲಿ ನಮಗೆ ನಾವೇ ಶತ್ರುಗಳಾಗಿರುತ್ತೇವೆ. ನಮ್ಮನ್ನು ನಾವು ಗೆಲ್ಲುವುದನ್ನು ಕಲಿತಲ್ಲಿ ನಮ್ಮೆದುರು ಇರುವ ಸಮಸ್ಯೆಗಳನ್ನು ಪರಿಹರಿಸುವುದು ನಮಗೆ ಸುಲಭವಾಗುತ್ತದೆ.
ನಮ್ಮೆಲ್ಲರ ಬಹುತೇಕ ಬದುಕಿನ ಸಂಕಟಗಳ ಮೂಲಕಾರಣ ನಾವು ಮತ್ತು ನಮ್ಮ ಬದುಕು ಬೇರೆಯವರ ನಿಯಂತ್ರಣದಲ್ಲಿ ಇರುವುದು. ಅಥವಾ ಬೇರೆಯವರ ಬದುಕನ್ನು ನಿಯಂತ್ರಿಸಲು ಹರಸಾಹಸ ಮಾಡುವುದೇ ಆಗಿದೆ.
ವಾಸ್ತವದಲ್ಲಿ ನಮ್ಮನ್ನು ನಿಯಂತ್ರಣಕ್ಕೆ ಒಳಪಡಿಸಲು ಸಾಧ್ಯವೆನ್ನುವುದೇ ಅಸಾಧ್ಯ ಮತ್ತು ದೊಡ್ಡ ಭ್ರಮೆ.
ಹೀಗಿರುವಾಗ ಬೇರೆಯವರ ಬದುಕನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವೇ?
ಹಿಂದೆ ನಡೆದ, ಈಗ ನಡೆಯುವ, ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ನಾವು ತುಂಬಾ ಯೋಚನೆ ಮಾಡುವುದರಿಂದ ಬದುಕಿನಲ್ಲಿ ಬೆಳಕು ಕಾಣುವುದು ಕಷ್ಟಸಾದ್ಯ. ಸಮಸ್ಯೆಗಳನ್ನು ಸೃಷ್ಟಿಮಾಡಿಕೊಂಡು ಅದರ ಬಗ್ಗೆಯೇ ಯೋಚಿಸುತ್ತಾ ಮತ್ತಷ್ಟು ಸಮಸ್ಯೆಗಳನ್ನು ಕಂಡುಕೊಳ್ಳುವುದೇ ಮಾನವ ಸಹಜಗುಣ. ಭೂತಕಾಲವು ನಮಗೆ ನಮ್ಮ ಗುರುತನ್ನು ನೀಡುವುದರಿಂದಾಗಿ ನಾವು ಭೂತಕಾಲದಲ್ಲಿ ಬದುಕುವ ಮೂಲಕ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಹಾಗೂ ಉಳಿಸಿಕೊಳ್ಳುತ್ತೇವೆ. ನಮಗೆ ಯಾವುದೇ ಉಪಯೋಗಕ್ಕೆ ಬರದೇ ಇದ್ದರೂ ಕೂಡ ಏಕೆ ಇಟ್ಟುಕೊಂಡೇ ಮುಂದುವರೆಯುತ್ತೇವೆ ಎಂಬುದನ್ನು ಪ್ರಾಯಶಃ ಹಾದು ಹೋಗಲು ಬಿಡಿ (Let it Go) ಎಂಬ ಲೇಖನದಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಇದು ನನ್ನ ಅಚ್ಚುಮೆಚ್ಚಿನ ಲೇಖನಗಳಲ್ಲಿ ಒಂದು.
ಈ ಪುಸ್ತಕದಲ್ಲಿ ಬರುವ ಎಲ್ಲಾ ಲೇಖನಗಳು ತುಂಬಾ ಸುಂದರವಾಗಿ ಮೂಡಿಬಂದಿದೆ.
ಇನ್ನೊಂದು ಮುಖ್ಯವಾದ ವಿಚಾರವೇನೆಂದರೆ ರಂಗರಾಜ್ ಚಕ್ರವರ್ತಿ ಅವರು ಎಲ್ಲಿಯೂ ಬೋಧನೆಮಾಡದೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಈ ಪ್ರಯತ್ನಕ್ಕೆ ನಾನು ಶುಭ ಕೋರುತ್ತೇನೆ.
ಈ ಪುಸ್ತಕವು ಹೆಚ್ಚಿನ ಜನರನ್ನು ತಲುಪಲಿ ಎಂದು ನಾನು ಆಶಿಸುತ್ತೇನೆ.
-ಶ್ರೀನಾಥ
ಚಿತ್ರ ನಟ
ಪುಟಗಳು: 112
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !