Click here to Download MyLang App

ಅಮೋಸ್ ಫಾರ್ಚೂನ್ (ಇಬುಕ್) - MyLang

ಅಮೋಸ್ ಫಾರ್ಚೂನ್ (ಇಬುಕ್)

e-book

ಪಬ್ಲಿಶರ್
ಜಯಶ್ರೀ ಭಟ್
ಮಾಮೂಲು ಬೆಲೆ
Rs. 79.00
ಸೇಲ್ ಬೆಲೆ
Rs. 79.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಕಪ್ಪು ಜನಾಂಗದ ಬುಡುಕಟ್ಟು ಸಮುದಾಯದ ರಾಜನೊಬ್ಬ, ಅಮೆರಿಕನ್ನರ ಧಾಳಿಗೆ ಬಲಿಯಾಗಿ, ಅಮೆರಿಕಾ ದೇಶದಲ್ಲಿ ಗುಲಾಮನಾಗಿ ಬದುಕುವ ಪರಿಸ್ಥಿತಿ ಬರುತ್ತದೆ. ಆದರೆ ಅವನು ಧೈರ್ಯದಿಂದ ತನ್ನ ಬದುಕನ್ನು ಎದುರಿಸಿ, ಅನಂತರ ತನ್ನ ದುಡಿಮೆಯಿಂದಲೇ ತನ್ನ ಸ್ವಾತಂತ್ರ್ಯ ಪಡೆದುಕೊಳ್ಳುವ ಮನಮಿಡಿಯುವ ಜೀವನ ಚರಿತ್ರೆ. ಜಯಶ್ರೀ ಭಟ್ ಅವರು ಇದನ್ನು ಯಶಸ್ವಿಯಾಗಿ ಕನ್ನಡಕ್ಕೆ ತಂದಿದ್ದಾರೆ.

ನ್ಯೂಯಾರ್ಕ್‍ನ ಬಫೆಲೋದಲ್ಲಿ ಜನಿಸಿ, ಅಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ನಂತರ ಕೆಲವು ಕಾಲ ಯುರೋಪ್‍ನಲ್ಲಿ ನೆಲೆಸಿದ್ದರು. ಆಗ ಅನೇಕ ಪ್ರವಾಸ ಕಥನಗಳನ್ನು ಅಮೇರಿಕಾದ ನಿಯತಕಾಲಿಕೆಗಳಾದ `ದಿ ಕ್ರಿಶ್ಚಿಯನ್ ಸೈನ್ಸ್’ ಹಾಗೂ `ದಿ ನ್ಯೂಯಾರ್ಕ್ ಟೈಮ್ಸ್ ’ ಮುಂತಾದ ಪತ್ರಿಕೆಗಳಲ್ಲಿ ಬರೆದರು. 1938ರಲ್ಲಿ ಅವರು ತಮ್ಮ ಮೊಟ್ಟ ಮೊದಲ ಪುಸ್ತಕ ಹೊರತಂದರು. 1990 ರ ತನಕ ನಿರಂತರವಾಗಿ ಸುಮಾರು 50 ಪುಸ್ತಕಗಳನ್ನು ಬರೆದರು. ‘ಆಮೋಸ್ ಫಾರ್ಚೂನ್’ ಪುಸ್ತಕವನ್ನು 1950 ರಲ್ಲಿ ಬರೆದು, ನ್ಯೂಬೆರಿ ಮೆಡಲ್ ಪಡೆದರು. ಇದು ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಅನೇಕ ಧೀಮಂತ ವ್ಯಕ್ತಿಗಳ ಆತ್ಮಚರಿತ್ರೆಯನ್ನೂ ಬರೆದಿದ್ದಾರೆ.

ಸೊರಬ ತಾಲೂಕಿನ ಬನದಕೊಪ್ಪದಲ್ಲಿ ಜನಿಸಿದ ಜಯಶ್ರೀ, ಮೊದಲ ಹಂತದ ವಿದ್ಯಾಭ್ಯಾಸ ಮಾಡಿದ್ದು ಬನದಕೊಪ್ಪ ಮತ್ತು ನಿಸರಾಣಿಯಲ್ಲಿ. ಮುಂದೆ ಮೈಸೂರಿನ ಚಾಮರಾಜೇಂದ್ರ ಅಕಾಡೆಮಿಯಲ್ಲಿ ಕಲಾವ್ಯಾಸಂಗ ಮಾಡಿ ಚಿತ್ರಕಲೆಯಲ್ಲಿ ಪದವಿ ಪಡೆದರು. ಕಲಾಸಂರಕ್ಷಣೆಯಲ್ಲಿ ಆಸಕ್ತರಾದ ಇವರು INTACH ನ ಬೆಂಗಳೂರು ಶಾಖೆಯಲ್ಲಿ ತರಬೇತಿಗೆ ಸೇರಿದರು. ಒಂಬತ್ತು ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, 2002 ರಲ್ಲಿ ತಮ್ಮ ಪತಿ ಶ್ರೀ ಚಂದ್ರಹಾಸ ಭಟ್‍ರೊಂದಿಗೆ ಇಂಗ್ಲೆಂಡ್‍ನ ಲಿವರ್‍ಪೂಲ್‍ಗೆ ತೆರಳಿದರು. 2004 ರಲ್ಲಿ ಸಿಂಗಪುರಕ್ಕೆ ಬಂದ ಇವರು, ಅಲ್ಲಿಯೇ ತಮ್ಮ ಕಲಾ ಸಂರಕ್ಷಣಾ ಕೇಂದ್ರವನ್ನು ಸ್ಥಾಪಿಸಿದರು. ಈಗ ಪತಿ ಮತ್ತು ಮಗಳು ನಿಧಿಯೊಡನೆ ಸಿಂಗಪುರದಲ್ಲಿ ನೆಲೆಸಿರುವ ಇವರು, ಕನ್ನಡದ ಪತ್ರಿಕೆಗಳಿಗೆ ಲೇಖನ, ಕತೆಗಳನ್ನು ಬರೆಯುತ್ತಿರುತ್ತಾರೆ. ‘ಮಾವೋನ ಕೊನೆಯ ನರ್ತಕ’ ಎನ್ನುವ ಕೃತಿಯನ್ನು ಈಗಾಗಲೇ ಕನ್ನಡಕ್ಕೆ ಅನುವಾದಿಸಿದ್ದಾರೆ.

 

ಪುಟಗಳು: 88

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !